ಚಿಕಿತ್ಸೆ ನೀಡುತ್ತಿದ್ದ ಡಾಕ್ಟರ್ ಜೊತೆ ಲವ್.. ಈ ನಟಿ ಪ್ರೀತಿಗಾಗಿ ವೈದ್ಯನ ಪತ್ನಿಗೆ ಕೊಟ್ರು ಕೋಟಿ ಕೋಟಿ!
ವೈಜಯಂತಿ ಮಾಲಾ ಅವರನ್ನು "ಟ್ವಿಂಕಲ್ ಟೋಸ್" ಎಂದೇ ಜನರು ಕರೆಯುತ್ತಾರೆ. ವೈಜಯಂತಿ ಮಾಲಾನಟನೆ ಮಾತ್ರವಲ್ಲ ತಮ್ಮ ಗುಣಗಳಿಂದಲೂ ಎಲ್ಲರ ಮನ ಗೆದ್ದಿದ್ದಾರೆ.
ವೈಜಯಂತಿ ಮಾಲಾ ತಾಯಿ ವಸುಂಧರಾ ಕೂಡ 40ರ ದಶಕದಲ್ಲಿ ತಮಿಳು ಚಿತ್ರರಂಗದ ಖ್ಯಾತ ನಟಿಯಾಗಿದ್ದರು. ವೈಜಯಂತಿ ಮಾಲಾ ನೃತ್ಯವನ್ನು ತುಂಬಾ ಇಷ್ಟಪಡುತ್ತಿದ್ದರು.
ವೈಜಯಂತಿ ಮಾಲಾ ಅವರು ದಿಲೀಪ್ ಕುಮಾರ್ ಮತ್ತು ರಾಜ್ ಕಪೂರ್ ಅವರಂತಹ ಹಿರಿಯ ನಟರೊಂದಿಗೆ ಡೇಟಿಂಗ್ ಮಾಡಿದ್ದಾರೆ ಎಂಬ ವದಂತಿ ಅಂದಿನ ಕಾಲದಲ್ಲಿ ಇತ್ತು.
ಒಂದೊಮ್ಮೆ ನಟಿ ವೈಜಯಂತಿ ಮಾಲಾ ನ್ಯುಮೋನಿಯಾದಿಂದ ಬಳಲುತ್ತಿದ್ದರು. ಈ ಸಮಯದಲ್ಲಿ ಚಿಕಿತ್ಸೆಗಾಗಿ ವೈದ್ಯ ಚಮನ್‌ಲಾಲ್ ಬಾಲಿ ಬಳಿಗೆ ಹೋದರು. ಚಿಕಿತ್ಸೆ ಪಡೆಯುತ್ತಿರುವಾಗಲೇ ಇಬ್ಬರ ನಡುವೆ ಪ್ರೀತಿ ಅರಳಿತು.
ಡಾಕ್ಟರ್ ಚಮನ್‌ಲಾಲ್ ಬಾಲಿ ಆಗಾಗಲೇ ಮದುವೆಯಾಗಿದ್ದರು. ನಟಿ ವೈಜಯಂತಿ ಮಾಲಾ ಜೊತೆ ಮದುವೆ ಆಗಲೆಂದೇ ಮೊದಲ ಪತ್ನಿಗೆ ವಿಚ್ಛೇದನ ನೀಡಲು ನಿರ್ಧರಿಸಿದರು. ಆದರೆ ಪತ್ನಿ ವಿಚ್ಛೇದನ ನೀಡಲು ಭಾರೀ ಮೊತ್ತದ ಬೇಡಿಕೆಯಿಟ್ಟರು.
ಅಷ್ಟೊಂದು ಹಣವನ್ನು ಡಾಕ್ಟರ್ ಚಮನ್‌ಲಾಲ್ ಬಾಲಿ ಕೈಯಲ್ಲಿ ಕೊಡಲು ಸಾಧ್ಯವಾಗದಿದ್ದಾಗ, ವೈಜಯಂತಿ ಮಾಲಾ ಅವರೇ ಡಾಕ್ಟರ್ ಪತ್ನಿಗೆ ಜೀವನಾಂಶವನ್ನು ನೀಡಿದ್ದರೆಂಬ ವದಂತಿ ಇದೆ.
ನಂತರ 1968 ರಲ್ಲಿ ವೈಜಯಂತಿ ಮಾಲಾ ಜೊತೆ ಡಾಕ್ಟರ್ ಚಮನ್‌ಲಾಲ್ ಬಾಲಿ ವಿವಾಹವಾದರು. ಈ ಮದುವೆಗೆ ಚಿತ್ರರಂಗದ ಅನೇಕ ಗಣ್ಯರು ಆಗಮಿಸಿದ್ದರು.