Sanjana Burli: ಕಾಶ್ಮೀರದಲ್ಲಿ ಹಿಮದ ಜೊತೆ ಎಂಜಾಯ್ ಮಾಡಿದ ಪುಟ್ಟಕ್ಕನ ಮಗಳು!!

Mon, 11 Mar 2024-11:49 am,

ಕಿರುತೆರೆ ನಟಿ ಸಂಜನಾ ಬುರ್ಲಿ ನಟನೆಯಿಂದ ಕೊಂಚ ಬ್ರೇಕ್ ತೆಗೆದುಕೊಂಡು  ಕಾಶ್ಮೀರಕ್ಕೆ ಪ್ರವಾಸ ಮಾಡಿದ್ದಾರೆ.

ನಟಿ ಸಂಜನಾ ಬುರ್ಲಿ ಕಾಶ್ಮೀರದಲ್ಲಿ ವಿಂಟರ್ ಸೀಸನ್ ಆಗಿರುವುದರಿಂದ ಅಲ್ಲಿ ಸಖತ್ ಆಗಿ ಎಂಜಾಯ್ ಮಾಡುತ್ತಿದ್ದಾರೆ. 

ಸಂಜನಾ ಬುರ್ಲಿ ಕಾಶ್ಮೀರದ ಕೆಲವು ಪ್ರದೇಶಗಳಿಗೆ ಹೋಗಿ ಅಲ್ಲಿಯ ರಮಣೀಯ ದೃಶ್ಯವನ್ನು ಕಣ್ತುಂಬಿಕೊಂಡು ಖುಷಿಪಡುವುದರ ಜೊತೆಗೆ ಸೋನ್ ಮರ್ಗ್, ಗುಲ್ ಮರ್ಗ್ ನಂತಹ ಅದ್ಭುತ ತಾಣಗಳಿಗೆ ಸಂಜನಾ ತೆರಳಿದ್ದು, ಸ್ನೋ ಫಾಲ್ ಎಂಜಾಯ್ ಮಾಡಿದ್ದಾರೆ.

ಸಂಜನಾ ಕಾಶ್ಮೀರದಲ್ಲಿ ಸ್ವೆಟರ್ ಮತ್ತು ಕೈ ಗ್ಲೌಸ್ ಹಾಕಿಕೊಂಡು ಮಂಜಿನ ಹತ್ತಿರ ನಿಂತುಕೊಂಡು ಸುಂದರವಾದ ಫೋಟೋಗಳನ್ನು ತೆಗೆಸಿಕೊಂಡು ಸೋಶಿಯಲ್‌ ಮಿಡಿಯಾದಲ್ಲಿ ಶೇರ್‌ ಮಾಡಿದ್ದಾರೆ.

ನಟಿ ಸಂಜನಾ ತುಂಬಾ ಕ್ಯೂಟ್‌ ಆಗಿ ಕಾಣಿಸಿಕೊಂಡಿದ್ದ ಫೋಟೋಗಳು ವೈರಲ್‌ ಆಗಿದ್ದು, ಸಾವಿರಾರು ಲೈಕ್ಸ್‌ ಬಂದಿದ್ದು ಮತ್ತು ಜೊತೆಗೆ ಕಮೆಂಟ್‌ಗಳ ಮಳೆಯೇ ಸುರಿದಿದೆ.

ಸಂಜನಾ ಕಾಶ್ಮೀರ ಪ್ರವಾಸದ ಫೋಟೋಗಳಿಗೆ "ಮುದ್ದು ಮುಖದ ಚೆಲುವೆ", "ಮುದ್ದಾಗಿ ಕಾಣಿಸುತ್ತಿದ್ದೀರಾ" ಎಂದೆಲ್ಲ ಕಾಮೆಂಟ್ ಮಾಡುತ್ತಿದ್ದಾರೆ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link