2025ರಲ್ಲಿ ಈ ರಾಶಿಯವರಿಗೆ ಸುವರ್ಣ ದಿನಗಳು ಆರಂಭ, ಬುಧನಿಂದ ಜಾಗೃತಗೊಳ್ಳಲಿದೆ ಅದೃಷ್ಟ, ಕೈಸೇರಲಿದೆ ಅಪಾರ ಸಂಪತ್ತು
ಜ್ಯೋತಿಷ್ಯ ಶಾಸ್ತ್ರದಲ್ಲಿ, ಬುದ್ಧನನ್ನು ಬುದ್ದಿ, ತರ್ಕ, ವ್ಯಾಪಾರ-ವ್ಯವಹಾರದ ಅಂಶ ಎಂದು ಪರಿಗಣಿಸಲಾಗಿದೆ. 2025ರ ಫೆಬ್ರವರಿ ತಿಂಗಳಿನಲ್ಲಿ ಗ್ರಹಗಳ ರಾಜಕುಮಾರನಾದ ಬುಧ ಕುಂಭ ರಾಶಿಯಲ್ಲಿ ಉದಯಿಸಲಿದ್ದಾನೆ.
2025ರಲ್ಲಿ ಬುಧ ಉದಯದೊಂದಿಗೆ ಕೆಲವು ರಾಶಿಯವರ ಮಲಗಿರುವ ಅದೃಷ್ಟವೂ ಜಾಗೃತಗೊಳ್ಳಲಿದೆ. ಇದರಿಂದ ವ್ಯಕ್ತಿಯ ಬದುಕಿನಲ್ಲಿ ಸುಖ-ಸಂತೋಷ, ಹಣದ ಹರಿವು ಹೆಚ್ಚಾಗಲಿದೆ ಎನ್ನಲಾಗುತ್ತಿದೆ. ಆ ಅದೃಷ್ಟದ ರಾಶಿಗಳೆಂದರೆ...
ಮೇಷ ರಾಶಿ: ಬುಧ ಉದಯದೊಂದಿಗೆ ಈ ರಾಶಿಯವರ ಬದುಕಿನಲ್ಲಿ ಧನಾತ್ಮಕ ಫಲಗಳು ಹೆಚ್ಚಾಗಳಿವೆ. ಆದಾಯದ ಹೊಸ ಮೂಲಗಳು ವೃದ್ಧಿಯಾಗಲಿದ್ದು ಸಂಪತ್ತು ಹೆಚ್ಚಾಗಲಿದೆ. ಉದ್ಯೋಗದಲ್ಲಿ ಕೆಲಸ ಕಾರ್ಯಗಳು ಸಲೀಸಾಗಿ ನಡೆದು ನಿರೀಕ್ಷೆಗಿಂತ ಹೆಚ್ಚಿನ ಲಾಭವನ್ನು ಪಡೆಯುವಿರಿ. ಹೊಸ ಪಾಲುದಾರಿಕೆ ವ್ಯವಹಾರಗಳಿಂದ ಪ್ರಯೋಜನವಾಗಲಿದೆ.
ವೃಷಭ ರಾಶಿ: ಬುಧ ಉದಯದೊಂದಿಗೆ ಈ ರಾಶಿಯವರಿಗೆ ವೃತ್ತಿ ರಂಗದಲ್ಲಿ ಬಂಪರ್ ಪ್ರಯೋಜನವಾಗಲಿದೆ. ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಜಯ ಸಾಧಿಸುವಿರಿ. ಸ್ವಂತ ವ್ಯವಹಾರ ಹೊಂದಿರುವವರಿಗೆ ದೊಡ್ಡ ಬಿಸಿನೆಸ್ ಆರ್ಡರ್ ದೊರೆಯಬಹುದು. ಸರ್ಕಾರದಿಂದ ಯಾವುದಾದರೂ ಕೆಲಸವಾಗಬೇಕಿದ್ದರೆ ಈ ಅವಧಿಯು ತುಂಬಾ ಅದ್ಭುತವಾಗಿದೆ. ಕಠಿಣ ಶ್ರಮಕ್ಕೆ ತಕ್ಕ ಸಂಪೂರ್ಣ ಫಲವನ್ನು ಅನುಭವಿಸುವಿರಿ.
ಕುಂಭ ರಾಶಿ: ಬುಧ ಉದಯದಿಂದ ಈ ರಾಶಿಯವರ ಆತ್ಮವಿಶ್ವಾಸ ಹೆಚ್ಚಾಗಲಿದೆ. ಕೆಲಸ-ಕಾರ್ಯಗಳಲ್ಲಿ ದೃಢ ನಿರ್ಧಾರಗಳನ್ನು ಕೈಗೊಳ್ಳುವಿರಿ. ಹೊಸ ವ್ಯವಹಾರಗಳಲ್ಲಿ ನಿಮ್ಮ ಯೋಜನೆಯಂತೆ ಮುಂದುವರೆಯುವುದು ಲಾಭದಾಯಕವಾಗಿದೆ. ಅವಿವಾಹಿತರಿಗೆ ಕಂಕಣ ಭಾಗ್ಯ ಕೂಡಿ ಬರಲಿದೆ.
ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.