ಖ್ಯಾತ ನಟಿ ಜೊತೆ ಫ್ಲಾಟ್‌ನಲ್ಲಿ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ರಾ ಸಲ್ಮಾನ್ ಖಾನ್.!
ಸಲ್ಮಾನ್ ಖಾನ್ ಹೆಸರು ಅನೇಕ ನಟಿಯರೊಂದಿಗೆ ತಳಕು ಹಾಕಿಕೊಂಡಿತ್ತು. ಅದರಲ್ಲಿ ಸಂಗೀತಾ ಬಿಜಲಾನಿ, ಐಶ್ವರ್ಯ ರೈ, ಕತ್ರಿನಾ ಕೈಫ್ ಮತ್ತು ಸೋಮಿ ಅಲಿ ಹೆಸರುಗಳು ಈಗಲೂ ಸುದ್ದಿಯಲ್ಲಿವೆ.
ಸೋಮಿ ಅಲಿ ತನ್ನ ಮತ್ತು ಸಲ್ಮಾನ್ ಖಾನ್ ಸಂಬಂಧದ ಬಗ್ಗೆ ಹಲವು ಬಾರಿ ಬಹಿರಂಗವಾಗಿ ಮಾತನಾಡಿದ್ದಾರೆ. ತಮ್ಮ ಡೇಟಿಂಗ್ ದಿನಗಳಲ್ಲಿ ಸಲ್ಮಾನ್ ತನ್ನ ಕೋಣೆಗೆ ಕಿಟಕಿಯ ಮೂಲಕ ಪ್ರವೇಶಿಸುತ್ತಿದ್ದರು ಎಂಬುದನ್ನು ನಟಿ ಬಹಿರಂಗಪಡಿಸಿದ್ದಾರೆ.
ಟೈಮ್ಸ್ ನೌಗೆ ನೀಡಿದ ಸಂದರ್ಶನದಲ್ಲಿ, ಸೋಮಿ ಅಲಿ ಸಲ್ಮಾನ್ ಖಾನ್ ಬಗ್ಗೆ ಮಾತನಾಡಿದ್ದಾರೆ. ಆ ಸಮಯದಲ್ಲಿ ನಾನು ವಿಂಧ್ಯಾಚಲದಲ್ಲಿ ವಾಸಿಸುತ್ತಿದ್ದೆ. ಸಲ್ಮಾನ್ ಆಗಾಗ್ಗೆ ಪೈಪ್ ಹತ್ತಿ ಕಿಟಕಿಯ ಮೂಲಕ ನನ್ನ ಕೋಣೆಗೆ ಬರುತ್ತಿದ್ದರು.
ಸಲ್ಮಾನ್ ಖಾನ್ ಹೀಗೆ ಮಾಡೋದು ನನಗೆ ತುಂಬಾ ರೋಮ್ಯಾಂಟಿಕ್ ಆಗಿ ಕಂಡಿತು. ಅದು ಎರಡು ಬೆಡ್ ರೂಮ್‌ಗಳ ಅಪಾರ್ಟ್ಮೆಂಟ್ ಆಗಿತ್ತು ಎಂದಿದ್ದಾರೆ.
ಒಂದು ದಿನ ಸಲ್ಮಾನ್ ಖಾನ್ ಬೆಳಿಗ್ಗೆ 10:30 ರ ಸುಮಾರಿಗೆ ಅಲ್ಲಿಗೆ ಬಂದಿದ್ದು ನನಗೆ ನೆನಪಿದೆ. ಆಗ ಅವರು ಸಂಗೀತಾ ಬಿಜಲಾನಿ ಜೊತೆಯೂ ಸಂಬಂಧದಲ್ಲಿದ್ದರು. ಅವರ ಮದುವೆಯ ಕಾರ್ಡ್‌ಗಳನ್ನು ಸಹ ಮುದ್ರಿಸಲಾಗಿತ್ತು ಎಂದಿದ್ದಾರೆ.
ಈ ವೇಳೆ ಸಂಗೀತಾ ಅವರು ಸಲ್ಮಾನ್ ಅವರನ್ನು ರೆಡ್ ಹ್ಯಾಂಡ್ ಆಗಿ ಹಿಡಿದಿದ್ದರು ಎಂದು ಸೋಮಿ ಬಹಿರಂಗಪಡಿಸಿದ್ದಾರೆ. ಸಲ್ಮಾನ್ ಮತ್ತು ನಾನು ನನ್ನ ಕೋಣೆಯಲ್ಲಿದ್ದೆವು ಎಂದಿದ್ದಾರೆ.
ಸಂಗೀತಾ ಬಿಜಲಾನಿ ನನ್ನ ಪ್ಲ್ಯಾಟ್ ಬಾಗಿಲು ತಟ್ಟಿ ಒಳಗೆ ಬಂದರು. ಆ ವೇಳೆ ನನ್ನ ಜೊತೆ ಸಲ್ಮಾನ್ ಖಾನ್ ಇದ್ದರು. ನಾವಿಬ್ಬರೂ ರೆಡ್ ಹ್ಯಾಂಡ್ ಆಗಿ ಸಂಗೀತಾ ಕೈಯಲ್ಲಿ ಸಿಕ್ಕಿ ಬಿದ್ದಿದ್ದೆವು ಎಂದು ಸೋಮಿ ಅಲಿ ಹೇಳಿದ್ದಾರೆ.