ಗುರುವಿನ ನಕ್ಷತ್ರದಲ್ಲಿ ಶನಿ ಪ್ರವೇಶ: ಇಂದಿನಿಂದ ಈ ರಾಶಿಯವರಿಗೆ ಶನಿ ದಯೆ, ಹೆಜ್ಜೆ ಇಟ್ಟಲ್ಲೆಲ್ಲಾ ಯಶಸ್ಸು, ನನಸಾಗಲಿದೆ ಬಹುಕಾಲದ ಕನಸು..!

Fri, 27 Dec 2024-6:18 am,

ವೈದಿಕ ಜ್ಯೋತಿಷ್ಯದ ಪ್ರಕಾರ, ಶನಿ ಗುರು ಎರಡೂ ಸಹ ಪ್ರಭಾವಶಾಲಿ ಗ್ರಹಗಳು. ಇಂದು (ಡಿಸೆಂಬರ್ 27) ರಾತ್ರಿ 10:42ರ ಸುಮಾರಿಗೆ ಶನಿ ಗುರುವಿನ ನಕ್ಷತ್ರವಾದ ಪೂರ್ವಾಭಾದ್ರ ನಕ್ಷತ್ರಕ್ಕೆ ಪದಾರ್ಪಣೆ ಮಾಡಲಿದ್ದಾನೆ. 

ಪೂರ್ವಾಭಾದ್ರ ನಕ್ಷತ್ರದಲ್ಲಿ ಶನಿ ಪ್ರವೇಶದೊಂದಿಗೆ ಗುರುವಿನೊಂದಿಗೆ ಸಂಯೋಗ ಹೊಂದಲಿದ್ದಾನೆ. ಗುರು ಶನಿ ನಡುವೆ ಮಿತೃತ್ವ ಇದ್ದು ಶನಿ ಗುರು ಯುತಿಯಿಂದ ಕೆಲವು ರಾಶಿಯವರ ಬದುಕಿನಲ್ಲಿ ಬಂಗಾರದಂತ ಸಮಯ ಆರಂಭವಾಗಲಿದೆ. 

ಮೇಷ ರಾಶಿ:  ಶನಿ ಗುರು ಸಂಯೋಗವು ಈ ರಾಶಿಯವರಿಗೆ ಬಂಪರ್ ಧನಲಾಭವನ್ನು ತಂದುಕೊಡಲಿದೆ. ಕಳೆದುಹೋಗಿದ್ದ ಅಮೂಲ್ಯವಾದ ವಸ್ತುವೊಂದು ಮತ್ತೆ ನಿಮ್ಮ ಕೈ ಸೇರಲಿದೆ. ಉದ್ಯೋಗಸ್ಥರಿಗೆ ಬಡ್ತಿ ಸಂಭವವಿದೆ. 

ಕರ್ಕಾಟಕ ರಾಶಿ:  ಇಂದಿನಿಂದ ನಿಮ್ಮ ಬದುಕಿನಲ್ಲಿ ಹಣಕಾಸಿನ ಹರಿವು ಹೆಚ್ಚಾಗಲಿದ್ದು ಆರ್ಥಿಕ ಸಂಕಷ್ಟಗಳು ದೂರವಾಗಲಿವೆ. ನ್ಯಾಯಾಲಯಕ್ಕೆ ಸಂಬಂಧಿಸಿದ ಪ್ರಕರಣಗಳಲ್ಲಿ ಜಯ ಪ್ರಾಪ್ತಿ. ಮನೆಯವರೊಂದಿಗೆ ಉತ್ತಮ ಸಮಯವನ್ನು ಆನಂದಿಸುವಿರಿ. 

ತುಲಾ ರಾಶಿ:  ಶನಿ ಗುರು ಯುತಿಯಿಂದ ಈ ರಾಶಿಯವರಿಗೆ ಹೂಡಿಕೆಯಿಂದ ಲಾಭವಾಗಲಿದೆ. ನಿಮ್ಮ ಹೊಸ ವ್ಯವಹಾರಗಳಿಗೆ ಮನೆಯವರಿಂದ ಸಂಪೂರ್ಣ ಬೆಂಬಲ ದೊರೆಯಲಿದೆ. ಉದ್ಯೋಗಸ್ಥರಿಗೆ ಪ್ರಗತಿಯ ಹಾದಿಗಳು ತೆರೆಯಲಿವೆ. 

ಧನು ರಾಶಿ:  ಶನಿಯ ನಕ್ಷತ್ರ ಬದಲಾವಣೆಯು ಈ ರಾಶಿಯವರಿಗೆ ವಿದೇಶ ಪ್ರಯಾಣ ಯೋಗವನ್ನು ನೀಡಲಿದ್ದು, ಇದರಿಂದ ಭಾರೀ ಹಣಕಾಸಿನ ಪ್ರಯೋಜನವೂ ಸಿಗಲಿದೆ. ಸರ್ಕಾರಿ ಕ್ಷೇತ್ರದಲ್ಲಿ ಕೆಲಸ ಮಾಡುವವರಿಗೆ ಶನಿ ದಯೆ ಇರಲಿದೆ. 

ಮಕರ ರಾಶಿ:  ಶನಿ ಗುರು ಯುತಿ ಪ್ರಭಾವದಿಂದ ಈ ರಾಶಿಯವರಿಗೆ ಭರ್ಜರಿ ಲಾಭವಾಗಲಿದೆ. ವ್ಯಾಪಾರದಲ್ಲಿ ನಿಮ್ಮ ನಿರೀಕ್ಷೆಗೂ ಮೀರಿದ ಆದಾಯವು ಸಾಲದ ಸುಳಿಯಿಂದ ನಿಮ್ಮನ್ನು ಹೊರತರಲಿದೆ. ಆಸ್ತಿಗೆ ಸಂಬಂಧಿಸಿದಂತೆ ಏನಾದರೂ ವಿವಾದಗಳಿದ್ದರೆ ಅದು ಬಗೆಹರಿಯಲಿದೆ. 

ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link