IPL 2025: ರೋಹಿತ್‌ ಶರ್ಮಾಗೆ ಹೆಚ್ಚಿದ ಡಿಮ್ಯಾಂಡ್‌.. 50 ಕೋಟಿ ಮೊತ್ತಕ್ಕೆ ಕ್ಯಾಪ್ಟನ್‌ ಹರಾಜು?

Sun, 25 Aug 2024-7:03 am,

 ಐಪಿಎಲ್ 2025 ಸೀಸನ್ ಮೆಗಾ ಹರಾಜಿನಲ್ಲಿ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಬಿಗ್ ಡೀಲ್ ಮಾಡಲಿದ್ದಾರೆಯೇ? ಎನ್ನುವ ಪ್ರಶ್ನೆಗಲು ಸದ್ಯಕ್ಕೆ ಕುತೂಹಲ ಹೆಚ್ಚಿಸಿದೆ. ರೋಹಿತ್‌  ಅವರಿಗೆ ರೂ. 50 ಕೋಟಿಯಾದರೂ ಕೊಡಲು ಫ್ರಾಂಚೈಸಿಗಳು ಸಿದ್ಧರಿದ್ದಾರೆಯೇ? ಎನ್ನು ಪ್ರಶ್ನೆ ನಿಮಗೂ ಇರಬಹುದು ಅದಕ್ಕೆ ಉತ್ತರ, ಹೌದು.

ರೋಹಿತ್ ಶರ್ಮಾ ಭಾರತೀಯ ಕ್ರಿಕೆಟ್ ಇತಿಹಾಸದಲ್ಲಿ ಅತ್ಯಂತ ಯಶಸ್ವಿ ನಾಯಕ. 11 ವರ್ಷಗಳ ಸುದೀರ್ಘ ಕಾಯುವಿಕೆಯ ನಂತರ ಟೀಂ ಇಂಡಿಯಾಗೆ ವಿಶ್ವಕಪ್ ತಂದುಕೊಟ್ಟವರು. ಕೇವಲ ವಿಶ್ವಕಪ್‌ ಅಷ್ಟೆ ಅಲ್ಲ ಐಪಿಎಲ್‌ನಲ್ಲಿ ಮುಂಬೈ ಇಂಡಿಯನ್ಸ್‌ ತಂಡದ ನಾಯಕರಾಗಿ ಐದು ಪ್ರಶಸ್ತಿಗಳನ್ನು ಗೆದ್ದುಕೊಟ್ಟವರು.   

ಈ ಕ್ರಮದಲ್ಲಿ ರೋಹಿತ್ ಶರ್ಮಾ ಪರ ಎಲ್ಲಾ ಫ್ರಾಂಚೈಸಿಗಳು ಆಸಕ್ತಿ ತೋರುತ್ತಿದ್ದಾರೆ. ಐಪಿಎಲ್ 2024 ರ ಸೀಸನ್‌ಗೆ ಮುಂಚಿತವಾಗಿ, ಮುಂಬೈ ಇಂಡಿಯನ್ಸ್ ರೋಹಿತ್ ಶರ್ಮಾ ಅವರನ್ನು ನಾಯಕತ್ವದಿಂದ ಕೆಳಗಿಳಿಸಿ ನೂತನ ನಾಯಕನಾಗಿ ಹಾರ್ದಿಕ್ ಪಾಂಡ್ಯ ಅವರನ್ನು ಆಯ್ಕೆ ಮಾಡಿತ್ತು.  

ಆದರೆ ಈ ನಿರ್ಧಾರದಿಂದ ರೋಹಿತ್ ಶರ್ಮಾ ಅತೃಪ್ತರಾಗಿದ್ದರು ಎಂದು ಹೇಳಲಾಗುತ್ತಿದ್ದು. ರೋಹಿತ್ ಮುಂಬೈ ಇಂಡಿಯನ್ಸ್ ತೊರೆಯಲು ಸಿದ್ಧರಾಗಿದ್ದಾರೆ ಎಂಬ ವರದಿಗಳಿವೆ. ಐಪಿಎಲ್ ವೇಳೆ ರೋಹಿತ್ ನಡೆಸಿದ ಖಾಸಗಿ ಸಂಭಾಷಣೆಯ ವಿಡಿಯೋ ಈ ಸುದ್ದಿಗೆ ಬಲ ನೀಡಿದೆ.  

ರೋಹಿತ್ ಶರ್ಮಾ ಮುಂಬೈ ಇಂಡಿಯನ್ಸ್ ತೊರೆದು ಹರಾಜಿಗೆ ಪ್ರವೇಶಿಸಿದರೆ ಸಾರ್ವಕಾಲಿಕ ದಾಖಲೆಯ ಬೆಲೆಯನ್ನು ಪಡೆಯುತ್ತಾರೆ ಎಂದು ಕ್ರಿಕೆಟ್ ವಿಶ್ಲೇಷಕರು ನಂಬಿದ್ದಾರೆ. ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಲಕ್ನೋ ಸೂಪರ್‌ಜೈಂಟ್ಸ್ ತಂಡಗಳು, ರೋಹಿತ್‌ ಅವರನ್ನು ಖರೀದಿಸಲು ಆಸಕ್ತಿ ಹೊಂದಿದೆ, ರೂ. 50 ಕೋಟಿ ನೀಡಲು ಸಿದ್ಧ ಎಂದು ಕ್ರೀಡಾ ವಾಹಿನಿಯ ವಕ್ತಾರರು ತಿಳಿಸಿದ್ದಾರೆ.  

ಈ ಎರಡೂ ತಂಡಗಳು ಈಗಾಗಲೇ ರೂ. 50 ಕೋಟಿ ಸಿದ್ಧಪಡಿಸಲಾಗಿದೆ ಎಂದರು. ಈ ಕಾಮೆಂಟ್‌ಗಳು ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗೆ ಗ್ರಾಸವಾಗಿವೆ.   

ಲಕ್ನೋ ಮತ್ತು ಡೆಲ್ಲಿ ಇದುವರೆಗೂ ಪ್ರಶಸ್ತಿ ಗೆದ್ದಿಲ್ಲ. ಉಭಯ ತಂಡಗಳು ರೋಹಿತ್‌ನೊಂದಿಗೆ ಆ ಆಸೆಯನ್ನು ಪೂರೈಸುವ ಭರವಸೆ ಹೊಂದಿವೆ. ಆಸ್ಟ್ರೇಲಿಯಾದ ವೇಗಿ ಮಿಚೆಲ್ ಸ್ಟಾರ್ಕ್ 17 ವರ್ಷಗಳ ಐಪಿಎಲ್ ಇತಿಹಾಸದಲ್ಲಿ ಅತಿ ಹೆಚ್ಚು ಬಿಡ್ ಮಾಡಿದ ದಾಖಲೆಯನ್ನು ಹೊಂದಿದ್ದಾರೆ.  

ಐಪಿಎಲ್ 2024 ರ ಮಿನಿ ಹರಾಜಿನಲ್ಲಿ ಅವರು ರೂ. KKR 24.75 ಕೋಟಿಗಳ ಬೃಹತ್ ಬೆಲೆಗೆ ಪಡೆದುಕೊಂಡಿದೆ. ಅದೇ ಹರಾಜಿನಲ್ಲಿ ಪ್ಯಾಟ್ ಕಮ್ಮಿನ್ಸ್ ಅವರನ್ನು ಸನ್ ರೈಸರ್ಸ್ ಹೈದರಾಬಾದ್ ತಂಡವು ರೂ. 20.5 ಕೋಟಿ ತೆಗೆದುಕೊಂಡಿದ್ದಾರೆ.  

ಪ್ರಸ್ತುತ ಐಪಿಎಲ್ ತಂಡಗಳ ಪರ್ಸ್ ಮೌಲ್ಯ ರೂ. 100 ಕೋಟಿ. ಐಪಿಎಲ್ 2025 ರ ಮೆಗಾ ಹರಾಜಿನ ಹಿನ್ನೆಲೆಯಲ್ಲಿ ಬಿಸಿಸಿಐ ಪರ್ಸ್ ಮೌಲ್ಯವು 20-25 ಕೋಟಿಗಳಷ್ಟು ಹೆಚ್ಚಾಗುವ ಸಾಧ್ಯತೆಯಿದೆ. ರೂ. 120-125 ಕೋಟಿಗೆ ಏರಿಕೆಯಾಗುವ ಅವಕಾಶವಿದೆ.   

ಒಂದು ವೇಳೆ ರೂ. 125 ಕೋಟಿಗೆ ಏರಿಕೆಯಾದರೂ ಪ್ರತಿ ಆಟಗಾರನಿಗೆ ರೂ. 50 ಕೋಟಿ ಖರ್ಚು ಮಾಡುವುದು ತುಂಬಾ ಕಷ್ಟ. ರೋಹಿತ್ ಶರ್ಮಾ ಬರೋಬ್ಬರಿ 50 ಕೋಟಿ ಖರ್ಚು ಮಾಡಿದರೆ, ಉಳಿದ ರೂ. 75 ಕೋಟಿಯೊಂದಿಗೆ ಇತರ 24 ಆಟಗಾರರನ್ನು ಪಡೆಯುವುದು ಕಷ್ಟ.  

ಸಂಪೂರ್ಣವಾಗಿ ದೇಶೀಯ ಆಟಗಾರರ ಮೇಲೆ ಅವಲಂಬಿತವಾಗಿದೆ. ಆಗ ರೋಹಿತ್ ಶರ್ಮಾ ತಂಡದಲ್ಲಿದ್ದರೂ ತಂಡ ದುರ್ಬಲವಾಗಲಿದೆ. ಯಾವುದೇ ಲೆಕ್ಕಾಚಾರದಲ್ಲಿ ಒಬ್ಬ ಆಟಗಾರ ಗರಿಷ್ಠ ರೂ. 30-35 ಕೋಟಿ ಮೀರುವಂತಿಲ್ಲ ಎಂಬುದು ಕ್ರಿಕೆಟ್ ವಿಶ್ಲೇಷಕರ ಅಭಿಪ್ರಾಯ.  

ZEENEWS TRENDING STORIES

By continuing to use the site, you agree to the use of cookies. You can find out more by Tapping this link