ಕನಸಿನಲ್ಲಿ ಹಾವು ಬಂದರೆ ಒಳ್ಳೆಯದೋ ಕೆಟ್ಟದ್ದೋ ? ಯಾವುದರ ಸಂಕೇತ?
ಕನಸಿನಲ್ಲಿ ಹಾವು ಕಚ್ಚುವುದನ್ನು ನೋಡಿದರೆ, ನಿಮ್ಮ ಆರೋಗ್ಯದಲ್ಲಿ ಕೆಲವು ಸಮಸ್ಯೆಗಳು ಉಂಟಾಗುತ್ತವೆ ಎಂದರ್ಥ.
ನಿಮ್ಮ ಕನಸಿನಲ್ಲಿ ಹಾವು ನಿಮ್ಮ ಮುಂದೆ ಹೆಡೆ ಎತ್ತಿ ನಿಂತಿರುವುದನ್ನು ನೋಡಿದರೆ ನೀವು ಪ್ರಾಣಾಪಾಯದಿಂದ ಪಾರಾಗಿದ್ದೀರಿ ಎಂದರ್ಥ. ಶೀಘ್ರದಲ್ಲೇ ಗಂಭೀರ ಸಮಸ್ಯೆಯಿಂದ ಮುಕ್ತರಾಗುತ್ತೀರಿ ಎನ್ನುವುದನ್ನು ಅದು ಸೂಚಿಸುತ್ತದೆ.
ನಿಮ್ಮ ಕನಸಿನಲ್ಲಿ ಹಾವು ಬಾಯಿ ತೆರೆದಿರುವುದನ್ನು ನೋಡಿದರೆ, ನಿಮಗೆ ಏನಾದರೂ ಕೆಟ್ಟದು ಸಂಭವಿಸಲಿದೆ ಎಂದು ಅರ್ಥ. ಅಂತಹ ಪರಿಸ್ಥಿತಿಯಲ್ಲಿ, ಜಾಗರೂಕರಾಗಿರಬೇಕು
ನೀವು ಒಂದೇ ಬಾರಿಗೆ ಬಹಳಷ್ಟು ಹಾವುಗಳನ್ನು ನೋಡಿದರೆ, ಇದು ಜಾಗರೂಕರಾಗಿರಬೇಕಾದ ಸಮಯ ಎನ್ನುವುದನ್ನು ಅರ್ಥ ಮಾಡಿಕೊಳ್ಳಬೇಕು. ಇದು ನೀವು ದೊಡ್ಡ ತೊಂದರೆಗೆ ಸಿಲುಕುವ ಸಂಕೇತವಾಗಿದೆ.
ನಿಮ್ಮ ಕನಸಿನಲ್ಲಿ ಬಿಳಿ ಹಾವು ಕಾಣಿಸಿಕೊಂಡರೆ, ಅದನ್ನು ತುಂಬಾ ಮಂಗಳಕರವೆಂದು ಪರಿಗಣಿಸಲಾಗುತ್ತದೆ. ನಿಮ್ಮ ಕೆಟ್ಟ ಸಮಯ ಶೀಘ್ರದಲ್ಲೇ ಕೊನೆಗೊಳ್ಳುತ್ತದೆ ಮತ್ತು ಒಳ್ಳೆಯ ಕಾಲ ಎದುರಿಗಿದೆ ಎನ್ನುವುದನ್ನು ತೋರಿಸುತ್ತದೆ.
ಕನಸಿನಲ್ಲಿ ಹಾವನ್ನು ಕೊಲ್ಳುವಂತೆ ಅಥವಾ ಸತ್ತು ಬಿದ್ದಿರುವ ಹಾವು ಕಂಡರೆ ನಿಮ್ಮ ಜೀವನದಲ್ಲಿ ಎದುರಾಗಿದ್ದ ಅಪಾಯವು ದೂರವಾಗುತ್ತದೆ ಎಂದು ಹೇಳಲಾಗುತ್ತದೆ.