Actor Shridhar: ಸ್ಯಾಂಡಲ್‌ವುಡ್ ನಟ ಶ್ರೀಧರ್ ಅವರ ಪತ್ನಿ ಯಾರು ಗೊತ್ತಾ? ಇವರು ಕೂಡ ತುಂಬಾ ಫೇಮಸ್!
ಅಮೃತಘಳಿಗೆ ಚಿತ್ರದಲ್ಲಿ ನಾಯಕನಾಗಿನಟಿಸುವ ಮೂಲಕ ಸಿನಿರಂಗಕ್ಕೆ ಪದಾರ್ಪಣೆ ಮಾಡಿದ ನಟ ಶ್ರೀಧರ್ ಸಾಲು ಸಾಲು ಹಿಟ್ ಸಿನಿಮಾಗಳನ್ನು ನೀಡುವ ಮೂಲಕ ಕನ್ನಡಿಗರ ಮನಗೆದ್ದರು..
ನಟ ಶ್ರೀಧರ್ ಬರೀ ನಟನೆಗೆ ಮಾತ್ರ ಸೀಮಿತವಾಗಿರದೇ ಭರತನಾಟ್ಯ ಪ್ರವೀಣರು ಆಗಿದ್ದರು.. ಇಂಜೀನಿಯರಿಂಗ್ ಪದವೀಧರರಾದ ಇವರು ಕನ್ನಡದಲ್ಲಿ ಸುಮಾರು ೬೦ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ..
ಇನ್ನು ನಟ ಶ್ರೀಧರ್ ಅವರ ಅದ್ಭುತ ನಟನೆಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರದಿಂದ ಹಲವಾರು ಪ್ರಶಶ್ತಿಗಳು ಒಲಿದಿವೆ.. ಸಂತ ಶಿಶುನಾಳ ಶರೀಫ ಸಿನಿಮಾದಲ್ಲಿನ ಇವರ ಅದಮ್ಯ ನಟನೆಗೆ ಅತ್ಯುತ್ತಮ ನಟ ಪ್ರಶಸ್ತಿ ಲಭಿಸಿದೆ..
ನಟ ಶ್ರೀಧರ್ ಅವರ ವೈಯಕ್ತಿಕ ವಿಚಾರಕ್ಕೆ ಬಂದರೇ ಅವರ ಪತ್ನಿ ಹೆಸರು ಅನುರಾಧ.. ಇವರು ಕೂಡ ಭರತನಾಟ್ಯ ಕಲಾವಿದರು.. ಈ ದಂಪತಿ ಅನೇಕ ವೇದಿಕೆ ಪ್ರದರ್ಶನಗಳನ್ನು ಒಟ್ಟಿಗೆ ನಡೆಸಿಕೊಟ್ಟಿದ್ದಾರೆ..
ನಟ ಶ್ರೀಧರ್ ಅವರ ಅಭಿನಯಕ್ಕೆ ಮರುಳಾಗದವರೇ ಇಲ್ಲ ಎಂದರೇ ತಪ್ಪಾಗುವುದಿಲ್ಲ.. ತಮ್ಮ ಅದ್ಭುತ ಅಭಿನಯದ ಮೂಲಕವೇ ಅಪಾರ ಅಭಿಮಾನಿಗಳನ್ನು ಗಳಿಸಿದ ಚೆಂದನವನದ ಚೆಂದದ ನಟ ಇವರು..
ನಟ ಶ್ರೀಧರ್ ಸದ್ಯ ಸಿನಿಮಾಗಳಿಂದ ದೂರವಿದ್ದಾರೆ.. ಆದರೆ ಒಂದು ಕಾಲದಲ್ಲಿ ಅವರು ಇಡೀ ಕನ್ನಡ ಚಿತ್ರರಂಗದಲ್ಲೇ ಅತ್ಯಂತ ಸುಂದರವಾದ ನಟ ಎನಿಸಿಕೊಂಡಿದ್ದರು..
ಸ್ಯಾಂಡಲ್‌ವುಡ್‌ನಲ್ಲಿ ತಮ್ಮದೇ ಆದ ಛಾಪು ಮೂಡಿಸಿರುವ ಈ ನಟ ಹೆಚ್ಚಾಗಿ ದೇವರ ಪಾತ್ರಗಳಲ್ಲಿ ಮಿಂಚಿದ್ದಾರೆ.. ಅಲ್ಲದೇ ಶಿಶುನಾಳ ಶರೀಫರಂತಹ ಮಹಾನ್ ವ್ಯಕ್ತಿಕಗಳ ಪಾತ್ರಗಳಲ್ಲಿ ನಟಿಸಿದ್ದಾರೆ..