ಕಬ್ಬಿಣದ ಪಾದಗಳ ಮೇಲೆ ನಡೆಯುವ ಶನಿದೇವ ಈ ರಾಶಿಯವರ ಬದುಕನ್ನು ಬಂಗಾರವನ್ನಾಗಿಸುತ್ತಾರೆ

Wed, 08 Feb 2023-2:34 pm,

ವೃಶ್ಚಿಕ ರಾಶಿ : ಶನಿದೇವನು ವೃಶ್ಚಿಕ ರಾಶಿಯ ಜನರ ಜಾತಕದಲ್ಲಿ ಕಬ್ಬಿಣದ ಪಾದಗಳಲ್ಲಿ ತನ್ನ ಚಲನೆ ಆರಂಭಿಸಿದ್ದಾನೆ. ಇದನ್ನು ಶಶ ರಾಜ ಯೋಗ ಎಂದು ಕರೆಯಲಾಗುತ್ತದೆ. ಈ ಶಶ ರಾಜಯೋಗ ವೃಶ್ಚಿಕ ರಾಶಿಯವರಿಗೆ ಭಾರೀ ಲಾಭವನ್ನು ತಂದುಕೊಡಲಿದೆ. ಪೂರ್ವಜರ ಆಸ್ತಿಯಿಂದ ಸಾಕಷ್ಟು ಲಾಭವಾಗಬಹುದು. ಆಸ್ತಿ ಮತ್ತು ವಾಹನ ಖರೀದಿ ಸಾಧ್ಯವಾಗುತ್ತದೆ.  ಹೊಸ ಉದ್ಯೋಗಾವಕಾಶಗಳು ಹುಟ್ಟಿಕೊಳ್ಳಬಹುದು. 

ಕಟಕ ರಾಶಿ : ಶನಿದೇವನು ಕಬ್ಬಿಣದ ಪಾದಗಳೊಂದಿಗೆ ಈ ರಾಶಿಯನ್ನು ಪ್ರವೇಶಿಸುತ್ತಾನೆ. ಈ ಸಮಯದಲ್ಲಿ, ಅನೇಕ ಒಳ್ಳೆಯ ಸುದ್ದಿ ಕೇಳಿ ಬರಲಿವೆ. ಯಾವ ಕೆಲಸಕ್ಕೆ ಕೈ ಹಾಕಿದರೂ ಅದರಲ್ಲಿ ಯಶಸ್ಸು ಸಿಗುತ್ತದೆ. ಹಳೆಯ ಹೂಡಿಕೆಯಿಂದ ಲಾಭವಾಗಲಿದೆ. ಅವಿವಾಹಿತರಿಗೆ ವಿವಾಹ ಪ್ರಸ್ತಾಪಗಳು ಕೂಡಿ ಬರಲಿವೆ. ವೇತನ ಹೆಚ್ಚಾಗಬಹುದು. ಬಡ್ತಿ ಸಿಗುವ ಸಾಧ್ಯತೆ ಇದೆ. 

ಮೀನ ರಾಶಿ : ಶನಿಯ ಸಂಕ್ರಮಣವು ಈ ರಾಶಿಯ ಜನರ ಮೇಲೆ ಪರಿಣಾಮ ಬೀರಲು ಪ್ರಾರಂಭಿಸಿದೆ. ಆದರೆ ಶನಿಯ ಕಬ್ಬಿಣದ ಪಾದಗಳ ಮೇಲಿನ ಚಲನೆ ಮೀನ ರಾಶಿಯವರಿಗೆ ಪ್ರಯೋಜನ ನೀಡಲಿದೆ. ಹೊರಗೆ ಉಳಿದಿದ್ದ ಹಣ ಮತ್ತೆ ಕೈ ಸೇರಲಿದೆ. ವಿದೇಶಕ್ಕೆ ಹೋಗುವ ಅವಕಾಶವಿರುತ್ತದೆ. ಉದ್ಯೋಗ ಬದಲಿಸಬೇಕು ಎಂದು ಕೊಂಡವರ ಆಸೆ ಈಡೇರಲಿದೆ.  ಆದಾಗ್ಯೂ, ಅಕ್ಟೋಬರ್ 30 ರ ನಂತರ, ನಿಮ್ಮ ಸುವರ್ಣ ದಿನಗಳು ಪ್ರಾರಂಭವಾಗುತ್ತವೆ. 

( ಗಮನಿಸಿ: ಇಲ್ಲಿ ನೀಡಲಾದ ಎಲ್ಲಾ ಮಾಹಿತಿಯು ಸಾಮಾಜಿಕ ಮತ್ತು ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಇದನ್ನು ಖಚಿತಪಡಿಸುವುದಿಲ್ಲ. )

ZEENEWS TRENDING STORIES

By continuing to use the site, you agree to the use of cookies. You can find out more by Tapping this link