ಅತ್ಯಂತ ಅಗ್ಗದ ಬಡ್ಡಿ ದರದಲ್ಲಿ ಎಸ್ ಬಿಐ ನೀಡುತ್ತಿದೆ ಗೋಲ್ಡ್ ಲೋನ್..!
ಎಸ್‌ಬಿಐನ ಈ ಚಿನ್ನದ ಮೇಲಿನ ಸಾಲದ ಕೊಡುಗೆಯು ವ್ಯಾಪಾರಸ್ಥರಿಗೆ ಮಾತ್ರ ಸಿಗಲಿದೆ. ಆಫರ್ ನ ಅಡಿಯಲ್ಲಿ 1 ಲಕ್ಷದಿಂದ 50 ಲಕ್ಷದವರೆಗೆ ಸಾಲ ಪಡೆದುಕೊಳ್ಳಬಹುದು. ಈ ಸಾಲ ಸೌಲಭ್ಯದಿಂದ ವ್ಯಾಪಾರಸ್ಥರು ತಮ್ಮ ವ್ಯವಹಾರವನ್ನು ಅಭಿವೃದ್ಧಿಪಡಿಸಲು ಸಹಕಾರಿಯಾಗಲಿದೆ.
ಎಸ್‌ಬಿಐನ ಈ ಆಫರ್ ಅಡಿಯಲ್ಲಿ ಚಿನ್ನದ ಮೇಲೆ ಸಾಲ ಪಡೆಯುವವರಿಗೆ ವಾರ್ಷಿಕ 7.25 ಶೇಕಡಾ ಬಡ್ಡಿದರದಲ್ಲಿಸಾಲ ನೀಡಲಾಗುತ್ತದೆ. ಅಂದರೆ, ವರ್ಷಕ್ಕೆ 1 ಲಕ್ಷ ರೂಪಾಯಿಗಳ ಚಿನ್ನದ ಸಾಲವನ್ನು ತೆಗೆದುಕೊಂಡರೆ, ಇದಕ್ಕಾಗಿ 7,250 ರೂಪಾಯಿಗಳನ್ನು ಬಡ್ಡಿಯಾಗಿ ಪಾವತಿಸಬೇಕಾಗುತ್ತದೆ.
ಸಾಮಾನ್ಯವಾಗಿ, ವ್ಯಾಪಾರಸ್ಥರು, ಯಾವುದೇ ರೀತಿಯ ಸಾಲವನ್ನು ಪಡೆಯಬೇಕಾದರೆ, ಬ್ಯಾಲೆನ್ಸ್ ಶೀಟ್ ಅನ್ನು ತೋರಿಸಬೇಕಾಗುತ್ತದೆ. ಆದರೆ ಎಸ್‌ಬಿಐನ ಈ ವಿಶೇಷ ಕೊಡುಗೆಯಲ್ಲಿ ಬ್ಯಾಲೆನ್ಸ್ ಶೀಟ್ ಅನ್ನು ತೋರಿಸುವ ಅಗತ್ಯವಿರುವುದಿಲ್ಲ. ಚಿನ್ನವನ್ನು ಅಡವಿಟ್ಟು ಲೋನ್ ಪಡೆದುಕೊಳ್ಳಬಹುದು.
ಎಸ್‌ಬಿಐ ತನ್ನ ಅಧಿಕೃತ ಟ್ವಿಟರ್ ಹ್ಯಾಂಡಲ್‌ನಲ್ಲಿ ವಿಶೇಷ ಚಿನ್ನ ಸಾಲದ ಬಗ್ಗೆ ಮಾಹಿತಿ ನೀಡಿದೆ. ತಮ್ಮ ಹತ್ತಿರದ ಶಾಖೆಗೆ ಭೇಟಿ ನಿಡಿ, ಈ ವಿಶೇಷ ಚಿನ್ನದ ಸಾಲದ ಬಗ್ಗೆ ಸಂಪೂರ್ಣ ಮಾಹಿತಿ ಪಡೆಯಬಹುದು ಎಂದು ತನ್ನ ಗ್ರಾಹಕರಿಗೆ ಎಸ್ ಬಿಐ ತಿಳಿಸಿದೆ. ಸಾಲ ತೆಗೆದುಕೊಳ್ಳುವ ಸಂಪೂರ್ಣ ಪ್ರಕ್ರಿಯೆಯು ಬಹಳ ಸರಳವಾಗಿದ್ದು, ಸಾಲಗಾರನಿಗೆ ತೊಂದರೆಯಾಗುವುದಿಲ್ಲ ಎಂದು ಎಸ್‌ಬಿಐ ಹೇಳಿದೆ.