ದುಬಾರಿ ಹೇರ್‌ ಪ್ರಾಡಕ್ಟ್‌ ಬೇಡವೇ ಬೇಡ.. ಈ ಬೀಜ ನೆನಸಿದ ನೀರು ಕುಡಿದ್ರೆ ಸಾಕು ಮೊನಕಾಲುದ್ದ ಕಪ್ಪು ಕೂದಲು ನಿಮ್ಮದಾಗುತ್ತೆ!

Sun, 27 Oct 2024-11:11 am,

ಸುಡುವ ಬಿಸಿಲಿನಿಂದ ಮುಕ್ತಿ ಹೊಂದಲು ಬಯಸುವ ನಮಗೆಲ್ಲರಿಗೂ ಸಬ್ಜಾ ನೀರು ಒಂದು ಒಳ್ಳೆಯ ಪರಿಹಾರ.. ಈ ಸಬ್ಜಾ ಬೀಜಗಳನ್ನು ನೀರಿನಲ್ಲಿ ನೆನಸಿ ಆ ನೀರನ್ನು ಕುಡಿಯುವುದರಿಂದ ಸಾಕಷ್ಟು ಪ್ರಯೋಜನಗಳಿವೆ..      

ಇನ್ನು ಇತ್ತೀಚೆಗೆ ಸಾಮಾನ್ಯವಾಗಿ ಎಲ್ಲರನ್ನು ಭಾದಿಸುತ್ತಿರುವ ಸಮಸ್ಯೆ ಎಂದರೇ ಅದು ಕೂದಲು ಉದುರುವುದು.. ಈ ಸಮಸ್ಯೆ ಇದ್ದವರು ಪ್ರತಿದಿನ ಬೆಳಗಿನ ಜಾವ ಸಬ್ಜಾ ನೀರನ್ನು ಕುಡಿಯುವ ಅಭ್ಯಾಸ ಮಾಡಿಕೊಂಡರೆ ಖಂಡಿತವಾಗಿಯೂ ಕೂದಲನ್ನು ಬುಡದಿಂದ ಸ್ಟ್ರಾಂಗ್‌ ಮಾಡಬಹುದಾಗಿದೆ..       

ಈ ಪರಿಹಾರವನ್ನು ಮಾಡಲು ಇಂದು ಚಮಚ ಸಬ್ಜಾ ಬೀಜಗಳನ್ನು ಒಂದು ಲೋಟ ನೀರಿಗೆ ಹಾಕಿ ಕನಿಷ್ಠ 30 ನಿಮಿಷಗಳ ಕಾಲ ನೆನೆಯಲು ಬಿಡಿ.. ನಂತರ ಆ ನೀರಿಗೆ ಒಂದು ಚಮಚ ಜೇನು ತುಪ್ಪ ಹಾಗೂ ಅರ್ಧ ನಿಂಬೆ ರಸವನ್ನು ಹಿಂಡಿ ಕುಡಿಯಿರಿ..       

ಈ ರೀತಿಯ ಡ್ರಿಂಕ್‌ನ್ನು ನಿತ್ಯ ಕುಡಿದರೇ ಕೂದಲಿನ ಸಮಸ್ಯೆ ಮಾತ್ರವಲ್ಲದೇ ಹೊಟ್ಟೆಯುರಿ, ಅಜೀರ್ಣದಂತಹ ಆರೋಗ್ಯ ಸಮಸ್ಯೆಗಳನ್ನು ಸಹ ಕಡಿಮೆ ಮಾಡಬಹುದು..       

ಸಾಕಷ್ಟು ಪೌಷ್ಠಿಕಾಂಶವುಳ್ಳ ಸಬ್ಜಾ ಬೀಜಗಳು ಸ್ವಲ್ಪ ಗಟ್ಟಿಯಾಗಿರುತ್ತವೆ.. ಆದರೆ ಈ ಬೀಜಗಳು ಫೈಬರ್ ಮತ್ತು ಪ್ರೋಟೀನ್‌ನಲ್ಲಿ ಸಮೃದ್ಧವಾಗಿವೆ.. ವಿಶೇಷವೆಂದರೇ ಇವುಗಳಿಂದ ತೂಕವನ್ನು ಕಳೆದುಕೊಳ್ಳಬಹುದಾಗಿದೆ..       

ಸೂಚನೆ:  ಪ್ರಿಯ ಓದುಗರೇ, ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ದಯವಿಟ್ಟು ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.    

ZEENEWS TRENDING STORIES

By continuing to use the site, you agree to the use of cookies. You can find out more by Tapping this link