Sankranti 2023 : ಎರಡು ಶತ್ರು ಗ್ರಹಗಳು ಸೇರಿ ಕಾಡುತ್ತವೆ ಈ ರಾಶಿಯವರನ್ನು ! ನಿಮ್ಮ ಮಾತೇ ನಿಮಗೆ ಮುಳುವಾಗಬಹುದು

Thu, 12 Jan 2023-8:58 am,

ಸಿಂಹ ರಾಶಿ : ಮಕರ ರಾಶಿಯಲ್ಲಿ ಸೂರ್ಯನ ಸಂಕ್ರಮಣದಿಂದಾಗಿ, ಸಿಂಹ ರಾಶಿಯ ಜನರು ಜಾಗರೂಕರಾಗಿರಬೇಕು. ಈ ಸಮಯದಲ್ಲಿ, ಸಿಂಹ ರಾಶಿಯವರ ಆರ್ಥಿಕ ಸ್ಥಿತಿಯ ಮೇಲೆ ಪರಿಣಾಮ ಬೀರುತ್ತದೆ. ಈ ಅವಧಿಯಲ್ಲಿ ಯಾರಿಗೂ ಸಾಲ ನೀಡುವ ಗೋಜಿಗೆ ಹೋಗಬೇಡಿ. ಈ ಸಮಯದಲ್ಲಿ ನೀಡಿದ ಸಾಲ ವಾಪಸ್ ಬರುವುದಿಲ್ಲ. ಇದರಿಂದ ಆರ್ಥಿಕ ನಷ್ಟ ಉಂಟಾಗಬಹುದು. ತಾಯಿಯ ಕಡೆಯಿಂದ ಕೆಲವು ಅಶುಭ ಸುದ್ದಿಗಳು ಬರಬಹುದು. ಇದರಿಂದ ಮನಸ್ಸು ಖಿನ್ನತೆಗೆ ಒಳಗಾಗಬಹುದು. ಕೌಟುಂಬಿಕ ಜೀವನದಲ್ಲೂ ಏರಿಳಿತಗಳಿರಬಹುದು.   

ತುಲಾ ರಾಶಿ : ಈ ರಾಶಿಯ ಜನರು ಕೌಟುಂಬಿಕ ತೊಡಕುಗಳನ್ನು ಎದುರಿಸಬೇಕಾಗುತ್ತದೆ. ಈ ಸಮಯದಲ್ಲಿ ಕುಟುಂಬದಲ್ಲಿ ಬಿರುಕು ಉಂಟಾಗಬಹುದು. ಮಾನಸಿಕವಾಗಿ ತೊಂದರೆಯಾಗುತ್ತದೆ. ಈ ಸಮಯದಲ್ಲಿ  ಸ್ನೇಹಿತರು ಅಥವಾ ಸಂಬಂಧಿಕರಿಂದ ಅಹಿತಕರ ಸುದ್ದಿಗಳನ್ನು ಪಡೆಯಬಹುದು. ಪ್ರವಾಸಕ್ಕೆ ಹೋಗುವ ಪ್ಲಾನ್ ಇದ್ದರೆ ಹುಷಾರಾಗಿರಿ. ಪೋಷಕರ ಆರೋಗ್ಯದ ಬಗ್ಗೆಯೂ ಜಾಗರೂಕರಾಗಿರಬೇಕು.   

ಧನು ರಾಶಿ : ಧನು ರಾಶಿಯ ಜನರು ಈ ಅವಧಿಯಲ್ಲಿ ತಮ್ಮ ಮಾತಿನ ಬಗ್ಗೆ ವಿಶೇಷ ಗಮನ ಹರಿಸಬೇಕು. ಈ ಸಮಯದಲ್ಲಿ ನೀವು ಮಾಡುವ ತಂತ್ರಗಳನ್ನು  ಗೌಪ್ಯವಾಗಿಡಿ. ಯಾರೊಂದಿಗೂ ಹಂಚಿಕೊಳ್ಳಬೇಡಿ. ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ವಹಿಸಿ. ಕಣ್ಣುಗಳಿಗೆ ಸಂಬಂಧಿಸಿದ ಸಮಸ್ಯೆ ಕಾಡಬಹುದು. ಕುಟುಂಬದ ಬಗ್ಗೆ ವಿಶೇಷ ಕಾಳಜಿ ವಹಿಸಿ, ಸಂಬಂಧಗಳಲ್ಲಿ  ಬಿರುಕು ಮೂಡಲು ಬಿಡಬೇಡಿ. 

ಕುಂಭ ರಾಶಿ : ಸೂರ್ಯ ಸಂಕ್ರಮಣ ಜೀವನದಲ್ಲಿ ಏರುಪೇರುಗಳನ್ನು ಉಂಟು ಮಾಡಲಿದೆ. ಮಾನಸಿಕ ಒತ್ತಡ ಹೆಚ್ಚಾಗುವುದು. ಈ ಸಮಯದಲ್ಲಿ ಖರ್ಚು ಕೂಡಾ ಹೆಚ್ಚಾಗುತ್ತದೆ. ಈ ಅವಧಿಯಲ್ಲಿ ಜಾಗರೂಕತೆಯಿಂದ ಹೆಜ್ಜೆಯಿಡಿ. ಯಾರಿಗೂ ಹೆಚ್ಚು ಸಾಲ ನೀಡಬೇಡಿ, ಇಲ್ಲದಿದ್ದರೆ ಆರ್ಥಿಕ ನಷ್ಟ ಅನುಭವಿಸಬೇಕಾಗಬಹುದು. 

 ( ಸೂಚನೆ : ಇಲ್ಲಿ ನೀಡಲಾದ ಲೇಖನವು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಅದನ್ನು ಖಚಿತಪಡಿಸುವುದಿಲ್ಲ.) 

ZEENEWS TRENDING STORIES

By continuing to use the site, you agree to the use of cookies. You can find out more by Tapping this link