ಜಾತಕ ಫಲ ಏನೇ ಇರಲಿ ಈ ಮೂರು ರಾಶಿಯವರನ್ನು ಸದಾ ಕಾಯುತ್ತಿರುತ್ತಾನೆ ಶನಿ ದೇವ
ಮೂರು ರಾಶಿಯವರ ಜಾಕತದಲ್ಲಿ ಶನಿ ಸಾಡೇ ಸಾತಿ ನಡೆಯುತಿರಲಿ, ಶನಿ ಧೈಯ್ಯಾ ಅಥವಾ ಎರಡೂವರೆ ವರ್ಷದ ಶನಿ ದೆಸೆ ನಡೆಯುತ್ತಿರಲಿ ಈ ಮೂರು ರಾಶಿಯವರನ್ನು ಶನಿದೇವ ಅಷ್ಟಾಗಿ ಕಾಡುವುದಿಲ್ಲವಂತೆ. ಜಾತಕ ಫಲ ಏನೇ ಇದ್ದರೂ ಈ ಮೂರು ರಾಶಿಯವರ ಮೇಲೆ ತನ್ನ ಕೃಪಾ ದೃಷ್ಟಿಯನ್ನೇ ಹರಿಸುತ್ತಾನೆಯಂತೆ ಶನಿ ಮಹಾತ್ಮ.
ತುಲಾ ರಾಶಿಯನ್ನು ಶನಿ ದೇವನ ಉಚ್ಛ ರಾಶಿ ಎಂದು ಕರೆಯಲಾಗುತ್ತದೆ. ಈ ಕಾರಣಕ್ಕಾಗಿ ತುಲಾ ರಾಶಿಯವರ ಮೇಲೆ ಶನಿದೇವನ ಆಶೀರ್ವಾದ ಕೂಡಾ ಹೆಚ್ಚಾಗಿ ಇರುತ್ತದೆ ಎಂದು ಹೇಳಲಾಗುತ್ತದೆ. ಈ ರಾಶಿಯವರು ಬುದ್ಧಿವಂತರು ಮತ್ತು ಶ್ರಮಜೀವಿಗಳು. ಇವರು ಯಾವಾಗಲೂ ಸತ್ಯದ ಪರ ನಿಲ್ಲುತ್ತಾರೆ. ಶನಿಯ ದೆಸೆಯ ಸಂದರ್ಭದಲ್ಲಿಯೂ ಈ ರಾಶಿಯವರ ಮೇಲೆ ತನ್ನ ಕೃಪೆ ಇಟ್ಟಿರುತ್ತಾನೆ ಶನಿ.
ಶನಿಯು ಮಕರ ರಾಶಿಯ ಅಧಿಪತಿ. ಈ ಕಾರಣಕ್ಕೆ ಮಕರ ರಾಶಿಯೆಂದರೆ ಶನಿ ದೇವರಿಗೆ ಪ್ರೀತಿಯಂತೆ. ಈ ರಾಶಿಯವರು ಕೂಡಾ ಪ್ರತಿಭಾವಂತರು ಮತ್ತು ಬುದ್ಧಿವಂತರು. ಇವರು ಯಾವುದೇ ಕೆಲಸಲ್ಲೇ ಕೈ ಹಾಕಿದರೂ ಶನಿ ದೇವನ ಕೃಪೆಯಿಂದ ಅದರಲ್ಲಿ ಯಶಸ್ಸು ಕಾಣುತ್ತಾರೆ. ಜೀವನದಲ್ಲಿ ಎದುರಾಗುವ ಕಷ್ಟವನ್ನು ದೃಢವಾಗಿ ಎದುರಿಸುತ್ತಾರೆ. ಕಠಿಣ ಪರಿಶ್ರಮದ ಮೂಲಕ ಜೀವನದಲ್ಲಿ ಏನನ್ನಾದರೂ ಸಾಧಿಸುತ್ತಾರೆ. ಶನಿಯ ವಕ್ರದೃಷ್ಟಿ ಈ ರಾಶಿಯವರ ಮೇಲೆ ಪರಿಣಾಮ ಬೀರುವುದಿಲ್ಲ.
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಕುಂಭ ರಾಶಿಯ ಅಧಿಪತಿ ಕೂಡಾ ಶನಿ. ಈ ರಾಶಿಯವರು ಶಾಂತಿಪ್ರಿಯರು. ಶಿಸ್ತು, ಕಠಿಣ ಪರಿಶ್ರಮ, ತಾಳ್ಮೆ ಹೊಂದಿದ್ದರು ಹಠ ಸ್ವಭಾವದವರು. ಒಂದು ಕೆಲಸ ಮಾಡಬೇಕು ಎಂದು ನಿರ್ಧರಿಸಿದರೆ ಅದನ್ನು ಮಾಡಿ ಮುಗಿಸಿ ಅದರಲ್ಲಿ ಯಶಸ್ಸನ್ನು ಕಂಡುಕೊಳ್ಳುತ್ತಾರೆ. ಇವರು ಆರ್ಥಿಕವಾಗಿ ಸಬಲರಾಗಿರುತ್ತಾರೆ. ಈ ರಾಶಿಯವರು ಯಾವುದನ್ನು ಸುಲಭವಾಗಿ ಬಿಟ್ಟುಕೊಡುವುದಿಲ್ಲ. ಏನೇ ಸಮಸ್ಯೆ ಬಂದರೂ ಧೈರ್ಯವಾಗಿ ಮುನ್ನುಗ್ಗುತ್ತಾರೆ.
(ಸೂಚನೆ : ಇಲ್ಲಿ ನೀಡಲಾದ ಲೇಖನವು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ದೃಢಪಡಿಸುವುದಿಲ್ಲ.)