ಕರೀನಾ ಕಪೂರ್‌ ಅಲ್ಲ..ʻಈʼವಿದೇಶಿ ಮಹಿಳೆ ಸೈಫ್‌ ಅಲಿ ಖಾನ್‌ ಅವರ ಎರಡನೇ ಪತ್ನಿ! ಯಾರು ಗೊತ್ತಾ?ಈಕೆ ಕೂಡ ತುಂಬಾ ಫೇಮಸ್‌

Sun, 22 Sep 2024-10:29 am,

ಕರೀನಾ ನಟ ಸೈಫ್ ಅಲಿ ಖಾನ್ ಅವರ ಎರಡನೇ ಪತ್ನಿ ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರ ಆದರೆ ನಟಿಗೂ ಮುನ್ನ ಸೈಫ್‌ ಅಲಿ ಖಾನ್‌ ಬೇರೊಂದು ಮಹಿಳೆಯನ್ನು ಡೇಟ್‌ ಮಾಡಿದ್ದು, ಆ ಮಹಿಳೆ ಮೂಲತಃ ವಿದೇಶದವರು.  

ಬಾಲಿವುಡ್‌ನಲ್ಲಿ ಸಾಕಷ್ಟು ಚರ್ಚೆಯಾಗುವ ಜೋಡಿಗಳಲ್ಲಿ ಕರೀನಾ ಕಪೂರ್‌ ಹಾಗೂ ಸೈಫ್‌ ಅಲಿ ಖಾನ್‌ ಜೋಡಿ ಕೂಡ ಒಂದು. ಈ ಜೋಡಿಗೆ ಇಬ್ಬರು ಮಕ್ಕಳು ಸಹ ಇದ್ದಾರೆ.  

ನಟ ಸೈಫ್‌ ಅಲಿ ಖಾನ್‌ ಮೊದಲು ಮದುವೆಯಾಗಿದ್ದು ನಟಿ ಅಮೃತಾ ಸಿಂಗ್‌ ಅವರನ್ನು, ಇಬ್ಬರು ಪ್ರೀತಿಸಿ ಮದುವೆಯಾಗಿದ್ದರೂ ಸಹ, ಪರಸ್ಪರ ಒಪ್ಪಂದದ ಮೇರೆಗೆ ದೂರವಾಗಿದ್ದರು. ಈ ಜೋಡಿಗೂ ಕೂಡ ಇಬ್ಬರು ಮಕ್ಕಳಿದ್ದಾರೆ. 

ಆದರೆ ಎಲ್ಲರೂ ಇಂದು ಸಹ ಅಂದುಕೊಂಡಿರುವುದೇನೆಂದರೆ. ನಟಿ ಕರೀನಾ ಕಪೂರ್‌ ಸೈಫ್‌ ಅಲಿ ಖಾನ್‌ ಅವರ ಎರಡನೇ ಪತ್ನಿ ಎಂದು. ಆದರೆ ಸತ್ಯ ಅದಲ್ಲ. ಅಮೃತಾ ಸಿಂಗ್‌ ಅವರನ್ನು ಮದುವೆಯಾದ ಸೈಫ್‌ ಅಲಿ ಕಾನ್‌ 12 ವರ್ಷಗಳ ನಂತರ ನಟಿಯೊಂದಿಗೆ ತಮ್ಮ ಸಂಬಂಧವನ್ನು ಮುರಿದುಕೊಂಡಿದ್ದರು.   

ಅಮೃತಾ ಜೊತೆಗಿನ ವಿಚ್ಛೇದನದ ನಂತರ, ಕರೀನಾ ಜೊತೆ ಸೈಫ್ ಹೆಸರು ಚರ್ಚೆಯಾಗತೊಡಗಿತು. ಅಷ್ಟೇ ಅಲ್ಲ, ಸೈಫ್ ಹಾಗೂ ಅಮೃತ ಸಿಂಗ್‌ ವಿಚ್ಚೇದನ ಪಡೆಯುವುದಕ್ಕೆ   ಕರೀನಾ ಕಾರಣ ಎಂದು ನಟಿಯನ್ನು ದೂಷಿಸಲಾಗಿತ್ತು. ಆದರೆ ಸೈಫ್ ಮತ್ತು ಅಮೃತಾ ನಡುವೆ ಕರೀನಾ ಬರಲೇ ಇಲ್ಲ.  

ಅಮೃತಾ ಅವರೊಂದಿಗಿನ ವಿಚ್ಛೇದನದ ನಂತರ ವಿದೇಶಿ ನಟಿ ರೋಸಾ ಕ್ಯಾಟಲಾನೊ ಸೈಫ್ ಅವರ ಜೀವನವನ್ನು ಪ್ರವೇಶಿಸಿದರು. ಆದರೆ ಅವರ ಸಂಬಂಧ ಹೆಚ್ಚು ಕಾಲ ಉಳಿಯಲಿಲ್ಲ.

ವರದಿಗಳ ಪ್ರಕಾರ ಸೈಫ್ ಅಲಿ ಖಾನ್ ಸಿನಿಮಾ ಶೂಟಿಂಗ್ ಗಾಗಿ ವಿದೇಶಕ್ಕೆ ತೆರಳಿದ್ದರು. ಅಲ್ಲಿ ನಟ ರೋಸಾ ಕ್ಯಾಟಲಾನೊ ಅವರನ್ನು ಭೇಟಿಯಾದರು. ಇದರ ನಂತರ ಇಬ್ಬರೂ ಪರಸ್ಪರ ಡೇಟಿಂಗ್ ಮಾಡಲು ಪ್ರಾರಂಭಿಸಿದರು. ಆದರೆ ಸೈಫ್‌ ಅಲಿ ಖಾನ್‌ ತನಗೆ ಮದುವೆಯಾಗಿ ಮಕ್ಕಳಿದ್ದ ವಿಷಯವನ್ನು ಆಕೆಯಿಂದ ಮರೆಮಾಚಿದ್ದ.

ಸೈಫ್‌ ಅಲಿ ಖಾನ್‌ಗೆ ಮದುವೆಯಾಗಿ ಮಕ್ಕಳಿದ್ದ ವಿಚಾರ ರೋಸಾಗೆ ಗೊತ್ತಿರಲಿಲ್ಲ. ರೋಸಾ ಮುಂಬೈಗೆ ಬಂದಾಗ,ಸೈಫ್‌ ಅಲಿಖಾನ್‌ನ ಕುರಿತಾದ ಎಲ್ಲಾ ಸತ್ಯಗಳು ಅವಳಿಗೆ ತಿಳಿದಿತ್ತು. ಇದಾದ ನಂತರ ರೋಸಾ, ಸೈಫ್‌ರೊಂದಿಗೆ ತನ್ನ ಸಂಬಂಧವನ್ನು ಮುರಿದುಕೊಂಡಿದ್ದಳು. 

ಸೈಫ್ ಮತ್ತು ರೋಜಾ 2 ವರ್ಷಗಳ ಕಾಲ ಪರಸ್ಪರ ಡೇಟಿಂಗ್ ಮಾಡಿದ್ದರು, ಬ್ರೇಕಪ್‌ ಮಾಡಿಕೊಂಡ ನಂತರ  ರೋಸಾ ಎಲ್ಲಿ ಹೋದರು? ಏನು ಮಾಡುತ್ತಿದ್ದಾರೆ? ಎನ್ನುವ ವಿಚಾರ ಯಾರಿಗೂ ಗೊತ್ತಿಲ್ಲ.

ರೋಸಾ ಜೊತೆಗೆ ತಮ್ಮ ಸಂಬಂಧ ಮುರಿದ ನಂತರ ಸೈಫ್‌ ಜೀವನದಲ್ಲಿ ಕರೀನಾ ಕಪೂರ್ ಎಂಟ್ರಿ ಕೊಟ್ಟರು. ಸೈಫ್ - ಕರೀನಾ 5 ವರ್ಷಗಳ ಕಾಲ ಪರಸ್ಪರ ಡೇಟಿಂಗ್ ಮಾಡುತ್ತಿದ್ದರು. 2012 ರಲ್ಲಿ ಅವರಿಬ್ಬರೂ ತಮ್ಮ ಕುಟುಂಬದವರ ಸಮ್ಮುಖದಲ್ಲಿ ವಿವಾಹವಾದರು. 

ZEENEWS TRENDING STORIES

By continuing to use the site, you agree to the use of cookies. You can find out more by Tapping this link