ಈ ಖ್ಯಾತ ನಟನ ಜತೆ ಸಾನಿಯಾ ಮಿರ್ಜಾ ಡೇಟಿಂಗ್ .! ರಿಲೇಶನ್ ಶಿಪ್ ಬಗ್ಗೆ ಟೆನಿಸ್ ತಾರೆ ಕೊಟ್ಟೇ ಬಿಟ್ರು ಬಿಗ್ ಅಪ್‌ಡೇಟ್
Sania Mirza: ಸಾನಿಯಾ ಮಿರ್ಜಾ ಅವರ ಮಾಜಿ ಪತಿ ಶೋಯೆಬ್ ಮಲಿಕ್ ಪಾಕಿಸ್ತಾನಿ ನಟಿ ಸನಾ ಜಾವೇದ್ ಅವರನ್ನು ವಿವಾಹವಾದರು. ಶೋಯೆಬ್ ಮೂರನೇ ಮದುವೆಯಾದ ನಂತರ ಸಾನಿಯಾ ಅವರ ಎರಡನೇ ಮದುವೆ ವಿಚಾರವಾಗಿ ಹಲವಾರು ವದಂತಿಗಳು ಶುರುವಾಗಿವೆ.
ಒಂದು ಕಾಲದಲ್ಲಿ ಸಾನಿಯಾ ಮಿರ್ಜಾ ಅವರ ಹೆಸರು ಬಾಲಿವುಡ್ ನಟ ಶಾಹಿದ್ ಕಪೂರ್ ಅವರೊಂದಿಗೆ ಸೇರಿಕೊಂಡಿತ್ತು. ಇವರಿಬ್ಬರ ಸಂಬಂಧದ ಸುದ್ದಿ ಸಾಕಷ್ಟು ಸದ್ದು ಮಾಡಿತ್ತು.
ಕಾಫಿ ವಿತ್ ಕರಣ್‌ಗೆ ಆಗಮಿಸಿದ ಸಾನಿಯಾ ಮಿರ್ಜಾ, ಕ್ಯಾಮೆರಾ ಮುಂದೆ ಇದು ಕೇವಲ ವದಂತಿ ಎಂದು ಹೇಳಿದ್ದರು. ಶಾಹಿದ್ ಜೊತೆ ತಾನು ಯಾವತ್ತೂ ರಿಲೇಶನ್ ಶಿಪ್ ನಲ್ಲಿಲ್ಲ ಎಂದು ಹೇಳಿದ್ದರು.
ಸಾನಿಯಾ ಮಿರ್ಜಾ ಮತ್ತು ಶಾಹಿದ್ ಕಪೂರ್ ಡೇಟಿಂಗ್ ಮಾಡುತ್ತಿದ್ದಾರೆ ಎಂದು ಕೆಲವು ಮಾಧ್ಯಮ ವರದಿಗಳು ಹೇಳುತ್ತವೆ. ಆದರೆ ಶಾಹಿದ್ ಕಪೂರ್ ಅವರ ಪೊಸೆಸಿವ್ ಸ್ವಭಾವದಿಂದ ಬೇಸತ್ತು ಸಾನಿಯಾ ಬ್ರೇಕಪ್ ಮಾಡಿಕೊಂಡರು ಎನ್ನಲಾಗುತ್ತದೆ.
ಸಾನಿಯಾ ಮಿರ್ಜಾ 2010 ರಲ್ಲಿ ಪಾಕಿಸ್ತಾನಿ ಕ್ರಿಕೆಟಿಗ ಶೋಯೆಬ್ ಮಲಿಕ್ ಅವರನ್ನು ಬಹಳ ವಿವಾಹವಾದರು. ಪ್ರಸ್ತುತ ಸಾನಿಯಾ ಮಗ ಇಜಾನ್ ಮಲಿಕ್ ಜೊತೆ ವಾಸವಿದ್ದಾರೆ.