Actress Lakshmi: ಜೂಲಿ ಲಕ್ಷ್ಮೀ ಅವರಿಗೆ ಬಾಸೂಂಡೆ ಬರುವಂತೆ ಹೊಡೆದಿದ್ದರಂತೆ ಹಿರಿಯ ನಟ ಅಶ್ವಥ್‌!! ನಟಿ ಮಾಡಿದ್ದೇನು ಗೊತ್ತಾ?

Sat, 20 Apr 2024-3:34 pm,

ನಟಿ ಜೂಲಿ ಲಕ್ಷ್ಮೀ ಕಡಿಮೆ ಅವಧಿಯಲ್ಲಿ ದೊಡ್ಡ ಹೆಸರನ್ನು ಗಳಿಸಿಕೊಂಡ ನಟಿ.. ಎಲ್ಲ ಸ್ಟಾರ್‌ಗಳ ಜೊತೆಗೆ ತೆರೆಹಂಚಿಕೊಂಡು ಯಶಸ್ಸನ್ನೇ ಸಂಗಾತಿಯಾಗಿಸಿಕೊಂಡವರು.. ಹೀಗಿರುವಾಗ ಹಿರಿಯ ನಟ ಅಶ್ವಥ್‌ ನಟಿ ಲಕ್ಷ್ಮೀ ಅವರಿಗೆ ಬಾಸುಂಡೆ ಬರುವಂತೆ ಹೊಡೆದಿದ್ದರಂತೆ.. ಹಾಗಾದ್ರೆ ಇದಕ್ಕೆ ಕಾರಣ ಏನು? ನಟಿ ಅಂತದ್ದೇನು ಮಾಡಿದ್ರು?.  

ಭಗವಾನ್‌ ನಿಧನರಾದಾಗ ನಟಿ ಲಕ್ಷ್ಮೀ ತಮ್ಮ ಸಿನಿ ಜರ್ನಿಯ ಕೆಲವು ವಿಚಾರಗಳನ್ನು ಹಂಚಿಕೊಂಡಿದ್ದರು.. ಆ ವೇಳೆ ಮಾತನಾಡಿದ ಅವರು ಹಿರಿಯ ನಟ ಅಶ್ವಥ್‌ ಅವರು ತಂದೆ ಪಾತ್ರವಾದರೂ, ತಾತನ ಪಾತ್ರವಾದರೂ ಅದ್ಭುತವಾಗಿ ನಟಿಸುತ್ತಾರೆ ಎಂದಿದ್ದರು..   

ನಟ ಅಶ್ವಥ್‌ ಅವರು ಬರೀ ನಟನೆ ಎನ್ನಿಸುತ್ತಿರುಲಿಲ್ಲ.. ಅವರು ಪಾತ್ರದಲ್ಲಿ ಪರಕಾಯ ಪ್ರವೇಶ ಮಾಡುತ್ತಿದ್ದರು.. ನಟಿ ಜೂಲಿ ಲಕ್ಷ್ಮೀ ಹಾಗೂ ನಟ ಅಶ್ವಥ್‌ ಗಾಳಿಮಾತು ಸಿನಿಮಾದಲ್ಲಿ ತಂದೆ ಮಗಳ ಪಾತ್ರದಲ್ಲಿ ನಟಿಸುತ್ತಿದ್ದರು. ಆಗ ಮಗಳ ಕುರಿತಾದ ದೃಶ್ಯವೊಂದಕ್ಕೆ ನಟ ಲಕ್ಷ್ಮೀ ಅವರಿಗೆ ತಮ್ಮ ಸ್ವಂತ ಮಗಳು ಎನ್ನುವಂತೆ ಛತ್ರಿ ತೆರೆದುಕೊಂಡು ಮನಸ್ಸಿಗೆ ಬದಂತೆ ಹೊಡೆದಿದ್ದರಂತೆ..   

ನಂತರ ಪಾತ್ರದಿಂದ ಹೊರಬಂದ ಅವರು ಎದುರಿಗೆ ಇರುವವರು ನಟಿ, ಅವರಿಗೆ ಹೀಗೆ ಹೊಡೆದೆನಲ್ಲ ಎಂದು ಪಶ್ಚಾತಾಪ ಪಟ್ಟು ಲಕ್ಷ್ಮೀ ಅವರ ಬಳಿ ಕ್ಷಮೆಕೇಳಿದ್ದರಂತೆ..    

ಇಷ್ಟೇಲ್ಲಾ ಹೊಡೆತವನ್ನು ತಿಂದರೂ ಆ ದೃಶ್ಯವನ್ನು ಮತ್ತೇ ಚಿತ್ರೀಸಬೇಕಾಗಿದೆ ಎಂದು ಭಗವಾನ್‌ ಹೇಳಿದಾಗ ಮತ್ತೆ ತಮಗೆ ಯಾವುದೇ ನೋವಾಗದಂತೆ ನಟಿಸಿದ್ದರಂತೆ ಅಶ್ವಥ್‌..   

ZEENEWS TRENDING STORIES

By continuing to use the site, you agree to the use of cookies. You can find out more by Tapping this link