ಟೀಂ ಇಂಡಿಯಾ ಅಭಿಮಾನಿಗಳಿಗೆ ಬಿಗ್‌ ಶಾಕ್‌..! ತಂಡದಿಂದ ರೋಹಿತ್‌ ಶರ್ಮಾ-ಶುಭಮನ್‌ ಗಿಲ್‌ ಔಟ್‌?!

Sun, 17 Nov 2024-7:46 am,

IND vs AUS: ತವರು ನೆಲದಲ್ಲಿ ನ್ಯೂಜಿಲೆಂಡ್ ವಿರುದ್ಧ ಹೀನಾಯ ಸೋಲು ಕಂಡಿರುವ ಭಾರತ ಮತ್ತೊಂದು ಟೆಸ್ಟ್ ಸರಣಿಗೆ ಸಿದ್ಧತೆ ನಡೆಸಿದೆ. ನವೆಂಬರ್ 22 ರಿಂದ ಆಸ್ಟ್ರೇಲಿಯಾ ವಿರುದ್ಧ ಐದು ಟೆಸ್ಟ್ ಪಂದ್ಯಗಳ ಸರಣಿಯನ್ನು ಆಡಲಿದೆ.   

ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನಲ್ಲಿ (2024-25) ಟೀಮ್ ಇಂಡಿಯಾಗೆ ಇದು ಕೊನೆಯ ಸರಣಿಯಾಗಿದ್ದು, ಡಬ್ಲ್ಯುಟಿಸಿ ಫೈನಲ್ ತಲುಪಲು ಭಾರತ ತಂಡಕ್ಕೆ ಈ ಪಂದ್ಯವನ್ನು ಗೆಲ್ಲಲೇ ಬೇಕಾದ ಅನಿವಾರ್ಯತೆ ಎದುರಾಗಿದೆ.  

ಬಾರ್ಡರ್ ಗವಾಸ್ಕರ್ ಟ್ರೋಫಿಯಲ್ಲಿ ಆಡಲಿರುವ ಭಾರತ ತಂಡ ಕನಿಷ್ಠ 4-0 ಅಂತರದಿಂದ ಗೆದ್ದರೆ ಮಾತ್ರ ಫೈನಲ್ ತಲುಪುವ ಅವಕಾಶವನ್ನು ಪಡೆದುಕೊಳ್ಳಲಿದೆ. ಮತ್ತೊಂದೆಡೆ, ಈ ಸರಣಿಯು ಆಸ್ಟ್ರೇಲಿಯಾಕ್ಕೆ ಅತ್ಯಂತ ಮಹತ್ವದ್ದಾಗಿದೆ.   

ಶ್ರೀಲಂಕಾ ಸರಣಿಯೊಂದಿಗೆ ಏಳು ಪಂದ್ಯಗಳಲ್ಲಿ ಐದರಲ್ಲಿ ಗೆಲ್ಲಬೇಕಾಗಿದೆ. ಆದರೆ ಸರಣಿ ಆರಂಭಕ್ಕೂ ಮುನ್ನವೇ ಟೀಂ ಇಂಡಿಯಾ ಸರಣಿ ಹಿನ್ನಡೆ ಎದುರಿಸುತ್ತಿದೆ.   

ಎರಡನೇ ಬಾರಿಗೆ ತಂದೆಯಾಗಿರುವ ನಾಯಕ ರೋಹಿತ್ ಶರ್ಮಾ ಪರ್ತ್‌ನಲ್ಲಿ ನಡೆಯಲಿರುವ ಟೆಸ್ಟ್‌ಗೆ ಗೈರು ಹಾಜರಾಗಲಿದ್ದಾರೆ. ತನ್ನ ಕುಟುಂಬದೊಂದಿಗೆ ಇನ್ನೂ ಕೆಲವು ದಿನಗಳನ್ನು ಕಳೆಯಲು ಬಯಸಿರುವ ರೋಹಿತ್‌ ಶರ್ಮಾ ತಂಡದಿಂದ ಹೊರಗುಳಿಯಲಿದ್ದಾರೆ.   

ಇದೀಗ ಮತ್ತೊಂದು ಅಘಾತಕಾರಿ ವಿಚಾರ ಏನೆಂದರೆ, ರೋಹಿತ್‌ ಶರ್ಮಾ ಅಷ್ಟೆ ಅಲ್ಲ ಶುಭಮನ್ ಗಿಲ್ ಕೂಡ ಪರ್ತ್‌ನಲ್ಲಿ ನಡೆಯಲಿರುವ ಈ ಟೆಸ್ಟ್‌ಗೆ ಲಭ್ಯವಿರುವುದಿಲ್ಲ.   

ಪಂದ್ಯದ ಸಿಮ್ಯುಲೇಶನ್‌ನಲ್ಲಿ ಸ್ಲಿಪ್‌ನಲ್ಲಿ ಫೀಲ್ಡಿಂಗ್ ಮಾಡುವಾಗ ಗಿಲ್ ಹೆಬ್ಬೆರಳಿಗೆ ಗಾಯವಾಗಿದೆ,  ಸ್ಕ್ಯಾನ್‌ನಲ್ಲಿ ಮೂಳೆ ಮುರಿತ ಕಂಡುಬಂದಿದೆ. ಇದೇ ಕಾರಣದಿಂದ ಗಿಲ್‌ ಕೂಡ ಈ ಪಂದ್ಯದಿಂದ ದೂರ ಉಳಿಯಲಿದ್ದು, ರೋಹಿತ್ ಮತ್ತು ಗಿಲ್ ಇಲ್ಲದಿರುವುದು ಟೀಂ ಇಂಡಿಯಾಕ್ಕೆ ನುಂಗಲಾರದ ತುತ್ತಾಗಿದೆ.  

ಬ್ಯಾಕ್‌ಅಪ್‌ ಓಪನರ್‌ ಅಭಿಮನ್ಯು ಈಶ್ವರನ್‌ ಕಾಂಗರೂ ನೆಲಕ್ಕೆ ತೆರಳಿರುವುದು ಭಾರತ ತಂಡದಲ್ಲಿ ಮತ್ತಷ್ಟು ಗೊಂದಲ ಮೂಡಿಸಿದೆ.ಈ ಹಿನ್ನೆಲೆಯಲ್ಲಿ ಮೊದಲ ಟೆಸ್ಟ್‌ಗೆ ಮತ್ತೊಬ್ಬ ಬ್ಯಾಟ್ಸ್‌ಮನ್‌ ಆಯ್ಕೆ ಮಾಡುವ ಆಶಯವನ್ನು ಬಿಸಿಸಿಐ ಹೊಂದಿರುವುದು ಕಂಡುಬಂದಿದೆ.   

ಇನ್ನೂ ಪಂದ್ಯದ ವೇಳಾಪಟ್ಟಿ ಈಗಾಗಲೆ ಬಿಡುಗಡೆಯಾಗಿದ್ದು, ನವೆಂಬರ್ 22-26 ಮೊದಲ ಟೆಸ್ಟ್‌ ಪಂದ್ಯ ಪರ್ತ್‌ನಲ್ಲಿ ಬೆಳಗ್ಗೆ 7:30ಗೆ ಆರಂಭವಾಗಲಿದೆ, ಎರಡನೆ ಪಂದ್ಯ ಡಿಸೆಂಬರ್ 06-10 ವರೆಗೆ ನಡೆಯಲಿದ್ದು, ಈ ಪಂದ್ಯ ಹಗಲು/ರಾತ್ರಿ ಅಡಿಲೇಡ್‌ನಲ್ಲಿ ನಡೆಯಲಿದೆ.   

ಡಿಸೆಂಬರ್ 14-18 ವರೆಗೆ ಮೂರನೆ ಟೆಸ್ಟ್‌ ಪಂದ್ಯ ಬ್ರಿಸ್ಬೇನ್‌ನಲ್ಲಿ ಬೆಲಗ್ಗೆ 5:50ಕ್ಕೆ ಶುರುವಾಗಲಿದೆ, ಡಿಸೆಂಬರ್ 26-31  ನಾಲ್ಕನೇ ಟೆಸ್ಟ್ ಪಂದ್ಯ ಮೆಲ್ಬೋರ್ನ್ನಲ್ಲಿ ನಡೆಯಲಿದೆ.  

ಇನ್ನೂ, ಕೊನೆಯ ಟೆಸ್ಟ್‌ ಪಂದ್ಯ ಜನವರಿ 03-08 ನಡೆಯಲಿದ್ದು, ಈ ಪಂದ್ಯ ಸಿಡ್ನಿಯಲ್ಲಿ ಬೆಳಗ್ಗೆ 5:00 ಗಂಟೆಗೆ ಶುರುವಾಗಲಿದೆ.  

ಈ ಟೆಸ್ಟ್‌ಗೆ ಆಯ್ಕೆಯಾಗಿರುವ ಆಟಗಾರರಲ್ಲಿ, ಯಶಸ್ವಿ ಜೈಸ್ವಾಲ್, ಅಭಿಮನ್ಯು ಈಶ್ವರನ್, ವಿರಾಟ್ ಕೊಹ್ಲಿ, ಸರ್ಫರಾಜ್ ಖಾನ್, ವಾಷಿಂಗ್ಟನ್ ಸುಂದರ್, ನಿತೀಶ್ ಕುಮಾರ್ ರೆಡ್ಡಿ, ರವೀಂದ್ರ ಜಡೇಜಾ, ರವಿಚಂದ್ರನ್ ಅಶ್ವಿನ್, ರಿಷಬ್ ಪಂತ್, ಕೆಎಲ್ ರಾಹುಲ್, ಧ್ರುವ ಜುರೆಲ್, ಜಸ್ಪ್ರೀತ್ ಬುಮ್ರಾ ಸಿರಾಜ್, ಪ್ರಸಿದ್ಧ್ ಕೃಷ್ಣ, ಹರ್ಷಿತ್ ರಾಣಾ, ಆಕಾಶ್ ದೀಪ್ ಹೆಸರು ಪಟ್ಟಿಯಲ್ಲಿದೆ.   

ZEENEWS TRENDING STORIES

By continuing to use the site, you agree to the use of cookies. You can find out more by Tapping this link