ವಯಸ್ಸು 38, ಅವಳಿ ಮಕ್ಕಳ ತಂದೆ… ಈ ಕ್ರಿಕೆಟರ್ ತವರು ಚೆನ್ನೈ ಆದ್ರೂ IPLನಲ್ಲಿ ಆಡೋದು RCB ಪರ!! ಯಾರಿವರು ಗೊತ್ತಾಯ್ತ?
16 ವರ್ಷಗಳ ಬಳಿಕ ಚೆಪಾಕ್ ಮೈದಾನದಲ್ಲಿ ಚೆನ್ನೈ ತಂಡವನ್ನು ಸೋಲಿಸಿ ಇತಿಹಾಸ ಸೃಷ್ಟಿಸುವ ತವಕದಲ್ಲಿದ್ದ ಆರ್ ಸಿ ಬಿಗೆ ನಿರಾಸೆಯಾಗಿದೆ.
ಇನ್ನು ಈ ಪಂದ್ಯದ ಸೋಲು ಒಂದೆಡೆಯಾದರೆ ಓರ್ವ ಆಟಗಾರನ ನಿವೃತ್ತಿಯ ಬಗ್ಗೆ ಭಾರೀ ಚರ್ಚೆಯಾಗಿತ್ತು. ಆ ಆಟಗಾರ ಬೇರಾರು ಅಲ್ಲ, ದಿನೇಶ್ ಕಾರ್ತಿಕ್. ಅಂದಹಾಗೆ ಈ ಸೀಸನ್ ಬಳಿಕ ದಿನೇಶ್ ನಿವೃತ್ತಿಯಾಗಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ.
ಕಳೆದ ದಿನ ನಡೆದ ಪಂದ್ಯದಲ್ಲಿ 78 ರನ್’ಗಳಿಗೆ ಐದು ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದ ಬೆಂಗಳೂರು ತಂಡಕ್ಕೆ ದಿನೇಶ್ ಆಸರೆಯಾಗಿದ್ದರು. ಅನುಜ್ ರಾವತ್ (48) ಜೊತೆಗೂಡಿ 38 ರನ್ ಗಳಿಸಿ ಅಜೇಯರಾಗಿ ಉಳಿದಿದ್ದರು.
ಇನ್ನು ಪಂದ್ಯದ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ದಿನೇಶ್ ಕಾರ್ತಿಕ್’ಗೆ ಕಠಿಣ ಪ್ರಶ್ನೆ ಎದುರಾಗಿದೆ. “ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ಇದು ನಿಮ್ಮ ಕೊನೆಯ ಐಪಿಎಲ್ ಪಂದ್ಯವೇ?” ಎಂದು ಪ್ರಶ್ನೆ ಕೇಳಿದಾಗ, ಜಾಣ್ಮೆಯಿಂದ ಉತ್ತರಿಸಿದ ಅವರು, “ನಿವೃತ್ತಿ ಬಗ್ಗೆ ಸುಳಿವು ನೀಡುತ್ತಲೇ ಮತ್ತೆ ಇಲ್ಲಿ ಆಡುತ್ತೇನೆ. ಇನ್ನೂ ನಾಕೌಟ್ ಪಂದ್ಯಗಳು ಇಲ್ಲಿ ನಡೆಯಲಿವೆ. ಒಂದು ವೇಳೆ ಆ ಪಂದ್ಯದಲ್ಲಿ ಆಡಿದರೆ ಅದು ನನ್ನ ಕೊನೆಯ ಪಂದ್ಯವಾಗಲಿದೆ” ಎಂದಿದ್ದಾರೆ.
ಇನ್ನು ದಿನೇಶ್ ಜನಿಸಿದ್ದು ಚೆನ್ನೈನ ತಮಿಳು ಕುಟುಂಬದಲ್ಲಿ. ಈಗಲೂ ದೇಶೀಯ ಕ್ರಿಕೆಟ್’ನಲ್ಲಿ ತಮಿಳುನಾಡು ಪರ ಆಡುತ್ತಾರೆ ದಿನೇಶ್..
38ರ ಹರೆಯದ ದಿನೇಶ್ ಕಾರ್ತಿಕ್ ಕ್ರಿಕೆಟ್’ನಲ್ಲಿ ಸಾಕಷ್ಟು ಹೆಸರು ಗಳಿಸಿದ್ದಾರೆ. ಆದರೆ ಅವರ ವೈಯಕ್ತಿಕ ಜೀವನ ಒಂದೊಮ್ಮೆ ಸೂತ್ರವಿಲ್ಲದ ಗಾಳಿಪಟದಂತಾಗಿತ್ತು. ಅದಾದ ಬಳಿಕ ಫೀನಿಕ್ಸ್ ಹಕ್ಕಿಯಂತೆ ಎದ್ದುಬಂದ ದಿನೇಶ್ ಇದೀಗ ಎರಡನೇ ಮದುವೆಯಾಗಿ ಸುಂದರ ಜೀವನ ನಡೆಸುತ್ತಿದ್ದಾರೆ.
ದೀಪಿಕಾ ಪಳ್ಳಿಕಲ್ ಅವರನ್ನು ಎರಡನೇ ಮದುವೆಯಾಗಿರುವ ದಿನೇಶ್ ಕಾರ್ತಿಕ್ ಅವರಿಗೆ ಇಬ್ಬರು ಅವಳಿ ಮಕ್ಕಳಿದ್ದಾರೆ.