SBI Holiday Schemeನಲ್ಲಿ ಕಡಿಮೆ ಹಣಕ್ಕೆ ಪ್ರವಾಸ ಭಾಗ್ಯದೊಂದಿಗೆ ಬಡ್ಡಿಯನ್ನು ಗಳಿಸುವ ಅವಕಾಶ
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ) ಒಂದು ವಿಶಿಷ್ಟ ಯೋಜನೆಯನ್ನು ತಂದಿದೆ. ಇದರಲ್ಲಿ ರಜಾದಿನದ ಪ್ಯಾಕೇಜ್ ಅನ್ನು ಒದಗಿಸಲಾಗುತ್ತದೆ. ಇದರಲ್ಲಿ ಜನರಿಂದ ಕಂತುಗಳಲ್ಲಿ ಹಣವನ್ನು ಜಮಾ ಮಾದಿಸಲಾಗುತ್ತದೆ. ಅಲ್ಲದೆ ಈ ಹಣದ ಮೇಲೆ ಬಡ್ಡಿಯನ್ನು ಕೂಡಾ ನೀಡಲಾಗುತ್ತದೆ. ಇದು ಒಂದು ರೀತಿಯ ಮಾಸಿಕ ಆರ್‌ಡಿ ಯೋಜನೆಯಾಗಿದೆ. ಇದರಲ್ಲಿ, ರಜಾ ಪ್ಯಾಕೇಜಫ್ ಗಾಗಿ ಪ್ರತಿ ತಿಂಗಳು ಹಣವನ್ನು ಠೇವಣಿ ಮಾಡಬಹುದು. ಈ ಠೇವಣಿ ಮೇಲೆ ಬಡ್ಡಿಯನ್ನು ಕೂಡ ನೀಡಲಾಗುವುದು.
ಕರೋನಾ ವೈರಸ್‌ನಿಂದಾಗಿ ಜನರು ಮನೆಯಿಂದ ಹೊರ ಬಾರದ ಸ್ಥಿತಿಯನ್ನು ಎದುರಿಸುವಂತಾಗಿದೆ. ರಈಗ ಪರಿಸ್ಥಿತಿ ಸುಧಾರಿಸುತ್ತಿರುವುದರಿಂದ ಜನರು ರಜಾದಿನಗಳನ್ನು ಯೋಜಿಸುತ್ತಿದ್ದಾರೆ. ಅಂತಹ ಪರಿಸ್ಥಿತಿಯಲ್ಲಿ, ಎಲ್ಲರೂ ಸುರಕ್ಷಿತ ಸ್ಥಳಗಳಿಗೆ ತೆರಳುವ ತಯಾರಿ ನಡೆಸುತ್ತಿದ್ದಾರೆ.
ಆದರೆ ಸದ್ಯದ ಪರಿಸ್ಥಿತಿಯಲ್ಲಿ ರಜಾ ದಿನವನ್ನು ಆಯೋಜಿಸುವುದು ಸಾಧ್ಯವೇ ಎಂಬ ಪ್ರಶ್ನೆ ಎದುರಾಗಬಹ್ದು. ಇದಕ್ಕಾಗಿಯೇ ಎಸ್‌ಬಿಐ ಉತ್ತಮ ಅವಕಾಶವನ್ನು ನೀಡುತ್ತಿದೆ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಥಾಮಸ್ ಕುಕ್ ಇಂಡಿಯಾ ಸಹಯೋಗದೊಂದಿಗೆ ವಿಹಾರಕ್ಕೆ ಹೋಗುವ ಜನರಿಗೆ ಈ ವಿಶಿಷ್ಟ ಉಳಿತಾಯ ಯೋಜನೆಯನ್ನು ಪ್ರಾರಂಭಿಸಿದೆ.
ಥಾಮಸ್ ಕುಕ್ ವೆಬ್‌ಸೈಟ್‌ನಲ್ಲಿ ಹಾಲಿಡೇ ಸೇವಿಂಗ್ಸ್ ಅಕೌಂಟ್ ಪ್ಯಾಕೇಜ್‌ಗಳ ಅಡಿಯಲ್ಲಿ ನೀಡಲಾಗುವ ರಜಾ ಪ್ಯಾಕೇಜ್‌ಗಳನ್ನು ಪಡೆಯಲು ನೀವು ಎಸ್‌ಬಿಐ ಆರ್‌ಡಿ ಯಲ್ಲಿ ಮಾಸಿಕ ಆಧಾರದ ಮೇಲೆ ಉಳಿತಾಯ್ ಮಾಡಬಹುದು. ಇದರ ಅಡಿಯಲ್ಲಿ 12 ಕಂತುಗಳನ್ನು ಪಾವತಿಸಬೇಕಾಗುತ್ತದೆ. ಈ ಹಣದ ಮೇಲೆ ಬಡ್ಡಿಯನ್ನು ಸಹ ನೀಡಲಾಗುತ್ತದೆ.
.ಈ ಯೋಜನೆಯ ಲಾಭ ಪಡೆಯಲು, ನೀವು ಥಾಮಸ್ ಕುಕ್ ಅವರ ವೆಬ್‌ಸೈಟ್‌ಗೆ ಭೇಟಿ ನೀಡಬೇಕಾಗುತ್ತದೆ. ಇಲ್ಲಿ ನೀವು ನಿಮ್ಮ ನೆಚ್ಚಿನ ಪ್ಯಾಕೇಜ್ ಅನ್ನು ಆಯ್ಕೆ ಮಾಡಬಹುದು. ನೀವು ಆಯ್ಕೆ ಮಾಡುವ ಯಾವುದೇ ಪ್ಯಾಕೇಜ್‌ನ ಬೆಲೆಯನ್ನು 13 ಭಾಗಗಳಾಗಿ ವಿಂಗಡಿಸಲಾಗುತ್ತದೆ. ಥಾಮಸ್ ಕುಕ್ ಇದರ ಒಂದು ಭಾಗವನ್ನು ಒದಗಿಸಲಿದ್ದು, ನಿಮಗೆ 12 ಕಂತುಗಳಲ್ಲಿ ಬಡ್ಡಿ ನೀಡಲಾಗುವುದು.
ಇದರ ನಂತರ ನಿಮ್ಮನ್ನು ಆನ್‌ಲೈನ್ ಎಸ್‌ಬಿಐ ಪೋರ್ಟಲ್‌ಗೆ ರಿ ಡೈರೆಕ್ಟ್ ಮಾಡಲಾಗುತ್ತದೆ. ಇಲ್ಲಿ ನೀವು 12 ಮಾಸಿಕ ಕಂತುಗಳಿಗೆ ಇ-ಆರ್‌ಡಿ ತೆರೆಯಬಹುದು. ನಿಮ್ಮ ಇ-ಆರ್‌ಡಿಗೆ 12 ತಿಂಗಳವರೆಗೆ ಬಡ್ಡಿ ನೀಡಲಾಗುವುದು. ಈ ಯೋಜನೆಯಡಿಯಲ್ಲಿ, ಒಂದು ವರ್ಷ ಪೂರ್ಣಗೊಂಡ ನಂತರ, ನಿಮ್ಮ ಆಯ್ಕೆಯ ಹಾಲಿಡೇ ಪ್ಯಾಕೇಜ್‌ಗಾಗಿ ಮೆಚ್ಯೂರಿಟಿ ಮೊತ್ತವನ್ನು ಥಾಮಸ್ ಕುಕ್‌ಗೆ ರವಾನಿಸಲಾಗುತ್ತದೆ.