ಕುಂಭದಲ್ಲಿ ಶನಿಯ ಹಿಮ್ಮುಖ ಚಲನೆ: ಈ 3 ರಾಶಿಯ ಜನರಿಗೆ ಭರ್ಜರಿ ಲಾಭ ಸಿಗಲಿದೆ!

Fri, 30 Aug 2024-5:18 pm,

ಶನಿ ದೇವನು ಧನು ರಾಶಿಯ ೩ನೇ ಮನೆಯಲ್ಲಿ ಹಿಮ್ಮುಖ ಚಲನೆ ಮಾಡುವುದು. ಈ ಅವಧಿಯಲ್ಲಿ ಧನು ರಾಶಿಯವರು ಅನುಕೂಲಕರ ಪ್ರಯೋಜನ ಪಡೆಯುತ್ತೀರಿ, ಈ ಅವಧಿಯಲ್ಲಿ ನಿಮ್ಮ ಧೈರ್ಯ ಮತ್ತು ಶೌರ್ಯ ಹೆಚ್ಚಾಗಲಿದೆ. ವ್ಯಾಪಾರಿಗಳು ಈ ಅವಧಿಯಲ್ಲಿ ಉತ್ತಮ ಲಾಭ ಪಡೆಯುತ್ತಾರೆ. ಶನಿಯು ಹಿಮ್ಮುಖ ಚಲನೆಯಲ್ಲಿರುವ ಈ ಅವಧಿಯಲ್ಲಿ ಹಠಾತ್ ಆರ್ಥಿಕ ಲಾಭ ಗಳಿಸುತ್ತೀರಿ. ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವ ವಿದ್ಯಾರ್ಥಿಗಳು ತಮ್ಮ ಪ್ರಯತ್ನಗಳಲ್ಲಿ ಯಶಸ್ಸನ್ನು ಪಡೆಯುವ ಬಲವಾದ ಅವಕಾಶಗಳಿವೆ. ಕುಟುಂಬ ಜೀವನದ ದೃಷ್ಟಿಯಿಂದ ಈ ಸಮಯ ಉತ್ತಮವಾಗಿದೆ.

ಶನಿಯು ಹಿಮ್ಮುಖ ಚಲನೆಯಲ್ಲಿರುವಾಗ ಮೇಷ ರಾಶಿಯವರು ತುಂಬಾ ಪ್ರಯೋಜನ ಪಡೆಯುತ್ತೀರಿ. ನಿಮ್ಮ ಆದಾಯದಲ್ಲಿ ಅಗಾಧ ಹೆಚ್ಚಳ ಕಂಡುಬರುತ್ತದೆ. ಆದಾಯದ ಹೊಸ ಮಾರ್ಗಗಳು ನಿಮಗಾಗಿ ತೆರೆದುಕೊಳ್ಳಬಹುದು. ನೀವು ಹಣ ಮತ್ತು ಆಸ್ತಿ ಗಳಿಸುತ್ತೀರಿ. ಈ ಅವಧಿಯಲ್ಲಿ ಹೊಸ ಮನೆ, ವಾಹನ ಮುಂತಾದವುಗಳನ್ನು ಖರೀದಿಸಬಹುದು. ನೀವು ಮೊದಲು ಯಾವುದೇ ಹೂಡಿಕೆ ಮಾಡಿದ್ದರೆ ಅದರ ಲಾಭ ಪಡೆಯುತ್ತೀರಿ. ವ್ಯಾಪಾರಿಗಳು ಉತ್ತಮ ಲಾಭ ಪಡೆಯುತ್ತಾರೆ. ನೀವು ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಲು ಈ ಅವಧಿ ಅನುಕೂಲಕರವಾಗಿರುತ್ತದೆ. ಉದ್ಯೋಗಸ್ಥರಿಗೆ ಬಡ್ತಿ ದೊರೆಯುವ ಸಾಧ್ಯತೆ ಇದೆ.

ಕುಂಭ ರಾಶಿಯಲ್ಲಿಯೇ ಶನಿಯು ಹಿಮ್ಮುಖ ಚಲನೆ ಮಾಡುತ್ತಿದೆ. ಶನಿಯ ಹಿಮ್ಮುಖ ಚಲನೆಯು ನಿಮಗೆ ಮಂಗಳಕರ ಫಲ ನೀಡಲಿದೆ. ಶನಿಯು ನಿಮ್ಮ ರಾಶಿಯಲ್ಲೂ ಷಶ ರಾಜಯೋಗವನ್ನು ಸೃಷ್ಟಿಸುತ್ತಿದ್ದಾನೆ. ಇದರಿಂದ ನಿಮ್ಮ ಆತ್ಮವಿಶ್ವಾಸ ಹೆಚ್ಚಾಗಲಿದ್ದು, ಸಮಾಜದಲ್ಲಿ ನಿಮ್ಮ ಗೌರವ, ಪ್ರತಿಷ್ಠೆ ಹೆಚ್ಚಾಗುತ್ತದೆ. ರಾಜಕೀಯ ಕ್ಷೇತ್ರದಲ್ಲಿರುವವರಿಗೆ ಈ ಅವಧಿ ಅನುಕೂಲಕರವಾಗಿದೆ. ನಿಮ್ಮ ವೈವಾಹಿಕ ಜೀವನವೂ ಸುಖಮಯವಾಗಿರುತ್ತದೆ. ನಿಮ್ಮ ಹಾಗೂ ಸಂಗಾತಿ ನಡುವಿನ ಬಾಂಧವ್ಯ ಉತ್ತಮವಾಗಿರಲಿದೆ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link