Tanvi Rao: ಸಾಂಪ್ರದಾಯಕ ಉಡುಗೆಯಲ್ಲಿ ಮಿಂಚಿದ ಲಕ್ಷ್ಮಿ ಬಾರಮ್ಮ ಸೀರಿಯಲ್‌ನ ಕೀರ್ತಿ!

Mon, 29 Jan 2024-3:37 pm,

ತನ್ವಿ ರಾವ್ ಇತ್ತೀಚೆಗಷ್ಟೇ ಮಾಡಿಸಿಕೊಂಡಿರುವ ಫೋಟೋಶೂಟ್ ನಲ್ಲಿ ಸಾಂಪ್ರದಾಯಿಕ ಲುಕ್ ನಲ್ಲಿ ಆಕೆ ಕಾಣಿಸಿಕೊಂಡಿದ್ದು ಆಕೆಯ ಅಂದ ಕಂಡು ನೆಟ್ಟಿಗರು ಫಿದಾ ಆಗಿದ್ದಾರೆ. 

 ನಟಿ ತನ್ವಿ ರಾವ್‌ ಫೋಟೋದಲ್ಲಿ ತಿಳಿ ಹಸಿರು ಬಣ್ಣಕ್ಕೆ ಪಿಂಕ್ ಕಲರ್ ಕಾಂಬಿನೇಷನ್ ಇರುವಂತಹ ಸೀರೆ ಧರಿಸಿರುವ ಆಕೆ ಮದುವಣಗಿತ್ತಿಯಂತೆ ಕಂಗೊಳಿಸುತ್ತಿದ್ದಾರೆ. ಆ ಫೋಟೋಗಳನ್ನು ಸೋಷಿಯಲ್‌ ಮಿಡಿಯಾದಲ್ಲಿ ಶೇರ್‌ ಮಾಡಿದ್ದಾರೆ

ಕಿರುತೆರೆ ನಟಿ ತನ್ವಿ ಸಾಂಪ್ರದಾಯಕ ಉಡುಗೆಯಲ್ಲಿರುವ ಪೋಸ್ಟ್‌ಗೆ, "ಸೆಲೆಬ್ರೇಶನ್ ಲೈಫ್ ವಿತ್ ಲಿಟಲ್ ಬಿಟ್ ಆಫ್ ಸ್ಪೈಸ್" ಎಂಬ ಕಾಪ್ಶನ್ ಅನ್ನು ಕೊಟ್ಟಿದ್ದಾರೆ. 

ಕಿರುತೆರೆ ಬೆಡಗಿ ತನ್ವಿ ರಾವ್‌ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ "ಲಕ್ಷ್ಮಿ ಬಾರಮ್ಮ" ಧಾರವಾಹಿಯಲ್ಲಿ ನೆಗೆಟಿವ್ ಪಾತ್ರದ ಛಾಯೆಯಿರುವ ಕೀರ್ತಿ ಪಾತ್ರದ ಮೂಲಕ ಕಿರುತೆರೆಯಲ್ಲಿ ಸದ್ದು ಮಾಡುತ್ತಿರುವ ಮಾಡರ್ನ್ ಲೋಕದ ಸುಂದರಿ. 

ನಟಿ ತನ್ವಿ ರಾವ್‌ ಧಾರಾವಾಹಿಯಲ್ಲಿ ತುಂಡು ಉಡುಗೆಯನ್ನೇ ಧರಿಸುತ್ತಾ ಮೋಡಿ ಮಾಡುವ ಈಕೆಯ ಸಾಂಪ್ರದಾಯಿಕ ಚೆಲುವು ನೆಟ್ಟಿಗರನ್ನು ಬೆರಗಾಗಿಸಿದೆ. ಈಕೆಯನ್ನು ನೋಡಿದವರು ಅರೇ! ಇದು ಆಕೆಯಾ ಎಂದು ಉದ್ದರಿಸುವಂತೆ ಮಾಡಿದೆ.

ತನ್ವಿ ರಾವ್‌  ಉದಯ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ "ಆಕೃತಿ" ಧಾರಾವಾಹಿಯಲ್ಲಿ ನಾಯಕಿಯಾಗಿ ಕಿರುತೆರೆಗೆ ಕಾಲಿಟ್ಟು, ಬಳಿಕ ಸ್ಟಾರ್ ಸುವರ್ಣ ವಾಹಿನಿಯ "ರಾಧೆ ಶ್ಯಾಮ" ಧಾರಾವಾಹಿಯಲ್ಲಿಯೂ ನಾಯಕಿಯಾಗಿ ನಟಿಸಿದ ತದನಂತರ ಈಕೆ ಪರಭಾಷೆಯ ಕಿರುತೆರೆಯಲ್ಲಿ ಮೋಡಿ ಮಾಡಿದ್ದಾರೆ.

ಕಿರುತೆರೆ ಚೆಲುವೆ ತನ್ವಿ ರಾವ್‌ ತಮಿಳಿನ "ಜಮೀಲಾ" ಧಾರಾವಾಹಿಯಲ್ಲಿ ನಟಿಸಿ ಸೈ ಎನಿಸಿಕೊಂಡಿರುವ ಈಕೆ ಸದ್ಯ ಕೀರ್ತಿಯಾಗಿ ಕಿರುತೆರೆ ವೀಕ್ಷಕರನ್ನು ರಂಜಿಸುತ್ತಿದ್ದಾರೆ. 

ನಟಿ ತನ್ವಿ ರಾವ್ ಅವರ ನಟನಾ ಪಯಣ ಶುರುವಾಗಿದ್ದಿ ಹಿರಿತೆರೆಯಿಂದ. ಈಕೆ ಮೊದಲು ಮಾಧುರಿ ದೀಕ್ಷಿತ್ ಹಾಗೂ ಜೂಹಿ ಚಾವ್ಲಾರೊಂದಿಗೆ "ಗುಲಾಬ್ ಗ್ಯಾಂಗ್" ಸಿನಿಮಾದಲ್ಲಿ ನಾಯಕಿಯಾಗಿ ನಟಿಸಿ, ನಂತರ 'ಗನ್ಸ್ ಆಫ್ ಬನಾರಸ್'ನಲ್ಲಿ ಬಣ್ಣ ಹಚ್ಚಿರುವ ಈಕೆ ಕನ್ನಡದ "ರಂಗ್ ಬಿರಂಗಿ" ಸಿನಿಮಾದಲ್ಲಿಯೂ ಅಭಿನಯಿಸಿದ್ದಾರೆ. 

ನ್ವಿ ರಾವ್ ಒಬ್ವರು ಅತ್ಯುತ್ಯಮ ಭರತನಾಟ್ಯ ಕಲಾವಿದ್ದು, ನಾಲ್ಕನೇ ವಯಸ್ಸಿನಲ್ಲಿ ಭರತನಾಟ್ಯ ಕಲಿಯಲು ಶುರುಮಾಡಿ ಈಕೆ ರಾಜ್ಯ ಮಾತ್ರವಲ್ಲದೇ ರಾಷ್ಟ್ರಮಟ್ಟದ ನೃತ್ಯ ಸ್ಪರ್ಧೆಗಳಲ್ಲಿ ಭಾಗವಹಿಸಿ, ಹಲವು ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿದ್ದಾರೆ. ತನ್ವಿ ಅವರು ಕೇವಲ ಭರತನಾಟ್ಯವಲ್ಲದೇ ಕಥಕ್, ಸೆಮಿ ಕ್ಲಾಸಿಕಲ್ ನೃತ್ಯದಲ್ಲೂ ಪರಿಣಿತಿ ಪಡೆದಿದ್ದಾರೆ. 

ನಟಿ ತನವಿ ರಾವ್‌  ತನ್ನ 16ನೇ ವಯಸ್ಸಿನಲ್ಲೇ ಯುರೋಪ್ ಹಾಗೂ ಏಷ್ಯಾದ 6 ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ನೃತ್ಯ ಪ್ರದರ್ಶಿಶಿಸಿದ್ದಾರೆ.  

ZEENEWS TRENDING STORIES

By continuing to use the site, you agree to the use of cookies. You can find out more by Tapping this link