Shah Rukh Khan : ಶಾರುಖ್ ಖಾನ್‌ಗೆ ಅಮೆರಿಕಾದಲ್ಲಿ ಸರ್ಜರಿ..! ಅಭಿಮಾನಿಗಳಲ್ಲಿ ಆತಂಕ

Wed, 31 Jul 2024-5:50 pm,

ಬಾಲಿವುಡ್ ಕಿಂಗ್ ಶಾರುಖ್ ಖಾನ್ ಅನಾರೋಗ್ಯದಿಂದ ಬಳಲುತ್ತಿದ್ದಾರೆ. ಇತ್ತೀಚೆಗಷ್ಟೇ ಬಾದ್‌ ಶಾ ಆರೋಗ್ಯ ಸಮಸ್ಯೆಯಿಂದ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದಿದ್ದರು. ತಮ್ಮ ನೆಚ್ಚಿನ ನಟ ಪದೇ ಪದೇ ಅನಾರೋಗ್ಯಕ್ಕೆ ಒಳಗಾಗುತ್ತಿರುವುದು ಅಭಿಮಾನಿಗಳನ್ನು ಚಿಂತಾಕ್ರಾಂತರನ್ನಾಗಿಸಿದೆ..  

ಇದೀಗ ಶಾರುಖ್‌ಗೆ ಕಣ್ಣಿನ ಸಮಸ್ಯೆ ಎದುರಾಗಿದೆ. ನಟ ಶಸ್ತ್ರಚಿಕಿತ್ಸೆಗಾಗಿ ಅಮೆರಿಕಕ್ಕೆ ಹೋಗಿದ್ದಾರೆ. ಜುಲೈ 29 ರಂದು ನಟ ಶಾರುಖ್ ಖಾನ್ ಕಣ್ಣಿನ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ. ಆದರೆ ಈ ಶಸ್ತ್ರಚಿಕಿತ್ಸೆ ಯಶಸ್ವಿಯಾಗಲಿಲ್ಲ ಎಂದು ಹೇಳಲಾಗುತ್ತಿದೆ.    

ಕಳೆದ ಕೆಲವು ದಿನಗಳಿಂದ ಮುಂಬೈನ ಆಸ್ಪತ್ರೆಯಲ್ಲಿ ಕಣ್ಣಿನ ಚಿಕಿತ್ಸೆ ಪಡೆಯುತ್ತಿದ್ದರು. ಅವರಿಗೆ ಕಣ್ಣಿನ ಪೊರೆ ಇರುವುದು ಪತ್ತೆಯಾಯಿತು. ಶಾರುಖ್‌ಗೆ ಎರಡೂ ಕಣ್ಣುಗಳಲ್ಲಿ ಸಮಸ್ಯೆ ಇದೆ. ಒಂದು ಕಣ್ಣಿಗೆ ಭಾರತದಲ್ಲಿ ಚಿಕಿತ್ಸೆ ನೀಡಲಾಗಿದ್ದು, ಇನ್ನೊಂದು ಕಣ್ಣಿಗೆ ಅಮೆರಿಕದಲ್ಲಿ ಚಿಕಿತ್ಸೆ ನೀಡಲಾಗಿದೆ ಎನ್ನಲಾಗಿದೆ.. ಜೂಮ್ ವರದಿ ಪ್ರಕಾರ ಶಾರುಖ್ ಖಾನ್ ನೇತ್ರ ಚಿಕಿತ್ಸೆಗಾಗಿ ಜುಲೈ 30 ರಂದು ಅಮೆರಿಕಕ್ಕೆ ತೆರಳಿದ್ದಾರೆ.  

ಶಾರುಖ್ ಖಾನ್ ಎರಡು ತಿಂಗಳ ಹಿಂದೆ ಹೀಟ್ ಸ್ಟ್ರೋಕ್ ನಿಂದ ಬಳಲುತ್ತಿದ್ದರು. ಐಪಿಎಲ್ 2024 ರ ಸಮಯದಲ್ಲಿ ಅವರು ಡಿ-ಹೈಡ್ರೇಶನ್‌ನಿಂದಾಗಿ ಹೀಟ್ ಸ್ಟ್ರೋಕ್‌ನಿಂದ ಗುಜರಾತ್‌ನ ಅಹಮದಾಬಾದ್‌ನ ಆಸ್ಪತ್ರೆಗೆ ದಾಖಲಾಗಿದ್ದರು.   

ಐಪಿಎಲ್ ಫೈನಲ್ ವೇಳೆ ಶಾರುಖ್ ಖಾನ್ ಪತ್ನಿ ಗೌರಿ ಖಾನ್ ಪತಿಯನ್ನು ನೋಡಿಕೊಂಡಿದ್ದರು. ಇದೀಗ ಶಾರುಖ್ ಮತ್ತೆ ಆಸ್ಪತ್ರೆಗೆ ದಾಖಲಾಗಿದ್ದಾರೆ. ಇದರಿಂದಾಗಿ ನಟನ ಕಣ್ಣಿಗೆ ಏನಾಯಿತೋ ಎಂಬ ಚಿಂತೆ ಅವರ ಅಭಿಮಾನಿಗಳನ್ನು ಕಾಡುತ್ತಿದೆ.  

ಶಾರುಖ್ ಅಮೆರಿಕದಲ್ಲಿ ಚಿಕಿತ್ಸೆ ಪಡೆದ ನಂತರ ಭಾರತಕ್ಕೆ ಬರುವುದಿಲ್ಲ. ಅವರು ಆಗಸ್ಟ್ 7-8 ರಂದು ಸ್ವಿಜರ್ಲ್ಯಾಂಡ್ಗೆ ಹೋಗಲಿದ್ದಾರೆ. ಆದರೆ ಶಾರುಖ್ ವೈಯಕ್ತಿಕ ಕೆಲಸಕ್ಕಾಗಿ ಅಲ್ಲಿಗೆ ಹೋಗುತ್ತಿದ್ದಾರೋ ಅಥವಾ ಸಿನಿಮಾಗಾಗಿ ಹೋಗುತ್ತಿದ್ದಾರೋ ಗೊತ್ತಿಲ್ಲ..  

ಶಾರುಖ್‌ಗೆ ಈ ವರ್ಷ ಅದೃಷ್ಟದ ವರ್ಷ. ಪಠಾಣ್ ಮತ್ತು ಜವಾನ್ ಎರಡು ಬ್ಲಾಕ್ ಬಸ್ಟರ್ ಹಿಟ್‌ ಗಳಿಸಿವೆ. ಈ ಎರಡೂ ಚಿತ್ರಗಳು ವಿಶ್ವಾದ್ಯಂತ 1000 ಕೋಟಿ ಕಲೆಕ್ಷನ್ ಕ್ಲಬ್ ಸೇರಿದೆ. ಬ್ಯಾಕ್ ಟು ಬ್ಯಾಕ್ ಹಿಟ್ ಚಿತ್ರಗಳಿಂದ ಶಾರುಖ್ ಖಾನ್ ಅವರ ನಿವ್ವಳ ಮೌಲ್ಯ ಹೆಚ್ಚಾಗಿದೆ.  

ನಟ ಶಾರುಖ್ ಖಾನ್ ವಿಶ್ವದ ಶ್ರೀಮಂತ ನಟರ ಪಟ್ಟಿಯಲ್ಲಿ 5 ನೇ ಸ್ಥಾನದಲ್ಲಿದ್ದಾರೆ. ಶಾರುಖ್ ಖಾನ್ ನಿವ್ವಳ ಮೌಲ್ಯ 700 ಮಿಲಿಯನ್ ಡಾಲರ್ ಅಂದರೆ ರೂ.6,289 ಕೋಟಿ. ಶ್ರೀಮಂತ ನಟನ ಸಂಪತ್ತು ಕೇಳಿ ಅಭಿಮಾನಿಗಳು ಕೂಡ ಶಾಕ್ ಆಗಿದ್ದಾರೆ.  

ZEENEWS TRENDING STORIES

By continuing to use the site, you agree to the use of cookies. You can find out more by Tapping this link