Ringworm Treatment: ದದ್ದು, ತುರಿಕೆ ಮತ್ತು ರಿಂಗ್ವರ್ಮ್ ನಿಂದ ಪರಿಹಾರ ಪಡೆಯುವುದು ಹೇಗೆ?

Mon, 02 May 2022-1:37 pm,

1. ಕೊಬ್ಬರಿ ಎಣ್ಣೆ - ಕೊಬ್ಬರಿ ಎಣ್ಣೆ ಹಲವು ರೋಗಗಳಿಗೆ ರಾಮಬಾಣ ಔಷಧಿಯಾಗಿದೆ. ಕೊಬ್ಬರಿ ಎಣ್ಣೆಯನ್ನು ಲೆಮನ್ ಗ್ರಾಸ್ ಹಾಗೂ ಎಳ್ಳೆಣ್ಣೆಯೊಂದಿಗೆ ಬೆರೆಸಿ ಈ ಪೇಸ್ಟ್ ಅನ್ನು ತುರಿಕೆ ಇರುವ ಭಾಗಕ್ಕೆ ಅನ್ವಯಿಸಿ. ಇದರಿಂದ ಸಮಸ್ಯೆ ಬೇಗ ನಿವಾರಣೆಯಾಗುತ್ತದೆ. ಆರೋಗ್ಯ ತಜ್ಞರು ಕೂಡ ಇದರ ಸಲಹೆ ನೀಡುತ್ತಾರೆ.

2. ಬೇವಿನ ಎಲೆ - ಬೇವಿನ ಎಲೆಯ ಔಷಧೀಯ ಗುಣಗಳ ಕುರಿತು ನಮ್ಮೆಲ್ಲರಿಗೂ ತಿಳಿದೇ ಇದೆ. ದದ್ದು, ತುರಿಕೆ ಹಾಗೂ ರಿಂಗ್ವರ್ಮ್ ಗಳ ಚಿಕಿತ್ಸೆಗೆ ಬೇವಿನ ಎಲೆ ರಾಮಬಾಣ ಔಷಧಿಯಾಗಿದೆ. ಬೇವಿನ ಎಲೆಗಳ ಪೇಸ್ಟ್ ತಯಾರಿಸಿ ತುರಿಕೆ ಇರುವ ಜಾಗಕ್ಕೆ ಅನ್ವಯಿಸಿ. ಈ ಎಲೆಗಳಲ್ಲಿ ಫಂಗಸ್ ಅನ್ನು ಹೊಡೆದೋಡಿಸುವ ಶಕ್ತಿ ಇದೆ. 

3. ಅರಿಶಿಣ - ತ್ವಚೆಗೆ ಸಂಬಂಧಿಸಿದ ಹಲವು ಕಾಯಿಲೆಗಳಿಗೆ ಅರಿಶಿಣ ರಾಮಬಾಣ ಉಪಾಯವಾಗಿದೆ. ಅರಿಶಿಣದ ತುಣುಕುಗಳನ್ನು ನೀರಿನಲ್ಲಿ ಬೆರೆಸಿ ಅದರ ಪೇಸ್ಟ್ ತಯಾರಿಸಿಕೊಳ್ಳಿ ಹಾಗೂ ಈ ಪೇಸ್ಟ್ ಅನ್ನು ತುರಿಕೆ ಇರುವ ಭಾಗಕ್ಕೆ ಹಚ್ಚಿ. ಅದು ಒಣಗಿದ ಬಳಿಕ ಮತ್ತೊಮ್ಮೆ ಪೇಸ್ಟ್ ಅನ್ವಯಿಸಿ. ಕೆಲವು ದಿನಗಳವರೆಗೆ ಈ ಉಪಾಯವನ್ನು ನಿರಂತರವಾಗಿ ಅನುಸರಿಸಿದರೆ ದದ್ದು, ತುರಿಕೆ ಮಾಯವಾಗುತ್ತವೆ. 

4. ನೆಲವರಿಕೆ ಅಥವಾ ಸ್ವರ್ಣಪತ್ರ - ಇಂಡಿಯನ್ ಸೆನ್ನಾ ಅಥವಾ ನೆಲವರಿಕೆ ಅಥವಾ ಸ್ವರ್ಣಪತ್ರಗಳನ್ನು ಪುಡಿ ಮಾಡಿ, ಅದರಿಂದ ಆಯಿಂಟ್ಮೆಂಟ್ ತಯಾರಿಸಿ. ಅದನ್ನು ದದ್ದು, ತುರಿಕೆ ಇತ್ಯಾದಿ ಚರ್ಮ ಸಮಸ್ಯೆ ಇರುವ ಭಾಗಕ್ಕೆ ಅನ್ವಯಿಸಿ. ಇದರಿಂದ ತಕ್ಷಣ ಪರಿಹಾರ ಸಿಗಲಿದೆ.

5. ಚಂಡು ಹೂವು - ಮದುವೆ ಸಮಾರಂಭ, ಔತಣಕೂಟಗಳ ಸೌಂದರ್ಯ ಹೆಚ್ಚಿಸಲು ಚೆಂಡು ಹೂವನ್ನು ಸಾಮಾನ್ಯವಾಗಿ ಬಳಕೆ ಮಾಡಲಾಗುತ್ತದೆ. ಆದರೆ, ಈ ಹೂವು ದದ್ದು, ತುರಿಕೆ ಇತ್ಯಾದಿಗಳ ನಿವಾರಣೆಗೆ ಬಳಸಬಹುದು ಎಂಬ ಸಂಗತಿ ನಿಮಗೆ ತಿಳಿದಿದೆಯೇ? ಹೌದು, ಈ ಸುಂದರ ಹೂವುಗಳಲ್ಲಿ ಆಂಟಿಅಲರ್ಜಿ, ಆಂಟಿಫಂಗಲ್ ಗುಣಗಳಿದ್ದು, ಇವು ತುರಿಕೆಯಿಂದ ಪರಿಹಾರ ಒದಗಿಸುತ್ತವೆ. 

ZEENEWS TRENDING STORIES

By continuing to use the site, you agree to the use of cookies. You can find out more by Tapping this link