Rose Flower Remedies: ಧನ ಪ್ರಾಪ್ತಿಯ ಜೊತೆಗೆ ಮನೆಯಲ್ಲಿ ಸದಾ ಸುಖ-ಸಮೃದ್ಧಿ ನೆಲೆಸಲು ಈ ಉಪಾಯ ಅನುಸರಿಸಿ
1. ಧನಲಾಭಕ್ಕಾಗಿ ಗುಲಾಬಿ - ಯಾವುದೇ ಒಂದು ಶುಕ್ರವಾರ ಗುಲಾಬಿ ಹೂವಿನಲ್ಲಿ ಕರ್ಪೂರವನ್ನಿಟ್ಟು ಉರಿಸಿ. ಕರ್ಪೂರ ಸುಟ್ಟುಹೋದ ಬಳಿಕ ಆ ಹೂವನ್ನು ಲಕ್ಷ್ಮಿಗೆ ಅರ್ಪಿಸಿ. ಹೀಗೆ ಮಾಡುವುದರಿಂದ ಧನಲಾಭ ಉಂಟಾಗುತ್ತದೆ.
2. ಮನೋಕಾಮನೆಗಳ ಈಡೇರಿಕೆಗೆ - ಯಾವುದೇ ಶುಕ್ಲ ಪಕ್ಷದ ಮೊದಲ ಮಂಗಳವಾರದಂದು ಹನುಮನಿಗೆ 11 ತಾಜಾ ಗುಲಾಬಿ ಹೂವುಗಳನ್ನು ಅರ್ಪಿಸಿ. ಸತತ 11 ಮಂಗಳವಾರ ಈ ರೀತಿ ಮಾಡುವುದರಿಂದ ಶ್ರೀ ಆಂಜನೇಯ ನಿಮ್ಮ ಇಷ್ಟಾರ್ಥಗಳನ್ನು ಪೂರೈಸುತ್ತಾನೆ.
3. ಮನೆಯಲ್ಲಿ ಸಮೃದ್ಧಿಗಾಗಿ ಈ ಉಪಾಯ ಅನುಸರಿಸಿ - ಮನೆಯಲ್ಲಿ ಸಮೃದ್ಧಿಗಾಗಿ ಮಂಗಳವಾರದಂದು ಕೆಂಪು ಬಟ್ಟೆಯಲ್ಲಿ ಕೆಂಪು ಚಂದನ, ಕೆಂಪು ಗುಲಾಬಿ ಮತ್ತು ಕುಂಕುಮವನ್ನು ಕಟ್ಟಿಕೊಳ್ಳಿ. ನಂತರ ಅದನ್ನು ಒಂದು ವಾರದವರೆಗೆ ಆಂಜನೇಯನ ದೇವಸ್ಥಾನದಲ್ಲಿ ಇರಿಸಿ. ಬಳಿಕ ಅದನ್ನು ತಂದು ಮನೆ ಅಥವಾ ಅಂಗಡಿಯ ತಿಜೋರಿಯಲ್ಲಿರಿಸಿ ಇರಿಸಿ. ಗುಲಾಬಿಯ ಈ ಉಪಾಯ ಮನೆಯಲ್ಲಿ ಸಮೃದ್ಧಿಯನ್ನು ತರುತ್ತದೆ. ಜೊತೆಗೆ ಹಣವೂ ವ್ಯರ್ಥ ಖರ್ಚಾಗುವುದಿಲ್ಲ.
4. ರೋಗ ನಿವಾರಣೆಗೆ ಈ ಉಪಾಯ ಅನುಸರಿಸಿ - ಮನೆಯಲ್ಲಿ ಯಾರಾದರು ಅನಾರೋಗ್ಯದಿಂದ ಬಳಸುತ್ತಿದ್ದ ಪರಿಸ್ಥಿತಿಯಲ್ಲಿ ಗುಲಾಬಿ ಹೂವು ಮತ್ತು ಹಾಗಲಕಾಯಿಯನ್ನು ವೀಳ್ಯದೆಲೆಯಲ್ಲಿ ಇರಿಸಿ, ಅದನ್ನು ರೋಗಿಯ ಮೇಲೆ 11 ಬಾರಿ ನಿವಾಳಿಸಿ ನಾಲ್ಕು ಕವಲು ದಾರಿಗಳನ್ನು ಹೊಂದಿರುವ ಸರ್ಕಲ್ ನಲ್ಲಿ ಎಸೆಯಿರಿ. ಈ ಉಪಾಯದಿಂದ ರೋಗಿಯ ಸ್ಥಿತಿ ಸುಧಾರಿಸುತ್ತದೆ.
5. ಸಾಲ ಮುಕ್ತಿಗಾಗಿ ಈ ಉಪಾಯ ಅನುಸರಿಸಿ - ಕೆಂಪು ದಳಗಳಿರುವ ಐದು ಗುಲಾಬಿ ಹೂವುಗಳನ್ನು ಒಂದು ಬಿಳಿ ಬಣ್ಣದ ವಸ್ತ್ರದ ನಾಲ್ಕೂ ಮೂಲೆಗಳಲ್ಲಿ ಮತ್ತು ಮಧ್ಯ ಭಾಗದಲ್ಲಿ ಒಂದೊಂದಾಗಿ ಕಟ್ಟಿಕೊಳ್ಳಿ, ನಂತರ ಅದನ್ನು ಗಂಟು ಕಟ್ಟಿ ಹರಿಯುವ ನದಿಯಲ್ಲಿ ಹರಿದುಬಿಡಿ. ಗುಲಾಬಿ ಹೂವಿನ ಈ ಉಪಾಯದಿಂದ ಸಾಲಬಾಧೆಯಿಂದ ಮುಕ್ತಿ ಸಿಗುತ್ತದೆ.