ದಾಖಲೆ ಮೊತ್ತಕ್ಕೆ ಹರಾಜಾಗುತ್ತಿದ್ದಂತೆ ವಿದಾಯದ ಭಾವುಕ ಪೋಸ್ಟ್ ಹಂಚಿಕೊಂಡ ರಿಷಬ್ ಪಂತ್..?! ಆಘಾತದಲ್ಲಿ ಅಭಿಮಾನಿಗಳು..!
Rishabh pant: ಟೀಂ ಇಂಡಿಯಾದ ಸ್ಟಾರ್ ಕ್ರಿಕೆಟರ್ ರಿಷಬ್ ಪಂತ್ ಅವರು ಈ ಬಾರಿಯ ಐಪಿಎಲ್ ಮೆಗಾ ಹರಾಜಿನಲ್ಲಿ ದಾಖಲೆ ಬರೆದಿದ್ದಾರೆ. ಬಾರಿ ಮೊತ್ತಕ್ಕೆ ಸೇಲ್ ಆಗುವ ಮೂಲಕ ಸದ್ಯ ಪಂತ್ ಸಿಕ್ಕಾಪಟ್ಟೆ ಸುದ್ದಿಯಲ್ಲಿದ್ದಾರೆ.
ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕರಾಗಿದ್ದ ರಿಷಬ್ ಪಂತ್ ಐಪಿಎಲ್ 2025ರಲ್ಲಿ ಲಕ್ನೋ ಸೂಪರ್ ಜೈಂಟ್ಸ್ ಪರ ಆಡಲಿದ್ದಾರೆ. LSG ತಂಡವು 27 ಕೋಟಿ ರೂಪಾಯಿಗಳ ದಾಖಲೆಯ ಬಿಡ್ ಮಾಡುವ ಮೂಲಕ ಪಂತ್ ಅವರನ್ನು ತಮ್ಮ ತಂಡಕ್ಕೆ ಆಯ್ಕೆ ಮಾಡಿಕೊಂಡಿದೆ.
ಐಪಿಎಲ್ ಹರಾಜಿಗೂ ಮುನ್ನವೇ ರಿಷಭ್ ಪಂತ್ ಅತ್ಯಂತ ದುಬಾರಿ ಆಟಗಾರ ಎಂದು ಭವಿಷ್ಯ ನುಡಿದಿದ್ದು ನಿಜವಾಗಿತ್ತು. ಐಪಿಎಲ್ ಹರಾಜು ನಡೆಯುತ್ತಿರುವಾಗ ಪಂತ್ ಆಸ್ಟ್ರೇಲಿಯಾದಲ್ಲಿದ್ದರು. ಇದೀಗ ಅವರು ಈ ಬಗ್ಗೆ ಪ್ರತಿಕ್ರಿಯಿಸಿದ್ದಾರೆ.
ರಿಷಬ್ ಪಂತ್ ಹೊಸ ತಂಡದೊಂದಿಗೆ ತಮ್ಮ ಪಯಣವನ್ನು ಆರಂಭಿಸಲು ಉತ್ಸುಕರಾಗಿದ್ದಾರೆ. ಅದೇ ಸಮಯದಲ್ಲಿ, ಅವರು ಹಳೆಯ ತಂಡ ಡೆಲ್ಲಿ ಕ್ಯಾಪಿಟಲ್ಸ್ ತೊರೆಯುವ ಬಗ್ಗೆ ಭಾವುಕರಾಗಿದ್ದಾರೆ. ಭಾವನಾತ್ಮಕ ಪೋಸ್ಟ್ ಮಾಡುವ ಮೂಲಕ ಅವರು ದೆಹಲಿ ಕ್ಯಾಪಿಟಲ್ಸ್ ಮತ್ತು ಅವರ ಅಭಿಮಾನಿಗಳಿಗೆ ಸಂದೇಶವನ್ನು ನೀಡಿದ್ದಾರೆ.
ಪೋಸ್ಟ್‌ನಲ್ಲಿ ರಿಷಬ್ ಪಂತ್ " ಡೆಲ್ಲಿ ಕ್ಯಾಪಿಟಲ್ಸ್ ತಂಡದೊಂದಿಗಿನ ನನ್ನ ಸಂಬಂಧ ಅದ್ಭುತಾವಾದದ್ದು, ಮೈದಾನದಲ್ಲಿನ ಆಟದ ರೋಮಾಂಚನದಿಂದ ಹೊರಗಿನ ಅದ್ಭುತ ಕ್ಷಣಗಳವರೆಗೆ, ನಾನು ಇಲ್ಲಿ ಪ್ರಗತಿಯ ಹಾದಿಯನ್ನು ಎಂದಿಗೂ ಊಹಿಸಿರಲಿಲ್ಲ".
"ನಾನು ಹದಿಹರೆಯದವನಾಗಿದ್ದಾಗ ಇಲ್ಲಿಗೆ ಬಂದೆ, ಒಂಬತ್ತು ವರ್ಷಗಳ ಸುದೀರ್ಘವಾದ ಪಯಣದ ನಂತರ ನಾನು ನಿಮ್ಮ ಎಲ್ಲರ ಶುಭಾಶಯಗಳನ್ನು ನನಗೆ ಸಪೋರ್ಟ್ ಮಾಡಿದ ರೀತಿಯನ್ನು ಸದಾ ನೆನಪಿಸಿಕೊಳ್ಳುತ್ತೇನೆ..." ಎಂದು ಬರೆದುಕೊಂಡಿದ್ದಾರೆ.