SBI Alert : ನಿಮ್ಮ ಸಂಪಾದನೆ ಅನ್ಯರ ಪಾಲಾಗದಿರಲಿ ಎಚ್ಚರ..!
ಭಾರತದ ಅತಿದೊಡ್ಡ ಸಾರ್ವಜನಿಕ ಬ್ಯಾಂಕ್ ಎಸ್‌ಬಿಐ ತನ್ನ ಗ್ರಾಹಕರಿಗೆ ದುರಾಸೆಯಲ್ಲಿ ಸಿಲುಕದಂತೆ ಎಚ್ಚರಿಕೆ ನೀಡಿದೆ. ಮೋಸ ಮಾಡುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಗ್ರಾಹಕರು ದುರಾಶಸೆಗೆ ಸಿಲುಕಿ ತಾವು ಕಷ್ಟಪಟ್ಟು ಸಂಪಾದಿಸಿದ ಹಣವನ್ನು ಕಳೆದುಕೊಳ್ಳಬೇಕಾದೀತು ಎಂದು ಎಚ್ಚರಿಸಿದೆ.
ಪ್ರಸ್ತುತ, ಸೈಬರ್ ಅಪರಾಧಿಗಳು ಸಕ್ರಿಯರಾಗಿದ್ದಾರೆ. ಬೇರೆ ಬೇರೆ ರೀತಿಯಲ್ಲಿ ಸಾಮಾನ್ಯ ಜನರನ್ನು ಗುರಿಯಾಗಿಸಿಕೊಳ್ಳುತ್ತಿದ್ದಾರೆ. ಅನುಮಾನಾಸ್ಪದ ಸಂಖ್ಯೆ ಅಥವಾ ಹೆಸರಿನಲ್ಲಿ ಕಳುಹಿಸಲಾಗುವ ಲಿಂಕ್ ಗಳನ್ ನು ಯಾವುದೇ ಕಾರಣಕ್ಕೆ ಕ್ಲಿಕ್ ಮಾಡದಂತೆ ಎಸ್ ಬಿಐ ಹೇಳಿದೆ. (Photo SBI Twitter)
ಸೈಬರ್ ಕ್ರಿಮಿನಲ್ ಗಳು ಎಸ್ ಬಿಐ ಹೆಸರಿನಲ್ಲಿ ಸಂದೇಶಗಳನ್ನು ಕಳುಹಿಸಿ, ಜನರನ್ನು ತಮ್ಮ ಮೋಸದ ಬಲೆಯಲ್ಲಿ ಸಿಲುಕಿಸುತ್ತಾರೆ. ರಿವಾರ್ಡ್ ಪಾಯಿಂಟ್ ನ ಹೆಸರಿನಲ್ಲಿ ಲಿಂಕ್ ಗಳನ್ನು ಕಳುಹಿಸುತ್ತಾರೆ.ಈ ಲಿಂಕ್ ಗಳ ಮೂಲಕ ಗ್ರಾಹಕರ ಮಾಹಿತಿಗಳನ್ನ ಕದಿಯಲಾಗುತ್ತದೆ ಎಂದು ಎಸ್ ಬಿಐ ತನ್ನ ಟ್ವಿಟರ್ ಹ್ಯಾಂಡಲ್ ನಲ್ಲಿ ಹೇಳಿದೆ. ಈ ಕಾರಣಕ್ಕಾಗಿ ಗ್ರಾಹಕರು ಯಾವುದೇ ಕಾರಣಕ್ಕೂ ಇಂಥಹ ಲಿಂಕ್ ಗಳ ಮೇಲೆ ಕ್ಲಿಕ್ ಮಾಡದಂತೆ ಸೂಚಿಸಲಾಗಿದೆ. (Photo SBI website)
ಗ್ರಾಹಕರು ಯಾವುದೇ ವ್ಯಕ್ತಿಗೆ ಕಾರ್ಡ್, ಪಿನ್, ಸಿವಿವಿ, ಪಾಸ್‌ವರ್ಡ್ ನೀಡಬಾರದು ಎಂದು ಎಸ್‌ಬಿಐ ತನ್ನ ಗ್ರಾಹಕರಿಗೆ ಎಚ್ಚರಿಕೆ ನೀಡಿದೆ. ಏಕೆಂದರೆ ಎಸ್‌ಬಿಐ ತಮ್ಮ ಗ್ರಾಹಕರ ಡೇಟಾವನ್ನು ಕೇಳುವುದಿಲ್ಲ ಎಂದು ಸ್ಪಷ್ಟಪಡಿಸಿದೆ. (Photo SBI website)