ನಾಗಚೈತನ್ಯ ಮದುವೆ ಬೆನ್ನಲ್ಲೆ.. ಸಮಂತಾಗೆ ಫಾರ್ಮ್ ಹೌಸ್ ಗಿಫ್ಟ್ ಕೊಟ್ಟ ಖ್ಯಾತ ನಿರ್ಮಾಪಕ..!
Samantha: ನಟಿ ಸಮಂತಾ ಹೆಸರು ಇತ್ತೀಚೆಗೆ ಎಲ್ಲೆಡೆ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ವೃತ್ತಿಯ ಕಾರಣದಿಂದಾಗಿ ಅಷ್ಟೆ ಅಲ್ಲದೆ ನಟಿ ಸಮಂತಾ ವೈಯಕ್ತಿಕ ಕಾರಣದಿಂದಲೂ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದ್ದಾರೆ. ಇದರ ನಡುವೆ ಸಮಂತಾ ಅವರಿಗೆ ನಿರ್ಮಾಕರೊಬ್ಬರು ಫರ್ಮ್ ಹೌಸ್ ಅನ್ನು ಗಿಫ್ಟ್ ಕೊಟ್ಟಿರುವ ಸುದ್ದಿ ಸಿಕ್ಕಾಪಟ್ಟೆ ಚರ್ಚೆಯನ್ನುಂಡು ಮಾಡಿದೆ.
ನಟಿ ಸಮಂತಾ ಅವರೊಂದಿಗಿನ ವಿಚ್ಛೇದನದ ನಂತರ ಅವರ ಮಾಜಿ ಪತಿ ನಾಗಚೈತನ್ಯ ಶೋಭಿತಾ ಧೂಳಿಪಾಲ ಅವರೊಂದಿಗೆ ಇತ್ತೀಚೆಗಷ್ಟೆ ಸಪ್ತಪದಿ ತುಳಿದಿದ್ದಾರೆ, ಇದರ ಬೆನ್ನಲ್ಲೆ ನಿರ್ಮಾಪಕರೊಬ್ಬರು ಸಮಂತಾಗೆ ಫಾರ್ಮ್ ಹೌಸ್ ಹಿಫ್ಟ್ ಕೊಟಿರುವ ಸುದ್ದಿ ಮುನ್ನೆಲೆಗೆ ಬಂದಿದೆ.
ತಮ್ಮ ವಿಚ್ಛೇದನದ ನಂತರ ನಟಿ ಸಮಂತಾ ಹಲವಾರು ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿರುವ ವಿಚಾರ ಗೊತ್ತೇ ಇದೆ. ಆದರೆ, ನಟಿ ಸಮಂತಾ ಅವರಿಗೆ 10 ದಶಕದ ಹಿಂದೆ ಇದ್ದ ಡಿಮ್ಯಾಂಡ್ ಅಷ್ಟಿಷ್ಟಲ್ಲ. ಒಂದು ಕಾಲದಲ್ಲಿ ಸಾಲು ಸಾಲಿ ಪ್ರಾಜೆಕ್ಟ್‌ಗಳೊಂದಿಗೆ ಬ್ಯುಸಿಯಾಗದ್ದ ಸಮಂತಾ ಅವರಿಗೆ ಆರೋಗ್ಯ ಸಮಸ್ಯೆ ಎದುರಾಗಿತ್ತು.
ಹೌದು, ನಿರ್ಮಾಪಕ ಬೆಲ್ಲಂಕೊಂಡ ಸುರೇಶ್ ಅವರು ತಮ್ಮ ಮಗನನ್ನು ಸಿನಿಮಾ ಇಂಡಸ್ಟ್ರಿಗೆ ಪರಿಚಯಿಸಲು ಹಣಿ ಮಾಡಿಕೊಂಡಿದ್ದರು, ಅವರ ಮಗನ ಸಿನಿಮಾಗೆ ನಟಿ ಸಮಂತಾ ಅವರನ್ನು ನಾಯಕಿಯಾಗಿ ಆಯ್ಕೆ ಮಾಡಿದ್ದರು. ಆ ಸಿನಿಮಾದ ಹೆಸರು ʻಅಲ್ಲುಡು ಸೀನುʼ.
ಈ ಸಿನಿಮಾದ ಶೂಟಿಂಗ್ ನಟುವೆ ನಟಿ ಸಮಂತಾ ಅವರಿಗೆ ಚರ್ಮದ ಸಮಸ್ಯೆ ಎದುರಾಗಿತ್ತು. ಆಗಿನ ಸಮಯದಲ್ಲಿ ನಿರ್ಮಾಪಕರಾದ ಶ್ರೀನಿವಾಸ್ ಅವರು ನಟಿ ಸಮಂತಾ ಅವರ ಚಿಕಿತ್ಸೆಗೆ 25 ಲಕ್ಷ ಕೊಟ್ಟು ಸಹಾಯಮಾಡಿದ್ದರು. ಈ ವಿಚಾರವನ್ನು ಸ್ವತಃ ನಟಿ ಸಮಂತಾ ಅವರೇ ಒಪ್ಪಿಕೊಂಡಿದ್ದರು ಕೂಡ.
ನಟಿಗೆ ನೀಡಿದ ಈ 25 ಲಕ್ಷ ಹಣವನ್ನು ನಿರ್ಮಾಪಕರು ಅವರ ಸಂಭಾವನೆಯಲ್ಲಿ ಸರಿದೂಗಿಸಿದ್ದರು, 39 ಕೋಟಿ ಹೂಡಿಕೆ ಮಾಡಿ ಮಾಡಿದ್ದ ಈ ಸಿನಿಮಾ ಹಿಟ್ ಕಂಡಿತ್ತು, ಹೂಡಿಕೆ ಮಾಡಿದ ಹಣ ವಾಪಸ್ ಕೂಡ ಬಂದಿತ್ತು.
ಆದರೆ, ನಿರ್ಮಾಪಕರು ನಟಿ ಸಮಂತಾ ಅವರಿಗೆ ಫಾರ್ಮ್ ಹೌಸ್ ಕೊಟ್ಟಿದ್ದಾರೆ ಎಎನ್ನುವ ಸುದ್ದಿ ಹಾಗಾಗ ಮುಂಚೂಣಿಗೆ ಬರುತ್ತಲೇ ಇರುತ್ತದೆ ಇದೀಗ ಈ ಕುರಿತು ಮಾತನಾಡಿರುವ ನಿರ್ಮಾಪಕರು. " ಆಕೆಗೆ ಸಿನಿಮಾ ಶೂಟಿಂಗ್ ಸಮಯದಲ್ಲಿ ಆರೋಗ್ಯ ಸಮಸ್ಯೆ ಎದುರಾಗಿತ್ತು, ಆಗ ನಾನು ಹಣ ನೀಡಿ ಸಹಾಯ ಮಾಡಿದ್ದೆ ನಂತರ ನಾನು ನೀಡಿದ್ದ ಹಣವನ್ನು ಅವರಿಗೆ ನೀಡಿದ್ದ ಸಂಭಾವನೆಯಲ್ಲಿ ಕಡಿತಗೊಳಿಸಲಾಯಿತು, ಇನ್ನೂ ಫಾರ್ಮ್ ಹೌಸ್ ವಿಚಾರ ಬಿಡಿ" ಎಂದರು.
ಇದೀಗ ನಿರ್ಮಾಪಕರು ಫಾರ್ಮ್ ವಿಚಾರ ಆಗಿರ್ಲಿ ಬಿಡಿ ಎಂದಿದ್ದಾರೆ, ಇದರಿಂದ ನಿರ್ಮಾಪಕರು ಎಲ್ಲೂ ಕೂಡ ತಾವು ನಟಿ ಸಮಂತಾ ಅವರಿಗೆ ಫಾರ್ಮ್ ಹೌಸ್ ಅನ್ನು ಕೊಟ್ಟಿದ್ದೆ ಎಂದು ಹೇಳಿಲ್ಲವಾದರೂ, ಇದು ಸತ್ಯ ಎಂದು ಹಲವರು ವಾದಿಸುತ್ತಿದ್ದಾರೆ.