ರೋಹಿತ್ ಶರ್ಮಾ ಪತ್ನಿಗೂ ಸಲ್ಮಾನ್ ಖಾನ್‌ಗೂ ಇದೇ ನಂಟು.. ಇವರಿಬ್ಬರು ಸಂಬಂಧಿಯಾದದ್ದು ಹೀಗೆ!

Mon, 27 Nov 2023-12:51 pm,

ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾಗೆ ಸದ್ಯ ವಿಶ್ರಾಂತಿಯಲ್ಲಿದ್ದಾರೆ. ವಿಶ್ವಕಪ್‌ ಪಂದ್ಯದ ವೇಳೆ ರೋಹಿತ್ ಪತ್ನಿ ರಿತಿಕಾ ಹಲವು ಬಾರಿ ಸ್ಟೇಡಿಯಂನಲ್ಲಿ ಕಾಣಿಸಿಕೊಂಡಿದ್ದರು.    

ರೋಹಿತ್ ಮತ್ತು ರಿತಿಕಾ 2015 ರಲ್ಲಿ ಮುಂಬೈನಲ್ಲಿ ವಿವಾಹವಾದರು. ಈಗ ಅವರಿಗೆ ಸಮೀರ ಎಂಬ ಮಗಳಿದ್ದಾಳೆ.  

ಮದುವೆಗೂ ಮುನ್ನ ರೋಹಿತ್ ಪತ್ನಿ ರಿತಿಕಾ ಸ್ಪೋರ್ಟ್ಸ್ ಮ್ಯಾನೇಜ್ ಮೆಂಟ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಆಕೆ ನಿರ್ವಹಿಸುತ್ತಿದ್ದ ಕಂಪನಿಯು ಆಕೆಯ ಸೋದರ ಸಂಬಂಧಿ ಬಂಟಿ ಸಚ್‌ದೇವ ಅವರ ಒಡೆತನದಲ್ಲಿದೆ. ಬಂಟಿ ಸಚ್‌ದೇವ ಮತ್ತು ವಿರಾಟ್ ಕೊಹ್ಲಿ ಇಬ್ಬರೂ ಪರಸ್ಪರ ಉತ್ತಮ ಸ್ನೇಹಿತರು.  

ರಿತಿಕಾ ಅವರ ಸೋದರ ಸಂಬಂಧಿ ಬಂಟಿ ಅವರ ಸಹೋದರಿ ಅಂದರೆ ಸೀಮಾ ಅವರು ಸೋಹೈಲ್ ಖಾನ್ ಅವರನ್ನು ವಿವಾಹವಾಗಿದ್ದರು. ಸೊಹೈಲ್ ಬಾಲಿವುಡ್ ನಟ ಸಲ್ಮಾನ್ ಖಾನ್ ಅವರ ಕಿರಿಯ ಸಹೋದರ. ಕಳೆದ ವರ್ಷವಷ್ಟೇ ಸೋಹೈಲ್ ಮತ್ತು ಸೀಮಾ ವಿಚ್ಛೇದನ ಪಡೆದಿದ್ದರು.  

ರೋಹಿತ್ ಅವರ ಪತ್ನಿ ರಿತಿಕಾ ಅವರು ಪ್ರಸಿದ್ಧ ಕ್ರೀಡಾ ನಿರ್ವಹಣಾ ಸಂಸ್ಥೆಯ ಮಾಲೀಕ ಬಂಟಿ ಸಚ್‌ದೇವ ಅವರ ಸೋದರಸಂಬಂಧಿಯಾಗಿದ್ದಾರೆ. ಬಂಟಿ ಸಚ್‌ದೇವ ತನ್ನ ಸಹೋದರಿ ಸೀಮಾ ಮೂಲಕ ಸಲ್ಮಾನ್ ಖಾನ್‌ ಅವರಿಗೆ ಸಂಬಂಧಿಕರಾಗಬೇಕು. ಅವರು 1998 ರಲ್ಲಿ ಸೋಹೈಲ್ ಖಾನ್ ಅವರನ್ನು ವಿವಾಹವಾದರು ಆದರೆ 2022 ರಲ್ಲಿ ವಿಚ್ಛೇದನ ಪಡೆದರು.  

ZEENEWS TRENDING STORIES

By continuing to use the site, you agree to the use of cookies. You can find out more by Tapping this link