18+ ವಯಸ್ಕರಿಗೆ ಮಾತ್ರ : ವಿರಾಟ್ ಕೊಹ್ಲಿ ಸೊಸೆಯ ಹಸಿಬಿಸಿ ವಿಡಿಯೋಗಳು ಲೀಕ್‌..! ದೃಶ್ಯಗಳನ್ನು ನೋಡಿ ಫ್ಯಾನ್ಸ್‌ ಶಾಕ್‌

Wed, 11 Sep 2024-6:44 pm,

ಜನಪ್ರಿಯ ನಟಿ ಅನುಷ್ಕಾ ಶರ್ಮಾ ಸಹೋದರಿಯಾಗಿರುವ ರುಹಾನಿ ಶರ್ಮಾ, ಹಲ್‌ಚಲ್‌ ದೃಶ್ಯಗಳು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ.. ಅಲ್ಲದೆ, ಭಾರೀ ಟ್ರೋಲಿಂಗ್ ಎದುರಿಸುವಂತಾಗಿದೆ. ಅಷ್ಟಕ್ಕೂ ಆಗಿದ್ದೇನು..? ವೈರಲ್‌ ವಿಡಿಯೋದಲ್ಲಿ ಏನಿದೆ..? ಬನ್ನಿ ನೋಡೋಣ..   

ಹಿಮಾಚಲ ಪ್ರದೇಶದ ಸೋಲನ್‌ನಲ್ಲಿ ಹುಟ್ಟಿ ಬೆಳೆದ ರುಹಾನಿ ಶರ್ಮಾ ಚಂಡೀಗಢದ ಪಂಜಾಬ್ ವಿಶ್ವವಿದ್ಯಾಲಯದಿಂದ ಪದವಿ ಪಡೆದಿದ್ದಾರೆ. ಈಕೆ ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಅವರ ಸೋದರ ಸಂಬಂಧಿ. ಈಗ ಹೆಚ್ಚಾಗಿ ತೆಲುಗು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ.   

ರುಹಾನಿ 2013 ರಲ್ಲಿ ಪಂಜಾಬಿ ಮ್ಯೂಸಿಕ್ ವೀಡಿಯೋಗಳಾದ 'ತೇಕಾ ಬೈ ಅಮ್ಮಿ ಬಾಸ್', 'ಕ್ಲಾಸ್ ರೂಂ' ಮತ್ತು 'ಕುಡಿ ತು ಪಟಾಕಾ' ಮೂಲಕ ಬಣ್ಣದ ಲೋಕಕ್ಕೆ ಪಾದಾರ್ಪಣೆ ಮಾಡಿದರು. 2017 ರಲ್ಲಿ, ತಮಿಳು ಸಿನಿಮಾ 'ಕಡೈಸಿ ಬೆಂಚ್ ಕಾರ್ತಿ' ಮೂಲಕ ಸಿನಿ ಜರ್ನಿ ಪ್ರಾರಂಭಿಸಿದರು.   

ಟಾಲಿವುಡ್‌ಗೆ ಕಾಲಿಟ್ಟ ನಟಿ, ರಾಹುಲ್ ರವೀಂದ್ರನ್ ನಿರ್ದೇಶನದ 'ಚಿ ಲಾ ಸೌ' ಚಿತ್ರದ ಮೂಲಕ ತೆಲುಗು ಪ್ರೇಕ್ಷಕರಿಗೆ ಪರಿಚಯವಾದರು. 'ಹಿಟ್: ದಿ ಫಸ್ಟ್ ಕೇಸ್' ಮತ್ತು 'ನೂತೊಕ್ಕ ಜಿಲ್ಲೆ ಅಂದಗಾಡು' ಸೇರಿದಂತೆ ಹಲವಾರು ಸಿನಿಮಾಗಳಲ್ಲಿ ನಟಿಸಿದ್ದಾರೆ.  

ರುಹಾನಿ ಶರ್ಮಾ 'ಆಗ್ರಾ' ಚಿತ್ರದ ಮೂಲಕ ಬಾಲಿವುಡ್‌ಗೆ ಪಾದಾರ್ಪಣೆ ಮಾಡಿದರು. ಇದರಲ್ಲಿ ಮೋಹಿತ್ ಅಗರ್ವಾಲ್, ಪ್ರಿಯಾಂಕಾ ಬೋಸ್, ರುಹಾನಿ ಶರ್ಮಾ, ವಿಭಾ ಚಿಬ್ಬರ್, ಸೋನಾಲ್ ಝಾ ಮತ್ತು ಆಂಚಲ್ ಗೋಸ್ವಾಮಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.   

ಲೈಂಗಿಕ ಹತಾಶೆಯೊಂದಿಗೆ ಪುರುಷರ ಹೋರಾಟಗಳು ಭಾರತದಲ್ಲಿ ಪಿತೃಪ್ರಭುತ್ವವನ್ನು ವಿಶ್ಲೇಷಿಸುವ ಕಥೆ ʼಆಗ್ರಾʼ ಚಿತ್ರದಲ್ಲಿದೆ. ಸಿನಿಮಾ ಆನ್‌ಲೈನ್‌ನಲ್ಲಿ ಸೋರಿಕೆಯಾದ ನಂತರ, ಚಿತ್ರದ ಕೆಲವು ಇಂಟಿಮೇಟ್ ದೃಶ್ಯಗಳ ತುಣುಕುಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿವೆ. ಇದರಿಂದಾಗಿ ರಹಾನಿ ಶರ್ಮಾ ನೆಟಿಜನ್‌ಗಳಿಂದ ಟ್ರೋಲ್‌ಗೆ ಒಳಗಾಗಿದ್ದರು.  

ಟ್ರೋಲ್‌ ಬಗ್ಗೆ ಬೇಸರ ವ್ಯಕ್ತ ಪಡಿಸಿರುವ ರುಹಾನಿ, 'ತಿಂಗಳುಗಟ್ಟಲೆ ಶ್ರಮ, ನಿದ್ದೆ ಇಲ್ಲದ ರಾತ್ರಿಗಳು, ಬೆವರು ಹರಿಸಿ ಉತ್ಸಾಹದಿಂದ ನಟಿಸಿ ಪ್ರೇಕ್ಷಕರಿಗೆ ಸಮರ್ಪಣೆ ಮಾಡಬೇಕು ಎಂದು ಕೊಳ್ಳುವಾಗ ಈ ರೀತಿಯ ಮಾತುಗಳು ನೋವುಂಟು ಮಾಡುತ್ತವೆ ಅಂತ ಹೇಳಿದ್ದರು.  

ಅಲಲದೆ, ಈ ರೀತಿಯ ಯೋಜನೆಗೆ ಜೀವ ತುಂಬುವ ರಕ್ತ, ಬೆವರು ಮತ್ತು ಕಣ್ಣೀರನ್ನು ಅರ್ಥಮಾಡಿಕೊಳ್ಳದೆ ಕೆಲವರು ತೀರಾ ಕೀಳಾಗಿ ಕಾಣುತ್ತಾರೆ. ಕೇನ್ಸ್ ಚಲನಚಿತ್ರೋತ್ಸವದಲ್ಲಿ ಆಗ್ರಾ ಪ್ರದರ್ಶನಗೊಳ್ಳುವ ಏಕೈಕ ಚಲನಚಿತ್ರವಲ್ಲ, ಇದು ಕಲಾವಿದನಿಗೆ ಸಂದ ಪ್ರತಿಷ್ಠಿತ ಗೌರವ. ಈ ಚಿತ್ರವು ಅಂತಾರಾಷ್ಟ್ರೀಯ ಮನ್ನಣೆಯನ್ನು ಪಡೆಯಿತು. ಹಲವು ಪ್ರಶಸ್ತಿಗಳನ್ನು ಗೆದ್ದಿದೆ. ನಮ್ಮ ಪ್ರಯತ್ನಕ್ಕೆ ಮನ್ನಣೆ ಸಿಕ್ಕಿದೆ ಎಂದು ರುಹಾನಿ ಹೇಳಿಕೊಂಡಿದ್ದರು.   

'ನನ್ನ ನಿರ್ಧಾರಗಳಿಗೆ ನಾನು ಬದ್ಧಳಾಗಿರುತ್ತೇನೆ. ಈ ಚಿತ್ರ ಮತ್ತು ಅದನ್ನು ನಿರ್ಮಿಸಿದ ತಂಡದ ಬಗ್ಗೆ ನನಗೆ ತುಂಬಾ ಹೆಮ್ಮೆ ಇದೆ. ಚಿತ್ರದ ನಿರ್ಮಾಣ ಶೈಲಿಯನ್ನು ಸಂಪೂರ್ಣವಾಗಿ ಅರ್ಥಮಾಡಿಕೊಳ್ಳದ ಅಥವಾ ಮೆಚ್ಚದವರಿಂದ ನಾನು ಗೌರವ ಬಯಸುವುದಿಲ್ಲ. ಕಲೆ ಸುಲಭ ಅಥವಾ ಆರಾಮದಾಯಕವಲ್ಲ.. ಕಲಾವಿದರ ಶ್ರಮವನ್ನು ಕಸಿದುಕೊಳ್ಳದೆ ಸಿನಿಮಾದಲ್ಲಿ ವೈವಿಧ್ಯತೆಯನ್ನು ಪ್ರೋತ್ಸಾಹಿಸಿ ಎಂದು ನಟಿ ವಿವರಿಸಿದ್ದರು.   

ಬಾಲಿವುಡ್‌ನಲ್ಲಿ ರುಹಾನಿ ಶರ್ಮಾ ಬ್ಲ್ಯಾಕ್‌ಔಟ್ ಚಿತ್ರದಲ್ಲಿ ವಿಕ್ರಾಂತ್ ಮಾಸ್ಸೆ, ಸುನಿಲ್ ಗ್ರೋವರ್, ಮೌನಿ ರಾಯ್, ಜಿಶು ಸೆಂಗುಪ್ತಾ, ಅನಂತ್ ವಿಜಯ್ ಜೋಶಿ, ಪ್ರಸಾದ್ ಓಕ್, ಕೆಲ್ಲಿ ದೋರ್ಜಿ,. ನಟಿ ಮುಂದೆ ತಮಿಳು ಥ್ರಿಲ್ಲರ್ ಮಾಸ್ಕ್ ನಲ್ಲಿ ಕವಿನ್ ಎದುರು ಕಾಣಿಸಿಕೊಳ್ಳಲಿದ್ದಾರೆ.  

ZEENEWS TRENDING STORIES

By continuing to use the site, you agree to the use of cookies. You can find out more by Tapping this link