ಶಮಿ ಜೊತೆ ಕ್ರಿಸ್ಮಸ್ ಫೋಟೋ ವೈರಲ್ ಬೆನ್ನಲ್ಲೇ ಮದುಮಗಳಂತೆ ರೆಡಿಯಾದ ಸಾನಿಯಾ ಮಿರ್ಜಾ! 2ನೇ ಮದುವೆಗೆ ರೆಡಿಯಾದ್ರಾ ಮೂಗುತಿ ಸುಂದರಿ?
ಸಾನಿಯಾ ಮಿರ್ಜಾ ಯಶಸ್ವಿ ಟೆನಿಸ್ ಆಟಗಾರ್ತಿಯರಲ್ಲಿ ಒಬ್ಬರು. ಇತ್ತೀಚಿನ ದಿನಗಳಲ್ಲಿ ಈಕೆ ಹೆಸರು ಕ್ರಿಕೆಟಿಗ ಮೊಹಮ್ಮದ್ ಶಮಿ ಜೊತೆ ತಳುಕು ಹಾಕಿತ್ತು. ಇವರಿಬ್ಬರು ಡೇಟಿಂಗ್ ಮಾಡುತ್ತಿದ್ದಾರೆ. ಇನ್ನೇನು ಕೆಲವೇ ದಿನಗಳಲ್ಲಿ ಮದುವೆಯಾಗಲಿದ್ದಾರೆ ಎಂದು ವದಂತಿಗಳು ಹಬ್ವುತ್ತಿವೆ.
ಇದಲ್ಲದೆ, ಕ್ರಿಸ್‌ಮಸ್ ಸಂದರ್ಭದಲ್ಲಿ ಇವರಿಬ್ಬರ ಫೋಟೋ ಸಿಕ್ಕಾಪಟ್ಟೆ ವೈರಲ್ ಆಗಿದ್ದು, ಜೊತೆಯಾಗಿ ದುಬೈನಲ್ಲಿ ಹಬ್ಬ ಸೆಲೆಬ್ರೇಷನ್ ಮಾಡಿಕೊಂಡಿದ್ದಾರೆ ಎಂದು ಹೇಳಲಾಗಿತ್ತು. ಆದರೆ ಆ ಬಳಿಕ ಅದು ಎಐ ಜನರೇಟೆಡ್ ಫೋಟೋ ಎಂದು ದೃಢಪಟ್ಟಿತ್ತು.
ಇದೀಗ ಸಾನಿಯಾ ಅವರು ತಮ್ಮ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಲೆಹೆಂಗಾದಲ್ಲಿ ಮುದ್ದಾಗಿ ಕಾಣುತ್ತಿರುವ ಮೂಗುತಿ ಸುಂದರಿಯ ಅಂದವನ್ನು ನೆಟ್ಟಿಗರು ಕೊಂಡಾಡುತ್ತಿದ್ದಾರೆ. ಇನ್ನು ಕೆಲವರು, ಸಾನಿಯಾ 2ನೇ ಮದುವೆಗೆ ರೆಡಿಯಾಗಿದ್ದಾರೆ ಎಂದು ಕಾಮೆಂಟ್ ಮಾಡುತ್ತಿದ್ದಾರೆ. (ಫೋಟೋ ಕೃಪೆ- Sania Mirza ಇನ್‌ಸ್ಟಾಗ್ರಾಂ ಪೇಜ್)
ಈ ಫೋಟೋಗಳು ವೈರಲ್ ಆಗುತ್ತಿದ್ದಂತೆ, ಪ್ರತಿಕ್ರಿಯಿಸಿದ ಮೊಹಮ್ಮದ್ ಶಮಿ ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ. ತನ್ನದೇ ಆದ ವೈಯಕ್ತಿಕ ಸವಾಲುಗಳನ್ನು ಎದುರಿಸುತ್ತಿರುವ ಕ್ರಿಕೆಟಿಗ, ವದಂತಿಗಳ ಬಗ್ಗೆ ಹತಾಶೆ ವ್ಯಕ್ತಪಡಿಸಿದ್ದರು.
ಆದರೆ ಈ ಫೋಟೋಗಳನ್ನು ತಮ್ಮಿಷ್ಟಕ್ಕೆ ಶೇರ್ ಮಾಡಿಕೊಂಡ ಸಾನಿಯಾ, ಹೀಗೆ ಕ್ಯಾಪ್ಶನ್ ಕೂಡ ನೀಡಿದ್ದಾರೆ; "If you can’t find the sunshine , be the sparkle" (ಫೋಟೋ ಕೃಪೆ- Sania Mirza ಇನ್‌ಸ್ಟಾಗ್ರಾಂ ಪೇಜ್)
ಇನ್ನು ಸಾನಿಯಾ ಧರಿಸಿದ ಲೆಹೆಂಗಾವನ್ನು @gazalguptacouture ಅವರು ಡಿಸೈನ್ ಮಾಡಿದ್ದರೆ, ಆಭರಣಗಳನ್ನು @mangatraineeraj ಸಿದ್ಧಪಡಿಸಿದ್ದಾರೆ. ಮೂಗುತಿ ಸುಂದರಿಯ ಅಂದವನ್ನುಯ ದುಪ್ಪಟ್ಟು ಮಾಡಲು @styliciousbysam ಅವರು ಮೇಕಪ್ ಮಾಡಿದ್ದರು, ಇನ್ನು ಕೇಶವಿನ್ಯಾಸವನ್ನು @teasedrybar ಅವರು ಮಾಡಿದ್ದರೆ, @divitphotography ಅವರು ಫೋಟೋ ಕ್ಲಿಕ್ಕಿಸಿದ್ದಾರೆ. (ಫೋಟೋ ಕೃಪೆ- Sania Mirza ಇನ್‌ಸ್ಟಾಗ್ರಾಂ ಪೇಜ್)