Shami Plant Benefits: ತಾಯಿ ಲಕ್ಷ್ಮಿಯ ಕೃಪೆಯಿಂದ ಭಾಗ್ಯವನ್ನೇ ಬದಲಾಯಿಸುತ್ತದೆ ಶನಿಗೆ ಪ್ರಿಯವಾದ ಈ ವೃಕ್ಷ
1. 45 ದಿನಗಳ ಕಾಲ ಶಮಿ ವೃಕ್ಷದ ಬಳಿ ನಿತ್ಯವೂ ಸಂಜೆಯ ಹೊತ್ತು ತುಪ್ಪದ ದೀಪವನ್ನು ಬೆಳಗುವುದರಿಂದ ದಾಂಪತ್ಯದಲ್ಲಿನ ತೊಂದರೆಗಳು ದೂರವಾಗುತ್ತವೆ ಎಂದು ನಂಬಲಾಗಿದೆ.
2. ಮನೆಯ ಮುಖ್ಯ ದ್ವಾರದ ಹೊರಗೆ ಶಮಿ ಗಿಡವನ್ನು ನೆಡಬಹುದು. ಸಂಜೆ ಶಮಿ ಗಿಡದ ಬಳಿ ದೀಪವನ್ನು ಬೆಳಗಿಸುವುದರಿಂದ ಆರ್ಥಿಕ ಸ್ಥಿತಿ ಸುಧಾರಿಸುತ್ತದೆ. ಇದನ್ನು ನೇರವಾಗಿ ಮಡಕೆ ಅಥವಾ ನೆಲದ ಮೇಲೆ ನೆಡಬಹುದು.
3. ಈ ಸಸ್ಯವು ದೈವಿಕ ಅಂಶ ಹೊಂದಿದ್ದು, ಪವಿತ್ರವಾಗಿದೆ ಎಂದು ಜ್ಯೋತಿಷಿಗಳು ಹೇಳುತ್ತಾರೆ, ಆದ್ದರಿಂದ ಇದನ್ನು ಮನೆಯಲ್ಲಿ ನೆಡುವಾಗ ಶುದ್ಧ ಮಣ್ಣನ್ನು ಬಳಸಿ. ಗಿಡದ ಸುತ್ತ ಸ್ವಚ್ಛತೆ ಕಾಪಾಡಿ. ಅಷ್ಟೇ ಅಲ್ಲ ಶಮಿ ಗಿಡವನ್ನು ಮನೆಯೊಳಗೆ ನೆಡಬಾರದು. ಮನೆಯ ಮೇಲ್ಛಾವಣಿಯ ಮೇಲೆ ದಕ್ಷಿಣ ದಿಕ್ಕಿನಲ್ಲಿ ನೆಡಬೇಕು. ದಕ್ಷಿಣ ದಿಕ್ಕಿನಲ್ಲಿ ಸೂರ್ಯನ ಬೆಳಕು ಇಲ್ಲದಿದ್ದರೆ, ಅದನ್ನು ಪೂರ್ವ ದಿಕ್ಕಿನಲ್ಲಿಯೂ ಇಡಬಹುದು.
4. ಶನಿ ದೇವನ ಜೊತೆಗೆ ಶಿವನಿಗೂ ಕೂಡ ಶಮಿ ವೃಕ್ಷ ತುಂಬಾ ಪ್ರಿಯವಾದುದು. ಇದನ್ನು ನೆಡುವುದರಿಂದ ಮನೆಯಲ್ಲಿ ಸುಖ-ಸಮೃದ್ಧಿ ಹೆಚ್ಚಾಗಿ, ದುಃಖಗಳು ದೂರವಾಗುತ್ತವೆ. ಇದನ್ನು ಶನಿವಾರದಂದು ಮನೆಯಲ್ಲಿ ನೆಡುವುದರಿಂದ ಮಂಗಳಕರವೆಂದು ಪರಿಗಣಿಸಲಾಗಿದೆ. ಇದಲ್ಲದೇ ಈ ಗಿಡವನ್ನು ದಸರಾ ದಿನದಂದು ಕೂಡ ನೆಡಬಹುದು.
5. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಶನಿ ಸಾಡೇಸತಿ ಅಥವಾ ಎರಡೂವರೆ ವರ್ಷಗಳ ಕಾಟ ಎದುರಿಸುತ್ತಿರುವವರು ಮನೆಯಲ್ಲಿ ಶಮಿ ಗಿಡವನ್ನು ನೆಡಬೇಕು ಎಂದು ಸಲಹೆ ನೀಡಲಾಗುತ್ತದೆ. ಇದು ಶನಿಯ ಕೆಟ್ಟ ಪ್ರಭಾವವನ್ನು ಕಡಿಮೆ ಮಾಡುತ್ತದೆ.
6. ಶಾಸ್ತ್ರಗಳಲ್ಲಿ ಶಮಿ ಸಸ್ಯವನ್ನು ಶನಿ ದೇವರಿಗೆ ಸಮರ್ಪಿಸಲಾಗಿದೆ. ಮನೆಯಲ್ಲಿ ಶಮಿ ಗಿಡವನ್ನು ನೆಟ್ಟರೆ ಮನೆಯಲ್ಲಿ ಐಶ್ವರ್ಯ ಹೆಚ್ಚಾಗುತ್ತದೆ ಮತ್ತು ಮನೆಯ ವಾಸ್ತು ದೋಷಗಳು ನಿವಾರಣೆಯಾಗುತ್ತದೆ ಎಂದು ಹೇಳಲಾಗುತ್ತದೆ. ಮನೆಯಲ್ಲಿ ಶಮಿ ಗಿಡವನ್ನು ನೆಟ್ಟರೆ ಎಲ್ಲಾ ಅಡೆತಡೆಗಳು ದೂರವಾಗುತ್ತವೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಶಮಿಯನ್ನು ನಿತ್ಯ ಪೂಜಿಸುವುದರಿಂದ ವಿವಾಹ ಸಂಬಂಧಿ ಸಮಸ್ಯೆಗಳೂ ದೂರಾಗುತ್ತವೆ ಎನ್ನಲಾಗುತ್ತದೆ.