ಜೂಹಿ ಚಾವ್ಲಾ ಪತಿಯಾಗಬೇಕಿತ್ತು ಸಲ್ಮಾನ್ ಖಾನ್! ಆದರೆ ಈ ವ್ಯಕ್ತಿಯ ಕಾರಣದಿಂದ ನಡೆಯಲಿಲ್ಲ ಮದುವೆ

Wed, 29 May 2024-8:31 am,

ಸಲ್ಮಾನ್ ಖಾನ್ ಅವರು ಜೂಹಿಯನ್ನು ತುಂಬಾ ಇಷ್ಟಪಡುತ್ತಿದ್ದರಂತೆ. ಜೂಹಿ ಚಾವ್ಲಾ ತಂದೆಯ ಬಳಿ ಈ ಬಗ್ಗೆ ಕೇಳಿದ್ದರಂತೆ. ಜೂಹಿ ಚಾವ್ಲಾ ತಂದೆ ಇದನ್ನು ನಿರಾಕರಿಸಿದರಂತೆ.

ಈ ವಿಚಾರದ ಬಗ್ಗೆ ಸಂದರ್ಶನವೊಂದರಲ್ಲಿ ಜೂಹಿ ಚಾವ್ಲಾ ಮಾತನಾಡಿದ್ದರು. "ಅವರು ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದಾಗ ಸಲ್ಮಾನ್ ಅವರು ಇಂದು ಇರುವ 'ಭಾಯ್‌ ಜಾನ್‌ ಸಲ್ಮಾನ್ ಖಾನ್' ಆಗಿರಲಿಲ್ಲ ಎಂದು ಹೇಳಿದ್ದಾರೆ.

ಇತ್ತೀಚೆಗೆ ವೈರಲ್‌ ಆದ 1990 ರ ಸುಮಾರಿಗೆ ಸಲ್ಮಾನ್ ಖಾನ್ ನೀಡಿದ ಸಂದರ್ಶನದ ವಿಡಿಯೋವೊಂದರಲ್ಲಿ, ಜೂಹಿ ತುಂಬಾ ಸ್ವೀಟ್‌, ಅವಳು ಮುದ್ದಾಗಿದ್ದಾಳೆ. ನಾನು ಅವಳನ್ನು ಮದುವೆಯಾಗುತ್ತೇನೆ ಎಂದು ಅವಳ ತಂದೆಗೆ ಕೇಳಿದ್ದೆ. ಆದರೆ ಅವರು ನಿರಾಕರಿಸಿದರು ಎಂದು ಸಲ್ಮಾನ್‌ ಖಾನ್‌ ಹೇಳಿದ್ದಾರೆ. 

ಜೂಹಿ ಸಲ್ಮಾನ್ ಖಾನ್ ಅವರೊಂದಿಗೆ ಯಾವುದೇ ಚಿತ್ರದಲ್ಲಿ ಕೆಲಸ ಮಾಡಿಲ್ಲ, ಆದರೆ ಅವರು ಅಮೀರ್ ಖಾನ್ ಅವರೊಂದಿಗೆ ಖಯಾಮತ್ ಸೆ ಕಯಾಮತ್ ತಕ್ ನಂತಹ ಸೂಪರ್‌ ಹಿಟ್ ಚಿತ್ರವನ್ನು ನೀಡಿದ್ದರು. 

ಜೂಹಿ ಚಾವ್ಲಾ ಉದ್ಯಮಿ ಜೈ ಮೆಹ್ತಾ ಅವರನ್ನು 1995 ರಲ್ಲಿ ವಿವಾಹವಾದರು. ಜೂಹಿ ಮತ್ತು ಜೈ ಅವರಿಗೆ ಜಾನ್ವಿ ಮತ್ತು ಅರ್ಜುನ್ ಎಂಬ ಇಬ್ಬರು ಮಕ್ಕಳಿದ್ದಾರೆ. 

ZEENEWS TRENDING STORIES

By continuing to use the site, you agree to the use of cookies. You can find out more by Tapping this link