Rule Change: ಸೆಪ್ಟೆಂಬರ್ 1 ರಿಂದ Smartphone ಬಳಕೆದಾರರ ಪಾಲಿಗೆ ಬದಲಾಗುತ್ತಿವೆ ಈ 5 ನಿಯಮಗಳು, ನೀವೂ ತಿಳಿದುಕೊಳ್ಳಿ

Mon, 30 Aug 2021-3:41 pm,

1. Disney+ Hotstar ಚಂದಾ - OTT ಪ್ಲಾಟ್‌ಫಾರ್ಮ್ ಡಿಸ್ನಿ + ಹಾಟ್‌ಸ್ಟಾರ್ ಬಳಸುವ ಬಳಕೆದಾರರಿಗೆ  ಸೆಪ್ಟೆಂಬರ್ 1 ರಿಂದ ಚಂದಾ ಶುಲ್ಕದಲ್ಲಿ ಏರಿಕೆಯಾಗಲಿದೆ. ಹೌದು,  ಇನ್ಮುಂದೆ ಬಳಕೆದಾರರ ಮೂಲ ಯೋಜನೆ ರೂ 399 ರ ಬದಲಾಗಿ ರೂ 499 ಆಗಲಿದೆ. ಇದೇ ವೇಳೆ ಬಳಕೆದಾರರು ಕೂಡ ರೂ 100 ಹೆಚ್ಚುವರಿ ಶುಲ್ಕವನ್ನು ಪಾವತಿಸಬೇಕಾಗಲಿದೆ. ಅಲ್ಲದೆ, ರೂ. 899 ಪಾವತಿಸಿ ಗ್ರಾಹಕರು ಎರಡು ಫೋನ್‌ಗಳಲ್ಲಿ ಡಿಸ್ನಿ + ಹಾಟ್‌ಸ್ಟಾರ್ ಆಪ್ ಅನ್ನು  ಚಲಾಯಿಸಬಹುದು. ಈ ಯೋಜನೆಯಲ್ಲಿ HD ಗುಣಮಟ್ಟ ಲಭ್ಯವಿದೆ. ಇದೇ ವೇಳೆ, ಈ ಆಪ್ ಅನ್ನು 4 ಸ್ಕ್ರೀನ್ ಗಳ ಮೇಲೆ ರನ್ ಮಾಡಲು ಗ್ರಾಹಕರು ರೂ.1499 ಪಾವತಿಸಬೇಕು.

2. Amazon ನಿಂದ ಸರಕು ತರಿಸಿಕೊಳ್ಳುವುದು ದುಬಾರಿಯಾಗಲಿದೆ - ದೇಶದ ಹೆಚ್ಚಿನ ಜನರು ಆನ್‌ಲೈನ್‌ನಲ್ಲಿ ಸರಕುಗಳನ್ನು ಆರ್ಡರ್ ಮಾಡಲು ಇ-ಕಾಮರ್ಸ್ ಪ್ಲಾಟ್‌ಫಾರ್ಮ್ ಅಮೆಜಾನ್ ಅನ್ನು ಬಳಸುತ್ತಾರೆ. ಆದರೆ ಡೀಸೆಲ್ ಮತ್ತು ಪೆಟ್ರೋಲ್ ಬೆಲೆ ಏರಿಕೆಯಾಗಿರುವ ಹಿನ್ನೆಲೆ ಕಂಪನಿ ಲಾಜಿಸ್ಟಿಕ್ಸ್ ವೆಚ್ಚವನ್ನು ಹೆಚ್ಚಿಸಬಹುದು. ಹೌದು, ಈ ಕಾರಣದಿಂದಾಗಿ, ಇನ್ಮುಂದೆ ಗ್ರಾಹಕರು 500 ಗ್ರಾಂ ಪ್ಯಾಕೇಜ್‌ಗೆ ರೂ. 58 ಶುಲ್ಕ ಪಾವತಿಸಬೇಕಾಗಬಹುದು, ಇದರ ಪ್ರಾದೇಶಿಕ ವೆಚ್ಚ ರೂ 36.50 ಆಗಿರುತ್ತದೆ.

3.Google Drive ನಲ್ಲಿ ಈ ಬದಲಾವಣೆಗಳಾಗಲಿವೆ - ಬಹುತೇಕ ಅಂಡ್ರಾಯಿಡ್ ಬಳಕೆದಾರರು  ಬಳಸುತ್ತಾರೆ. ಇದನ್ನು ಬಳಸಲು, ಇದೀಗ ಬಳಕೆದಾರರ ಭದ್ರತೆಯನ್ನು ಮತ್ತಷ್ಟು ಹೆಚ್ಚಿಸಲಾಗಿದೆ. ಹೌದು, ಸೆಪ್ಟೆಂಬರ್ 13 ರಿಂದ, ಜನರು ಹೊಸ ಭದ್ರತಾ ನವೀಕರಣವನ್ನು ಪಡೆಯಲಿದ್ದಾರೆ. ಇದರಿಂದಾಗಿ ಗೂಗಲ್ ಡ್ರೈವ್ ಬಳಕೆ ಮೊದಲಿಗಿಂತ ಹೆಚ್ಚು ಸುರಕ್ಷಿತವಾಗಲಿದೆ.

4. Personal Loan App - 15 ಸೆಪ್ಟೆಂಬರ್ 2021 ರಿಂದ ಗೂಗಲ್ ಪ್ಲೇ ಸ್ಟೋರ್‌ಗೆ ಹೊಸ ನಿಯಮಗಳು ಜಾರಿಗೆ ಬರಲಿವೆ. ಹೊಸ ನಿಯಮಗಳ ಪ್ರಕಾರ, ಶಾರ್ಟ್ ಪರ್ಸನಲ್ ಲೋನ್ ಆಪ್ (Short Personal Loan App)  ಅನ್ನು ದೇಶದಲ್ಲಿ ನಿಷೇಧಿಸಲಾಗುವುದು, ಇದು ಸಾಲದ ಹೆಸರಿನಲ್ಲಿ ಮೋಸ ಮಾಡುವ ಮೂಲಕ ಸಾಲಗಾರರಿಗೆ ಕಿರುಕುಳ ನೀಡುತ್ತದೆ. ಅನೇಕ ಜನರು 100 ಕಿರು ಸಾಲ ನೀಡುವ ಅಪ್ಲಿಕೇಶನ್‌ಗಳ ಬಗ್ಗೆ ದೂರು ನೀಡಿದ್ದಾರೆ, ಅವುಗಳಿಂದ ಜನ ತುಂಬಾ ಬೇಸತ್ತು ಹೋಗಿದ್ದಾರೆ. ಹೊಸ ನಿಯಮಗಳ ಪ್ರಕಾರ ಇಂತಹ ಆಪ್‌ಗಳನ್ನು ನಿಷೇಧಿಸಲು ಗೂಗಲ್ ನಿರ್ಧರಿಸಿದೆ. ಆಪ್ ಡೆವಲಪರ್‌ಗಳು ಕಿರು ಸಾಲದ ಅಪ್ಲಿಕೇಶನ್‌ಗೆ ಸಂಬಂಧಿಸಿದಂತೆ ಹೆಚ್ಚಿನ ದಾಖಲೆಗಳನ್ನು ಒದಗಿಸಬೇಕಾಗುತ್ತದೆ. ಈ ಆಪ್ ಗಳ ಪಟ್ಟಿಯಲ್ಲಿ Xiaomi, Realme ನಂತಹ ಕಂಪನಿಗಳು ಶಾರ್ಟ್ ಪರ್ಸನಲ್ ಲೋನ್ ಆಪ್‌ ಗಳೂ ಕೂಡ ಶಾಮೀಲಾಗಿವೆ.

5. ನಕಲಿ ಅಂಡ್ರಾಯಿದ್ ಆಪ್ ಗಳನ್ನು ತೆಗೆದು ಹಾಕಲಾಗುವುದು - ಗೂಗಲ್ ತನ್ನ ಹೊಸ ಗೌಪ್ಯತೆ ನೀತಿಯನ್ನು ಸೆಪ್ಟೆಂಬರ್ 1 ರಿಂದ ಜಾರಿಗೆ ತರಲಿದೆ. ಇಂತಹ ಪರಿಸ್ಥಿತಿಯಲ್ಲಿ, ತಪ್ಪು ವಿಷಯವನ್ನು ಪ್ರಚಾರ ಮಾಡುವ ಯಾವುದೇ ಅಪ್ಲಿಕೇಶನ್‌ಗಳನ್ನು ನಿಷೇಧಿಸಲಾಗುತ್ತದೆ. ಆಪ್ ಡೆವಲಪರ್‌ಗಳ ಪರವಾಗಿ, ದೀರ್ಘಕಾಲದವರೆಗೆ ಬಳಸದೇ ಇರುವ ಆಪ್‌ಗಳನ್ನು ನಿರ್ಬಂಧಿಸುವುದಾಗಿ ಗೂಗಲ್ ತನ್ನ ಬ್ಲಾಗ್ ಪೋಸ್ಟ್‌ನಲ್ಲಿ ಮಾಹಿತಿಯನ್ನು ಹಂಚಿಕೊಂಡಿದೆ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link