ಈ ಒಂದು ವಸ್ತುವನ್ನು ಬಳಸಿದರೆ ಒಂದೇ ವಾಶ್ ನಲ್ಲಿ ಹೇಳಬಹುದು ತಲೆಹೊಟ್ಟಿಗೆ ಗುಡ್ ಬೈ
ರೋಸ್ ವಾಟರ್ ಅನ್ನು ಕೂದಲಿಗೆ ಹಚ್ಚುವುದರಿಂದ, ಇದು ನಿಮ್ಮ ನೆತ್ತಿ ಮತ್ತು ಕೂದಲನ್ನು ಸೋಂಕಿನಿಂದ ರಕ್ಷಿಸುತ್ತದೆ. ತಲೆಹೊಟ್ಟು ಸಮಸ್ಯೆ ಇದ್ದರೂ ಸಹ ರೋಸ್ ವಾಟರ್ ಅನ್ನು ಬಳಸಬಹುದು. ಇದು ತಲೆಹೊಟ್ಟು ತೆಗೆದುಹಾಕುವ ಮೂಲಕ ಕೂದಲನ್ನು ಬಲಪಡಿಸುತ್ತದೆ.
ರೋಸ್ ವಾಟರ್ ಉತ್ತಮ ಪ್ರಮಾಣದ ಉತ್ಕರ್ಷಣ ನಿರೋಧಕಗಳನ್ನು ಹೊಂದಿರುತ್ತದೆ. ಇದು ಆಕ್ಸಿಡೇಟಿವ್ ಸ್ಟ್ರೆಸ್ ನಿಂದ ರಕ್ಷಿಸುತ್ತದೆ.
ಕೂದಲು ಶುಷ್ಕವಾಗಿ ಉದುರಲು ಆರಂಭಿಸಿದರೆ, ರೋಸ್ ವಾಟರ್ ಅನ್ನು ಬಳಸಬಹುದು. ಇದು ಕೂದಲು ಉದುರುವ ಸಮಸ್ಯೆಗೆ ಪರಿಹಾರ ನೀಡುತ್ತದೆ.
ರೋಸ್ ವಾಟರ್ ಅನ್ನು ಕೂದಲಿನ ಬುಡಕ್ಕೆ ಹಚ್ಚುವುದರಿಂದ ರಕ್ತ ಪರಿಚಲನೆ ಸರಿಯಾಗಿ ಆಗುತ್ತದೆ. ಇದರಿಂದ ಕೂದಲಿನ ಬೆಳವಣಿಗೆ ಸರಿಯಾಗಿ ಆಗುತ್ತದೆ. ಉದ್ದನೆಯ ಕೂದಲು ಬೇಕು ಎಂದಾದರೆ ತಲೆ ಕೂದಲಿಗೆ ರೋಜ್ ವಾಟರ್ ಬಳಸಬಹುದು.
ಶಾಂಪೂ ಮಾಡುವ ಒಂದು ಗಂಟೆ ಮೊದಲು ರೋಸ್ ವಾಟರ್ ಅನ್ನು ಕೂದಲಿಗೆ ಹಚ್ಚಬಹುದು. ರೋಸ್ ವಾಟರ್‌ನಲ್ಲಿ ನಿಂಬೆ ರಸವನ್ನು ಬೆರೆಸಿ ಹಚ್ಚಬಹುದು. ವಿಟಮಿನ್ ಇ ಅನ್ನು ರೋಸ್ ವಾಟರ್ ಗೆ ಸೇರಿಸುವ ಮೂಲಕ ಕೂಡಾ ಹಚ್ಚಬಹುದು.