ಸರ್ಕಾರಿ ನೌಕರರಿಗೆ ಸಿಹಿ ಸುದ್ದಿ! ಈ 4 ಭತ್ಯೆಗಳಲ್ಲಿ ಹೆಚ್ಚಳದೊಂದಿಗೆ ವೇತನದಲ್ಲಿ ಭಾರೀ ಏರಿಕೆ
ಕೇಂದ್ರ ನೌಕರರ ತುಟ್ಟಿಭತ್ಯೆಯಲ್ಲಿ ಶೇ.3ರಷ್ಟು ಹೆಚ್ಚಳ ಮಾಡಿದ ನಂತರ ಈಗ ಇತರ ಭತ್ಯೆಗಳೂ ಹೆಚ್ಚಾಗಲಿವೆ. ಮುಂದಿನ ತಿಂಗಳು ನೌಕರರ ವೇತನ ಹೆಚ್ಚಳವಾಗಲಿದೆ. ಇದರೊಂದಿಗೆ ನೌಕರರಿಗೆ 3 ತಿಂಗಳ ಬಾಕಿಯೂ ಸಿಗಲಿದೆ.
ತುಟ್ಟಿಭತ್ಯೆಯನ್ನು ಹೆಚ್ಚಿಸಿದ ನಂತರ ಈಗ ನೌಕರರ ಪ್ರಯಾಣ ಭತ್ಯೆ ಮತ್ತು ನಗರ ಭತ್ಯೆಯಲ್ಲಿ ಹೆಚ್ಚಳವಾಗಲಿದೆ. ಡಿಎ ಹೆಚ್ಚಳದ ನಂತರ, ಟಿಎ ಮತ್ತು ಸಿಎ ಹೆಚ್ಚಳಕ್ಕೆ ಹಾದಿ ಸುಗಮವಾಗಿದೆ.
ಇದಲ್ಲದೇ ಪ್ರಾವಿಡೆಂಟ್ ಫಂಡ್ ಮತ್ತು ಗ್ರಾಚ್ಯುಟಿ ಕೂಡ ಹೆಚ್ಚಾಗಲಿದೆ. ಕೇಂದ್ರ ನೌಕರರ ಮಾಸಿಕ ಪಿಎಫ್ ಮತ್ತು ಗ್ರಾಚ್ಯುಟಿಯನ್ನು ಮೂಲ ವೇತನ ಮತ್ತು ಡಿಎಯಿಂದ ಲೆಕ್ಕ ಹಾಕಲಾಗುತ್ತದೆ. ಹಾಗಾಗಿ ತುಟ್ಟಿ ಭತ್ಯೆ ಹೆಚ್ಚಳದಿಂದಾಗಿ, ಪಿಎಫ್ ಮತ್ತು ಗ್ರಾಚ್ಯುಟಿ ಹೆಚ್ಚಾಗುವುದು ಖಚಿತ.
ಡಿಎ ಹೆಚ್ಚಳದಿಂದಾಗಿ ಕೇಂದ್ರ ನೌಕರರ ಮನೆ ಬಾಡಿಗೆ ಭತ್ಯೆ ಮತ್ತು ಪ್ರಯಾಣ ಭತ್ಯೆಯಲ್ಲಿ ಖಚಿತವಾಗಿ ಹೆಚ್ಚಳವಾಗಲಿದೆ. ನೌಕರರು ಏಕಕಾಲದಲ್ಲಿ ನಾಲ್ಕು ಭತ್ಯೆಗಳ ಹೆಚ್ಚಳದ ಪ್ರಯೋಜನವನ್ನು ಪಡೆಯಬಹುದು. ಸರ್ಕಾರಿ ನೌಕರರ ಡಿಎ 9 ತಿಂಗಳಲ್ಲಿ ದುಪ್ಪಟ್ಟಾಗಿದೆ.
ಸರ್ಕಾರದ ಈ ಘೋಷಣೆಯ ನಂತರ 50 ಲಕ್ಷ ನೌಕರರು ಮತ್ತು 65 ಲಕ್ಷ ಪಿಂಚಣಿದಾರರು ಪ್ರಯೋಜನ ಪಡೆಯಲಿದ್ದಾರೆ. ಮತ್ತೊಂದೆಡೆ, ಇದು ಸರ್ಕಾರದ ಮೇಲೆ ವಾರ್ಷಿಕ 9455.50 ಕೋಟಿ ಹೊರೆಯನ್ನು ಹೆಚ್ಚಿಸುತ್ತದೆ. ಇದಲ್ಲದೇ ಕೇಂದ್ರ ನೌಕರರ ಸಂಘಟನೆ ಕೂಡ 18 ತಿಂಗಳ ಬಾಕಿ ನೀಡುವಂತೆ ಸರಕಾರದ ಮೇಲೆ ಒತ್ತಡ ಹೇರುತ್ತಿದೆ.