ಈ ಖ್ಯಾತ ನಟಿಯ ಜೊತೆ ಡೈರೆಕ್ಟರ್ ತರುಣ್ ‌ಸುಧೀರ್‌ ಮದುವೆ !?

Sun, 23 Jun 2024-3:35 pm,

ಖ್ಯಾತ ಖಳನಟ ಸುಧೀರ್ ಕಿರಿಯಪುತ್ರ ತರುಣ್ ಸುಧೀರ್ ಮದುವೆ ಫಿಕ್ಸ್ ಆಗಿದೆ ಎನ್ನುವ ಮಾತಿ ಗಾಂಧಿನಗರದಲ್ಲಿ ಹರಿದಾಡುತ್ತಿದೆ ಎನ್ನಲಾಗಿದೆ. 

ಮಗನಿಗೆ 40 ದಾಟಿದ್ರೂ ಮದುವೆಯಾಗಿಲ್ಲ ಎಂಬ ಚಿಂತೆಯಲ್ಲಿದ್ದ ತಾಯಿ ಮಾಲತಿ ಇದೀಗ ಮಗನ ಮದುವೆ ತಯಾರಿ ನಡೆಸಿದ್ದಾರೆ ಎಂದು ಹೇಳಲಾಗಿದೆ. 

ಇನ್ನೆರಡು ತಿಂಗಳಲ್ಲಿಯೇ  ತರುಣ್ ಸುಧೀರ್ ಮದುವೆ ನಡೆಯಲಿದೆ ಎನ್ನುವ ಊಹಾಪೋಹ ಶುರುವಾಗಿದೆ.

ತರುಣ್ ಸುಧೀರ್ ಮದುವೆ ಸಿದ್ಧತೆಗಳು ಶುರುವಾಗಿದ್ದು, ಕನ್ನಡದ ಹೆಸರಾಂತ ನಟಿಯ ಜೊತೆ ಸಪ್ತಪದಿ ತುಳಿಯಲಿದ್ದಾರೆ ಎಂದು ಹೇಳಲಾಗುತ್ತಿದೆ. 

ತರುಣ್ ಸುಧೀರ್ ನಟಿ ಸೋನಾಲ್ ಮಂಥೆರೊ ಅವರನ್ನು ಮದುವೆಯಾಗಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. 

ಅಭಿಸಾರಿಕೆ ಸಿನಿಮಾ ಮೂಲಕ ಸ್ಯಾಂಡಲ್‌ವುಡ್ ಪ್ರವೇಶಿಸಿದ ಸೋನಲ್ ಅವರು ತರುಣ್ ನಿರ್ದೇಶನದ 'ರಾಬರ್ಟ್' ಚಿತ್ರದಲ್ಲಿ ರಾಘವ ವಿನೋದ್ ಪ್ರಭಾಕರ್ ಜೋಡಿ ತನು ಆಗಿ ನಟಿಸಿದ್ದರು. 

ಇದೀಗ ತರುಣ್ ಸುಧೀರ್ ನಟಿ ಸೋನಾಲ್ ಮಂಥೆರೊ ಇಬ್ಬರೂ ಇನ್ನೆರಡೇ ತಿಂಗಳೊಳಗೆ  ಸಪ್ತಪದಿ ತುಳಿಯಲಿದ್ದಾರೆ ಎಂದು ಹೇಳಲಾಗುತ್ತಿದೆ. ಆದರೆ ಈ ಬಗ್ಗೆ ಯಾವುದೇ ಸ್ಪಷ್ಟ ಮಾಹಿತಿ ಇನ್ನೂ ಹೊರ ಬಿದ್ದಿಲ್ಲ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link