ಮದುವೆ ಸಂಭ್ರಮದ ಬೆನ್ನಲ್ಲೆ ನಟ ನಾಗಚೈತನ್ಯಾಗೆ ಬಿಗ್ ಶಾಕ್!! ಮಾಜಿ ಪತ್ನಿ ನಟಿ ಸಮಂತಾರಿಂದ ಲೀಗಲ್ ನೋಟಿಸ್..?!
Samantha: ನಟ ನಾಗಚೈತನ್ಯ ಇದೀ ನಟಿ ಸೋಭಿತಾ ಧೂಳಿಪಾಲ ಅವರೊಂದಿಗೆ ಹಸೆಮಣೆ ಏರಲು ಸಜ್ಜಾಗಿದ್ದಾರೆ. ಇಬ್ಬರ ಮನೆಯಲ್ಲಿಯೂ ಮದುವೆ ಕಾರ್ಯ ಆರಂಭವಾಗಿದ್ದು, ಸಂಭ್ರಮ ಮನೆಮಾಡಿದೆ. ಇದೀಗ ಸಂತಸದಲ್ಲಿದ್ದ ನಾಗಚೈತನ್ಯ ಅವರಿಗೆ ಮಾಜಿ ಪತ್ನಿ ನಟಿ ಸಮಂತಾ ಶಾಕ್ ಕೊಟ್ಟಿದ್ದಾರೆ. ನಟನಿಗೆ ಲೀಗಲ್ ನೋಟಿಸ್ ಕಳುಹಿಸಿದ್ದಾರೆ.
ಸಿನಿಮಾದಲ್ಲಿ ನಟಿಸುವಾಗ ಚೈತನ್ಯ ಸಮಂತಾಳನ್ನು ಪ್ರೀತಿಸಿ ಹಿರಿಯರ ಮನವೊಲಿಸಿ ಮದುವೆಯಾಗಿದ್ದರು, ಆದರೆ ವೈಯಕ್ತಿಕ ಕಾರಣಗಳಿಂದ ಚೈತನ್ಯ ಮತ್ತು ಸಮಂತಾ ಅಧಿಕೃತವಾಗಿ ಬೇರ್ಪಟ್ಟು ಚಿತ್ರರಂಗದಲ್ಲಿ ಬ್ಯುಸಿಯಾಗಿದ್ದಾರೆ.
ನಟ ನಾಗಚೈತನ್ಯ ಸದ್ಯ ತಮ್ಮ ಮದುವೆ ಕಾರ್ಯಗಳಲ್ಲಿ ಬ್ಯೂಸಿಯಾಗಿದ್ದಾರೆ, ಇದರ ಬೆನ್ನಲ್ಲೆ ನಟನಿಗೆ ಒಂದು ಬಿಗ್ ಶಾಕ್ ಸಿಕ್ಕಿದೆ, ನಟಿ ಹಾಗೂ ನಾಗಚೈತನ್ಯ ಅವರ ಮಾಜಿ ಪತ್ನಿ ಸಮಂತ, ನಾಗಚೈತನ್ಯ ಅವರಿಗೆ ಲೀಗಲ್ ನೋಟಿಸ್ ಕೊಟ್ಟಿದ್ದಾರೆ ಎನ್ನುವ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ.
ಚೈತನ್ಯ ಸಮಂತಾ ಅಗಲಿಕೆಗೆ ಭಿನ್ನಾಭಿಪ್ರಾಯಗಳನ್ನು ಹೊರತುಪಡಿಸಿ ಬೇರೆ ಯಾವುದೇ ಕಾರಣಗಳಿಲ್ಲ ಎಂಬುದು ಅವರ ಮಾತುಗಳಿಂದ ಸ್ಪಷ್ಟವಾಗಿದೆ. ಕಾನೂನಾತ್ಮಕವಾಗಿ ಅಕ್ಕಿನೇನಿ ಕುಟುಂಬವನ್ನು ಸಮಂತಾ ಟಾರ್ಗೆಟ್ ಮಾಡುವ ಸಾಧ್ಯತೆ ಇಲ್ಲ ಎಂದು ಹೇಳಲಾಗಿದೆ ಆದರೂ, ಇದೀಗ ಸಾಮಾಜಿಕ ಜಾಲಾತಣದಲ್ಲಿ ಸಮಂತಾ ಅವರು, ನಾಗಚೈತನ್ಯ ಅವರನ್ನು ಟಾರ್ಗೆಟ್ ಮಾಡುತ್ತಿದ್ದಾರೆ ಎನ್ನುವ ವಿಚಾರ ಹೊರಬಿದ್ದಿದೆ.
ನಾಗ ಚೈತನ್ಯ ಅವರ ಮದುವೆ ನಡೆಯಲಿರುವಾಗಲೇ ಸಮಂತಾ ಅವರಿಗೆ ಆಸ್ತಿ ವಿಚಾರವಾಗಿ ನೋಟಿಸ್ ಕಳುಹಿಸಿದ್ದಾರೆ ಎನ್ನುವ ವಿಚಾರ ಸಾಮಾಜಿಕ ಜಾಲತಾಣದಲ್ಲಿ ಇದೀಗ ವೈರಲ್ ಆಗುತ್ತಿದೆ, ಸದ್ಯ ಈ ವಿಷಯ ಅಸಲಿಯಲ್ಲ ಹೊರತಾಗಿ, ಇದು ಸಾಮಾಜಿಕ ಜಾಲತಾಣದಲ್ಲಿ ಜನ ಅಬ್ಬಿಸಿರುವ ವದಂತಿಗಳಷ್ಟೆ.