ಶನಿ ನೇರ ನಡೆ: 50 ದಿನಗಳ ಬಳಿಕ ಈ ನಾಲ್ಕು ರಾಶಿಯವರ ಜೀವನದಲ್ಲಿ ಸೋಲೆಂಬುದೇ ಇಲ್ಲ

Thu, 14 Sep 2023-8:08 am,

ನವಗ್ರಹಗಳಲ್ಲಿ ಶನಿಯು ಅತ್ಯಂತ ನಿಧಾನವಾಗಿ ಚಲಿಸುವ ಗ್ರಹವಾಗಿದೆ. ಪ್ರತಿ ಎರಡೂವರೆ ವರ್ಷಗಳಿಗೊಮ್ಮೆ ಶನಿ ತನ್ನ ರಾಶಿಚಕ್ರವನ್ನು ಬದಲಾಯಿಸುತ್ತಾನೆ. 

ದ್ವಾದಶ ರಾಶಿಗಳಲ್ಲಿ ಶನಿಯು ಮಕರ ಮತ್ತು ಕುಂಭ ರಾಶಿಯ ಅಧಿಪತಿ ಆಗಿದ್ದಾನೆ. ಇದಲ್ಲದೆ, ಶನಿ ದೇವನು ತುಲಾ ರಾಶಿಗೆ ಬಂದಾಗ ಉತ್ತುಂಗ ಸ್ಥಿತಿಯಲ್ಲಿ ಇರುತ್ತಾನೆ ಎಂದು ಹೇಳಲಾಗುತ್ತದೆ. 

ಮೂರು ದಶಕಗಳ ಬಳಿಕ ಈ ವರ್ಷದ ಆರಂಭದಲ್ಲಿ ತನ್ನದೇ ಆದ ಕುಂಭ ರಾಶಿಯನ್ನು ಪ್ರವೇಶಿಸಿರುವ ಶನಿ ದೇವನು ಸದ್ಯ ಹಿಮ್ಮುಖವಾಗಿ ಚಲಿಸುತ್ತಿದ್ದಾನೆ. 

ವೈದಿಕ ಜ್ಯೋತಿಷ್ಯದ ಪ್ರಕಾರ, ಶನಿ ರಾಶಿ ಬದಲಾವಣೆ, ಶನಿಯ ಹಿಮ್ಮುಖ ಚಲನೆ, ಶನಿಯ ನೇರ ಸಂಚಾರ ಎಲ್ಲವೂ ಕೂಡ ಪ್ರತಿಯೊಬ್ಬ ವ್ಯಕ್ತಿಯ ಮೇಲೂ ಮಹತ್ವದ ಪರಿಣಾಮವನ್ನು ಬೀರುತ್ತದೆ. 

ಇನ್ನೂ ಸರಿಯಾಗಿ 50 ದಿನಗಳಲ್ಲಿ ಎಂದರೆ ನವೆಂಬರ್ 04, 2023ರಂದು ಶನಿ ಮಹಾತ್ಮನು ಕುಂಭ ರಾಶಿಯಲ್ಲಿ ತನ್ನ ನೇರ ಸಂಚಾರವನ್ನು ಆರಂಭಿಸಲಿದ್ದಾನೆ.   

ಮಾರ್ಗಿ ಶನಿಯು ಎಲ್ಲಾ 12 ರಾಶಿಯವರ ಮೇಲೂ  ಶುಭ-ಅಶುಭ ಪರಿಣಾಮಗಳನ್ನು ಉಂಟು ಮಾಡಲಿದ್ದಾನೆ. ಆದರೂ, ಈ ಸಮಯದಲ್ಲಿ ನಾಲ್ಕು ರಾಶಿಯವರ ಬದುಕು ಬಂಗಾರದಂತಾಗುತ್ತದೆ ಎಂದು ಹೇಳಲಾಗುತ್ತಿದೆ. ಆ ಅದೃಷ್ಟದ ರಾಶಿಗಳೆಂದರೆ... 

ಶನಿಯ ನೇರ ಸಂಚಾರವು ವೃಷಭ ರಾಶಿಯವರ ಜೀವನದಲ್ಲಿ ಶುಭ ದಿನಗಳನ್ನು ಹೊತ್ತು ತರಲಿದೆ.

ಮಾರ್ಗಿ ಶನಿಯು ನವೆಂಬರ್ 04, 2023ರ ಬಳಿಕ ಮಿಥುನ ರಾಶಿಯವರ ಪ್ರತಿ ಕೆಲಸದಲ್ಲೂ ಯಶಸ್ಸನ್ನು ಕರುಣಿಸಲಿದ್ದಾನೆ ಎಂದು ಹೇಳಲಾಗುತ್ತಿದೆ. 

ಶನಿಯ ನೇರ ಸಂಚಾರದೊಂದಿಗೆ ತುಲಾ ರಾಶಿಯವರ ಜೀವನದಲ್ಲಿ ಇಷ್ಟು ದಿನಗಳಿಂದ ಎದುರಾಗಿದ್ದ ಸಂಕಷ್ಟಗಳು ಸರಿದು, ಸಕಾರಾತ್ಮಕ ಫಲಗಳನ್ನು ಅನುಭವಿಸುವರು. 

ಮಕರ ರಾಶಿಯ ಅಧಿಪತಿಯೂ ಆಗಿರುವ ಶನಿಯ ಸಂಚಾರದಲ್ಲಿನ ಬದಲಾವಣೆಯು ಈ ರಾಶಿಯವರಿಗೆ ಪ್ರಯೋಜನಕಾರಿ ಆಗಿದೆ. 

ಸೂಚನೆ: ಇಲ್ಲಿ ನೀಡಲಾದ ಎಲ್ಲಾ ಮಾಹಿತಿಯು ಸಾಮಾಜಿಕ ಮತ್ತು ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link