Sai Pallavi: ಉಡುಪಿ ಶ್ರೀ ಕೃಷ್ಣ ಮಠಕ್ಕೆ ಭೇಟಿ ನೀಡಿದ ಸೌತ್‌ ನ್ಯಾಚುರಲ್‌ ಬ್ಯೂಟಿ!

Fri, 22 Dec 2023-2:40 pm,

ದಕ್ಷಿಣ ಭಾರತದ ಸುಪ್ರಸಿದ್ದ ಸ್ಯಾಚುರಲ್‌ ಬ್ಯೂಟಿ ನಟಿ ಸಾಯಿ ಪಲ್ಲವಿ, ಇತ್ತೀಚೆಗೆ ಉಡುಪಿ ಶ್ರೀ ಕೃಷ್ಣ ಮಠಕ್ಕೆ ಭೇಟಿ ನೀಡಿದ್ದಾರೆ. 

ನಟಿ ಸಾಯಿ ಪಲ್ಲವಿ ಖಾಸಗಿ ಕಾರ್ಯ ನಿಮಿತ್ತ ಕರಾವಳಿಗೆ ಬಂದಿರುವ ಸೌತ್‌ ಸುಂದರಿ ಕನಕ ನವಗ್ರಹ ಕಿಂಡಿಯ ಮೂಲಕ ಕೃಷ್ಣ ದೇವರ ದರ್ಶನ ಕೈಗೊಂಡಿದ್ದಾರೆ.

ಸೌತ್‌ ಬೆಡಗಿ ಸಾಯಿ ಪಲ್ಲವಿ ಕಾಣಿಯೂರು ಮಠಕ್ಕೆ ತೆರಳಿ ಶ್ರೀ ವಿದ್ಯಾ ವಲ್ಲಭ ತೀರ್ಥ ಸ್ವಾಮೀಜಿ ಅವರಿಂದ ಆಶೀರ್ವಾದ ಪಡೆದರು.

ಉಡುಪಿ ಶ್ರೀ ಕೃಷ್ಣ ಮಠಕ್ಕೆ ಭೇಟಿ ನೀಡಿದ ಸಾಯಿ ಪಲ್ಲವಿರನ್ನು ಮಠದ ವತಿಯಿಂದ ಗೌರವಿಸಲಾಯಿತು.

ಇತ್ತೀಚೆಗೆ ನಟಿ ಸಾಯಿ ಪಲ್ಲವಿ ರಾಕಿಂಗ್‌ ಸ್ಟಾರ್‌ ಯಶ್‌ ಮುಂಬರುವ ಟಾಕ್ಸಿಕ್‌ ಚಿತ್ರಕ್ಕೆ ನಾಯಕಿಯಾಗಿದ್ದಾರೆಂಬ ಅಂತೆ-ಕಂತೆ ಸುದ್ದಿ ಹರಿದಾಡುತ್ತಿತ್ತು.

ನಟಿ ಸಾಯಿ ಪಲ್ಲವಿ ಟಾಲಿವುಡ್‌ ನಟ ನಾಗ ಚೈತನ್ಯ ಜೊತೆಗೆ ಲವ್‌ ಸ್ಟೋರಿ ಸಿನಿಮಾ ಬಳಿಕ ಮತ್ತೊಂದು ಚಿತ್ರದಲ್ಲಿ ಒಟ್ಟಾಗಿ ಅಭಿನಯಿಸಲಿದ್ದಾರೆಂಬ ಮಾಹಿತಿ ನೀಡಿದ್ದರು. 

ನ್ಯಾಚುರಲ್‌ ಸುಂದರಿ ಯಾವ ಈ ವರ್ಷ ಯಾವ ಸಿನಿಮಾಗಳಲ್ಲಿ ನಟಿಸದಿದ್ದರು, ತಂಡಲ್‌ ಹಾಗೂ SK 21 ಸಿನಿಮಾ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ.  

ZEENEWS TRENDING STORIES

By continuing to use the site, you agree to the use of cookies. You can find out more by Tapping this link