Sadha: ಮೆರೂನ್ ಗೌನ್‌ನಲ್ಲಿ ನೆಟ್ಟಿಗರ ಗಮನ ಸೆಳೆದ ಕನ್ನಡದ ಮೊನಾಲಿಸಾ!
ಸ್ಯಾಂಡಲ್‌ವುಡ್ ನಟಿ ಸದಾ ವೈನ್ ಕಲರ್ ಗೌನ್‌ನಲ್ಲಿ ಫ್ರೀ ಹೇರ್ ಬಿಟ್ಟುಕೊಂಡು ಹೊಸ ಫೋಟೋಶೂಟ್ ಮಾಡಿಸಿ ಗಮನ ಸೆಳೆದಿದ್ದಾರೆ. ಈ ನಟಿ ಜಯಂ ಸಿನಿಮಾ ಮೂಲಕ ಸಿನಿಮಾರಂಗಕ್ಕೆ ಪದಾರ್ಪಣೆ ಮಾಡಿದ್ದಾರೆ.
ನಟಿ ಸದಾ ಕನ್ನಡದ ಮೊನಾಲಿಸಾ ಸಿನಿಮಾ ಮೂಲಕ ಕನ್ನಡಿಗರಿಗೆ ಪರಿಚರವಾದವರು, ನಂತರ ಹುಡುಗ-ಹುಡುಗಿ, ಮೈಲಾರಿ, ಮಲ್ಲಿಕಾರ್ಜುನ, ಆರಕ್ಷಕ ಸಿನಿಮಾದಲ್ಲಿ ಅಭಿನಯಿಸಿ ಸೈ ಎನಿಸಿಕೊಂಡಿದ್ದಾರೆ.
ಸೌತ್ ನಟಿ ಸದಾ ಕನ್ನಡ ಚಿತ್ರರಂಗದಲ್ಲಿ ಮಾತ್ರವಲ್ಲದೇ ತೆಲುಗು, ತಮಿಳು, ಮಲೆಯಾಳಂ ಹಾಗೂ ಹಿಂದಿ ಸಿನಿಮಾಗಳಲ್ಲಿಯೂ ಕೂಡ ನಟಿಸಿ ಪೇಕ್ಷಕರ ಗಮನ ಸೆಳೆದಿದ್ದಾರೆ.
ನಟಿ ಸದಾ ಇತ್ತೀಚೆಗೆ ಫೋಟೋಗ್ರಫಿಯಲ್ಲಿ ಹೆಚ್ಚು ಆಸಕ್ತಿ ತೋರಿಸಿದ್ದಾರೆ. ಆಗಾಗ ವೀಕೆಂಡ್ ನಲ್ಲಿ ಕಾಡು ಮೇಡು ಸುತ್ತಿ ತಮ್ಮ ಕ್ಯಾಮೆರಾದಲ್ಲಿ ವೈಲ್ಡ್ ಫೋಟೋಗ್ರಫಿ ಮಾಡುತ್ತಾ ಪ್ರಾಣಿ ಪಕ್ಷಿಯ ಫೋಟೋಗಳನ್ನ ಸೆರೆ ಹಿಡಿಯುತ್ತಾರೆ.
ನಟಿ ಸದಾ ಮುಂಬೈನಲ್ಲಿ ವಾಸವಾಗಿದ್ದು ಮನೆಯಲ್ಲಿ ಬೆಕ್ಕುಗಳನ್ನ ಸಾಕಿದ್ದಾರೆ. ಅಷ್ಟು ಮಾತ್ರವಲ್ಲದೇ ಗೋಶಾಲೆಗಳಿಗೂ ಭೇಟಿ ನೀಡುತ್ತಾ ಸಮಯ ಕಳೆಯುತ್ತಾರೆ.
ದಕ್ಷಿಣ ಸಿನಿರಂಗದ ನಟಿ ಸದಾ ಸಿನಿಮಾರಂಗದಲ್ಲಿ ಮಾತ್ರವಲ್ಲದೇ ತೆಲುಗು ಟೆಲಿವಿಷನ್ ಇಂಡಸ್ಟ್ರಿಯಲ್ಲಿ ಡ್ಯಾನ್ಸ್ ಹಾಗೂ ಸಿಂಗಿಂಗ್ ಷೋಗಳಲ್ಲೂ ಕೂಡ ತೀರ್ಪುಗಾರರಾಗಿ ಕೆಲಸ ಮಾಡಿದ್ದಾರೆ.