Shani Dev: ಶನಿವಾರ ನಿರ್ಮಾಣಗೊಳ್ಳುತ್ತಿದೆ ಈ ವಿಶೇಷ ಕಾಕತಾಳೀಯ, ಈ ಕೆಲಸ ಮಾಡಿ ಶನಿ ಕೃಪೆಗೆ ಪಾತ್ರರಾಗಿ

Fri, 25 Nov 2022-3:53 pm,

1. ಅಶುಭ ಶನಿ ಭಾರಿ ಕಷ್ಟ ಕೊಡುತ್ತಾನೆ: ಶನಿಯ ಸಾಡೆಸಾತಿ ಅಥವಾ ಎರಡೂವರೆ ವರ್ಷಗಳ ಕಾಟ ನಡೆಯುತ್ತಿದ್ದರೆ ಮತ್ತು ಜಾತಕದಲ್ಲಿ ಶನಿ ಅಶುಭ ಸ್ಥಾನದಲ್ಲಿದ್ದರೆ, ವ್ಯಕ್ತಿಯ ಜೀವನದಲ್ಲಿ ಸಾಕಾಷ್ಟು ಸಂಕಷ್ಟಗಳು ಎದುರಾಗುತ್ತವೆ. ಅಷ್ಟೇ ಅಲ್ಲ ವ್ಯಕ್ತಿ ಶಾರೀರಿಕ-ಮಾನಸಿಕ ಸಂಕಷ್ಟಗಳನ್ನು ಎದುರಿಸುತ್ತಾನೆ. ಧನ ಹಾನಿಯೂ ಕೂಡ ಸಂಭವಿಸುತ್ತದೆ. ಆತ್ಮವಿಶ್ವಾಸದಲ್ಲಿ ಕೊರತೆ ಕಾಡುತ್ತದೆ ಮತ್ತು ವ್ಯಕ್ತಿ ಅನಾವಶ್ಯಕ ಸಂಗತಿಗಳಲ್ಲಿ ಸಿಲುಕಿಕೊಳ್ಳುತ್ತಾನೆ.  

2. ಶನಿಯ ಉಪಾಯಗಳು ಪರಿಹಾರ ನೀಡುತ್ತವೆ: ಇಂತಹ ಪರಿಸ್ಥಿತಿಗಳಲ್ಲಿ ಶನಿಯ ಸಂಕಷ್ಟದಿಂದ ಮುಕ್ತಿ ಪಡೆಯಲು ಕೆಲ ಉಪಾಯಗಳನ್ನು ಮಾಡಬೇಕು. ಈ ಉಪಾಯಗಳು ಶನಿಯನ್ನು ಪ್ರಸನ್ನಗೊಳಿಸುತ್ತವೆ ಮತ್ತು ಜೀವನದ ಎಲ್ಲಾ ಕಠಿಣ ಪ್ರಸಂಗಗಳಲ್ಲಿ ಪರಿಹಾರವನ್ನು ನೀಡುತ್ತಾನೆ. ಕೆಲಸ ಕಾರ್ಯಗಳಲ್ಲಿ ಬರುವ ವಿಘ್ನಗಳು ದೂರಗುತ್ತವೆ.  

3. ಈ ಜನರು ಉಪಾಯಗಳನ್ನು ಮಾಡಬೇಕು: ಪ್ರಸ್ತುತ ಧನು, ಮಕರ, ಕುಂಭ ರಾಶಿಗಳ ಮೇಲೆ ಶನಿಯ ಸಾಡೆಸಾತಿ ನಡೆಯುತ್ತಿದೆ. ಇನ್ನೊಂದೆಡೆ ಮಿಥುನ ಹಾಗೂ ತುಲಾ ರಾಶಿಗಳ ಜನರಿಗೆ ಶನಿಯ ಎರಡೂವರೆ ವರ್ಷಗಳ ಕಾಟ ಸಾಗುತ್ತಿದೆ. ಹೀಗಿರುವಾಗ ಈ 5 ರಾಶಿಗಳ ಜನರು ಶನಿವಾರ ಕೆಲ ವಿಶೇಷ ಉಪಾಯಗಳನ್ನು ಅವಶ್ಯವಾಗಿ ಮಾಡಬೇಕು.  

4. ಶನಿ ಉಪಾಯ: ಶನಿ ದೇವನನ್ನು ಪ್ರಸನ್ನಗೊಳಿಸಲು ಶನಿವಾರ ಶನಿ ದೇವಸ್ಥಾನಕ್ಕೆ ಹೋಗಿ ಸಾಸಿವೆ ಎಣ್ಣೆ ಅರ್ಪಿಸಬೇಕು. ಸಾಧ್ಯವಾದರೆ ಆಲದ ಮರದ ಕೆಳಗೆ ದೀಪ ಬೆಳಗಬೇಕು. ಶನಿಗೆ ಸಂಬಂಧಿಸಿದ ವಸ್ತುಗಳನ್ನು ದಾನದ ರೂಪದಲ್ಲಿ ನೀಡಬೇಕು. ಶನಿ ಚಾಲಿಸಾ ಪಠಿಸಬೇಕು. ಬಡ-ನಿರ್ಗತಿಕರಿಗೆ ಸಹಾಯ ಮಾಡಬೇಕು. ಕಷ್ಟ ಪಟ್ಟು ದುಡಿಯುವವರನ್ನು ಗೌರವಿಸಬೇಕು.  

5. ಈ ಕೆಲಸಗಳಿಂದ ದೂರವಿರಿ: ಶನಿ ದೇವನ ಪ್ರಕೋಪಕ್ಕೆ ಕಾರಣವಾಗುವ ಕೆಲಸಗಳನ್ನು ಮಾಡಬಾರದು. ಅದರಲ್ಲೀಯೂ ವಿಶೇಷವಾಗಿ ಶನಿವಾರದ ದಿನ ಆ ಕೆಲಸಗಳನ್ನು ಮಾಡಬಾರದು. ಉದಾಹರಣೆಗೆ ಬಡ ಮತ್ತು ನಿರ್ಗತಿಕರ ಅಪಹಾಸ್ಯ ಮಾಡಬಾರದು. ಅವಮಾನಿಸಬಾರದು. ಯಾರಿಗೂ ವಂಚನೆ ಎಸಗಬೇಡಿ. ಮೂಕ ಪ್ರಾಣಿಗಳಿಗೆ ಸತಾಯಿಸಬೇಡಿ. ಪರಿಶ್ರಮದಿಂದ ದುಡಿಯುವವರನ್ನು ಅವಮಾನಿಸಬೇಡಿ ಮತ್ತು ಅವರ ಮನಸ್ಸನ್ನು ನೋಯಿಸಬೇಡಿ.  

ZEENEWS TRENDING STORIES

By continuing to use the site, you agree to the use of cookies. You can find out more by Tapping this link