Sarath Babu Movie: ʼಅಮೃತವರ್ಷಿಣಿʼ ಖ್ಯಾತಿಯ ಶರತ್‌ ಬಾಬು ಹಿಟ್‌ ಸಿನಿಮಾಗಳ ಲಿಸ್ಟ್‌..! ಇಲ್ಲಿದೆ ನೋಡಿ..

Mon, 22 May 2023-5:55 pm,

ʼಅಮೃತವರ್ಷಿಣಿʼ ಸಿನಿಮಾದ ಮೂಲಕ ಕನ್ನಡಿಗರಿಗೆ ಹತ್ತಿರವಾಗಿದ್ದ ನಟ ಶರತ್‌ ಬಾಬು 1951 ಜುಲೈ 31  ರಂದು ಆಂಧ್ರಪ್ರದೇಶದ ಶ್ರೀಕಾಕುಳಂ ಜಿಲ್ಲೆಯ ಅಮುದಲಾ ಗ್ರಾಮದಲ್ಲಿ ಜನಿಸಿದರು. ಸ್ನೇಹಿತರ ಮಾತಿಂದ ಪ್ರೇರೆಪಿತರಾಗಿ ಸಿನಿಮಾ ರಂಗದತ್ತ ಒಲವು ತೋರಿದರು.   

ಮೊದಲಿಗೆ  ಪೊಲೀಸ್ ಅಧಿಕಾರಿ ಕನಸು ಕಂಡಿದ್ದ ಶರತ್ ಬಾಬು ಅವರಿಗೆ ನಟನೆಯತ್ತ ಮನಸ್ಸು ವಾಲುತ್ತದೆ. ʼರಾಮ ರಾಜ್ಯಂʼ ಎಂಬ ತೆಲುಗು ಸಿನಿಮಾ ಮೂಲಕ ನಟರಾಗಿ ಬಣ್ಣದ ಲೋಕಕ್ಕೆ ಕಾಲಿಟ್ಟ ಇವರು 200ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ.   

1978 ರಲ್ಲಿ ತೆರೆಕಂಡ  ʼನಿಝಲ್ ನಿಜಮಗಿರದುʼ ಸಿನಿಮಾ ಶರತ್ ಬಾಬು  ಅವರಿಗೆ ಖ್ಯಾತಿ ತಂದುಕೊಟ್ಟಿತು.  ಈ ಸಿನಿಮಾಕ್ಕಾಗಿ  ಎಂಟು ʼನಂದಿ ಪ್ರಶಸ್ತಿʼಗಳನ್ನು ಗಳಿಸಿದರು.  

ಶರತ್ ಬಾಬು ಮೂಲತಃ ತೆಲುಗು ಇಂಡಸ್ಟ್ರಿಯವರಾಗಿದ್ದರೂ ತಮಿಳಿನಲ್ಲಿ ಹೆಚ್ಚು ಕಾಣಿಸಿಕೊಂಡಿದ್ದಾರೆ. ಕಮಲ್ ಹಾಸನ್ ನಟನೆಯ ತಮಿಳಿನ 'ನಿಳಲ್ ನಿಜಮಾಗಿರದು' ಚಿತ್ರದ ಪಾತ್ರ ಒಳ್ಳೆ ಹೆಸರು ತಂದುಕೊಟ್ಟಿತ್ತು. 70ಕ್ಕೂ ಹೆಚ್ಚು ತಮಿಳು ಸಿನಿಮಾಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ.   

ʼತುಳಸಿದಳʼ ಸಿನಿಮಾ ಮೂಲಕ ಕನ್ನಡ ಸಿನಿರಂಗಕ್ಕೆ ಎಂಟ್ರಿ ಕೊಟ್ಟ  ಶರತ್‌ ಬಾಬು, ಬಳಿಕ ರಮೇಶ್‌ ಅರವಿಂದ್‌ ಹಾಗೂ ಸುಹಾಸಿನಿ ನಟನೆಯ  ಅಮೃತವರ್ಷಿಣಿ  ಚಿತ್ರದ ಮೂಲಕ ಎಲ್ಲರ ಮನದಲ್ಲಿ ಅಚ್ಚುಳಿದಿದ್ದಾರೆ. 

ಕನ್ನಡದಲ್ಲಿ ರಣಚಂಡಿ, ಶಕ್ತಿ, ಕಂಪನ, ಗಾಯ, ಹೃದಯ-ಹೃದಯ, ನೀಲ, ನಮ್ಮೆಜಮಾನ್ರು ಹೀಗೆ 20ಕ್ಕೂ ಹೆಚ್ಚಿನ ಕನ್ನಡ  ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ.

ಆರಂಭದಲ್ಲಿ ಹೀರೊ, ವಿಲನ್ ಆಗಿ ನಟಿಸಿದ ಶರತ್ ಮುಂದೆ ನಾಯಕನ ಸ್ನೇಹಿತ, ಅಣ್ಣ, ತಮ್ಮ, ತಂದೆ, ನಾಯಕಿಯ ತಂದೆ ಹೀಗೆ ಪೋಷಕರ ಪಾತ್ರಗಳಲ್ಲಿ ನಟಿಸುತ್ತಾ ಜನ ಮಾನಸದಲ್ಲಿ ಅಜರಾಮರರಾಗಿದ್ದಾರೆ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link