Sapthami Gowda: ಸಿಂಗಾರ ಸಿರಿಯೆಯ ಸ್ಯಾರಿ ಸೆಲ್ಫಿ ಫೋಟೋಶೂಟ್‌!

Mon, 20 Nov 2023-5:51 pm,

ಸ್ಯಾಂಡಲ್‌ವುಡ್‌ ನಟಿ ಸಪ್ತಮಿ ಗೌಡ ಮುದ್ದಾದ ಪೋಟೋ ಶೂಟ್‌ ಮಾಡಿಸಿ, ಢಿಫರೆಂಟ್‌ ಪೋಸ್‌ಗಳ ಮೂಲಕ ಗಮನ ಸೆಳೆದಿದ್ದಾರೆ.

ನಟಿ ಸಪ್ತಮಿ ಗೌಡ ಫೋಟೋಗಳಲ್ಲಿ ನೇರಳೆ ಬಣ್ಣದ ಸೀರೆ ವಿತ್‌ ಗೋಲ್ಡನ್‌ ಡಾಟ್ಸ್‌ ಹಾಗೂ ನೀಲಿ ಬ್ಲೌಸ್‌ ನಿತ್‌ ಗೋಲ್ಡನ್‌ ಬಾರ್ಡರ್‌ ಧರಿಸಿದ್ದಾರೆ.

ಕಾಂತಾರ ಬೆಡಗಿ ಈ ಸೀರೆಗೆ ಮ್ಯಾಚ್‌ ಆಗುವ ಆಂಟಿಕ್‌ ನೆಕ್ಲೇಸ್‌ ಹಾಗೂ ಜುಂಕಿ, ಕೈಗಳಿಗೆ ಗೋಲ್ಡನ್ ಬ್ಯಾಂಗಲ್ಸ್  ಹಾಕಿಕೊಂಡಿದ್ದರು.

ಸಿಂಗಾರ ಸಿರಿ ಸಿಂಪಲ್‌ ಮೇಕಪ್‌  ಮಾಡಿಕೊಂಡು ಹಣೆಗೆ ಚಿಕ್ಕದಾದ ಬೊಟ್ಟನ್ನು ಇಟ್ಟುಕೊಂಡು ಪೋಟೋಗಳಿಗೆ ಫೋಸ್‌ ನೀಡಿದ್ದಾರೆ.

ಕಾಂತಾರಾ ಸುಂದರಿ ಫೋಟೋಗಳಲ್ಲಿ ಸೀರಿಯನ್ನು ಉಲ್ಟ ಉಟ್ಟಿಕೊಂಡಿರುವುದನ್ನು ಗಮನಿಸಿದಾಗ ತಿಳಿಯುತ್ತದೆ, ಅದು ಸೆಲ್ಫಿ ಫೋಟೊಶೂಟ್‌ ಅಂತ. 

ಸಪ್ತಮಿ ಈ ಫೋಟೋಗಳನ್ನು ಸೋಷಿಯಲ್‌ ಮಿಡಿಯಾದಲ್ಲಿ ತಮ್ಮ ಅಭಿಮಾನಿಗಳ ಜೊತೆಗೆ ಹಂಚಿಕೊಂಡಿದ್ದು, ಹತ್ರತ್ರಾ 50 ಸಾವಿರ ಲೈಕ್ಸ್‌ಗಳನ್ನು ಪಡೆದಿದ್ದಾರೆ.

ಈ ನಟಿಗೆ ಸೋಷಿಯಲ್‌ ಮಿಡಿಯಾ ಬಳಕೆದಾದರು ಕಮೆಂಟ್‌ ಬಾಕ್ಸ್‌ನಲ್ಲಿ ದೇವತೆಯಂತೆಯಿದ್ದೀರಾ, ನವಿಲಿನಂತೆ ಕಾಣುತ್ತಿದ್ದೀರಾ, ಮಂಡೆ ಬ್ಲೂ ವೈಬ್ಸ್‌ ಅಂತೆಲ್ಲಾ ಕಮೆಂಟ್‌ ಮಾಡಿದ್ದಾರೆ.

ಸಪ್ತಮಿ ಗೌಡ ಮೊದಲು ಡಾಲಿ ಧನಂಜಯ್‌ ಅಭಿನಯದ ಪಾಪ್‌ ಕಾರ್ನ್‌ ಮಂಕಿ ಟೈಗರ್‌ ಸಿನಿಮಾದ ಮೂಲಕ ಚಂದನವನಕ್ಕೆ ಪಾದಾರ್ಪಣೆ ಮಾಡಿದರು.

ಇದೇ ವರ್ಷ ತೆರೆಕಂಡ ವ್ಯಾಕ್ಸಿನ್‌ ವಾರ್‌ ಸಿನಿಮಾದಿಂದ ಈ ನಟಿ ಬಾಲಿವುಡ್‌ಗೆ ಎಂಟ್ರೀ ನೀಡಿದ್ದು, ಈ ಚಿತ್ರ ತೆಲುಗು ಹಾಗೂ ತಮಿಳು ಭಾಷೆಯಲ್ಲೂ ಸಹ ರಿಲೀಸ್‌ ಆಗಿತ್ತು.

 ನಟ ಯುವರಾಜ್‌ಕುಮಾರ್‌ ಜೊತೆ ಅಭಿಯಿಸಿದ ಯುವ ಚಿತ್ರ ಇತ್ತೀಚೆಗಷ್ಟೇ ಶೂಟಿಂಗ್‌ ಕಂಪ್ಲೀಟ್‌ ಆಗಿದ್ದು, ಸದ್ಯ ಈ ಸಿನಿಮಾ ಮುಂದಿನ ವರ್ಷ ತೆರೆಕಾಣಲಿದೆ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link