Actor Srinath: ಚಂದನವನದ ನಟ ಶ್ರೀನಾಥ್ ಹೆಂಡತಿ, ಮಕ್ಕಳನ್ನು ನೋಡಿದ್ದೀರಾ? ಇವರಂತೆ ಪುತ್ರನೂ ಕನ್ನಡ ಚಿತ್ರರಂಗದ ಫೇಮಸ್ ನಟ!!
ಶ್ರೀನಾಥ್ ಅವರ ಪತ್ನಿ ಹೆಸರು ಗೀತಾ.. ನಟನಿಗೆ ಹೆಣ್ಣು ಮಕ್ಕಳೆಂದರೇ ತುಂಬಾ ಪ್ರೀತಿಯಂತೆ.. ಹೀಗಾಗಿ ಅವರು ತಮ್ಮ ಪತ್ನಿ ಹೆರಿಗೆಗೆ ಹೋಗುವಾಗ ಗಂಡು ಮಗು ಜನಿಸಿದರೇ ನಾನು ಬರುವುದಿಲ್ಲ ಹೆಣ್ಣು ಮಗು ಜನಿಸಬೇಕೆಂದು ತಮಾಷೆ ಮಾಡಿದ್ದರಂತೆ..
ಮುಂದೆ ಅವರು ಸಿನಿಮಾ ಶೂಟಿಂಗ್‌ನಲ್ಲಿದ್ದಾಗ ನಟನಿಗೆ ಗಂಡು ಮಗು ಜನಿಸುತ್ತದೆ.. ಆಗ ಅವರ ಪತ್ನಿ ಗೀತಾ ಅವರು ನನ್ನನ್ನು ಕ್ಷಮಿಸಿ ನಿಮಗೆ ಹೆಣ್ಣು ಮಗು ನೀಡಲು ನನ್ನಿಂದ ಆಗಲಿಲ್ಲ ಎನ್ನುತ್ತಾರೆ.. ಆಗ ಅವರು ಅಯ್ಯೋ ನಾನು ತಮಾಷೆಗಾಗಿ ಹೇಳಿದ್ದೆ ಎಂದರಂತೆ..
ಆಗ ಜನಿಸಿದ್ದೇ ರೋಹಿತ್ ಶ್ರೀನಾಥ್.. ಹೌದು ನಗು ಎಂದಿದೆ ಮಂಜಿನ ಬಿಂದು ಹಾಡಿನಲ್ಲಿ ಕಾಣಿಸಿಕೊಂಡ ಆ ಪುಟ್ಟ ಬಾಲಕ ಬೇರೆ ಯಾರೂ ಅಲ್ಲ.. ನಟ ಶ್ರೀನಾಥ್ ಅವರ ಮಗ.. ಬಾಲಕಲಾವಿದರಾಗಿ ಸಿನಿರಂಗದಲ್ಲಿ ರೋಹಿತ್ ಗುರುತಿಸಿಕೊಂಡಿದ್ದಾರೆ..
ಗಂಡ ಹೆಂಡತಿ, ಶಿಕಾರಿ, ಗರುಡ ರೇಖೆ, ಮಾಲ್ಗುಡಿ ಡೇಸ್ ಹೀಗೆ ಹಲವಾರು ಆಗಿನ ಹಿಟ್ ಸಿನಿಮಾಗಳನ್ನು ಅಭಿನಯಿಸಿದ ರೋಹಿತ್ ಚಿಕ್ಕ ವಯಸ್ಸಿನಲ್ಲೇ ದೊಡ್ಡ ಜನಪ್ರಿಯತೆ ಪಡೆದುಕೊಂಡಿದ್ದರು..
ನಂತರ ವಿಧ್ಯಾಭ್ಯಾಸದತ್ತ ಗಮನ ಹರಿಸಿದ ರೋಹಿತ್ ಶ್ರೀನಾಥ್ ಅವರು ಇದೀಗ ಉದ್ಯಮದಲ್ಲಿ ನಿರತರಾಗಿದ್ದಾರೆ.. ಸಿನಿಮಾಗಳಿಗೆ ಬ್ರೇಕ್ ಹಾಕಿದ ಇವರು ಸದ್ಯ ಉದ್ಯಮಿಯಾಗಿ ಗುರುತಿಸಿಕೊಂಡಿದ್ದಾರೆ..