ವಕ್ರ ದೃಷ್ಟಿ ಸರಿಸಿ ಕೃಪಾ ದೃಷ್ಟಿ ಹರಿಸುವನು ಶನಿದೇವ ! ಶನಿಮಹಾತ್ಮನಿಂದಲೇ 3 ರಾಶಿಯವರಿಗೆ ಒಲಿದು ಬರುವುದು ಕುಬೇರನ ಸಂಪತ್ತು !ಸಿರಿವಂತರಾಗುವ ಕಾಲ ದೂರವಿಲ್ಲ
ವೈದಿಕ ಜ್ಯೋತಿಷ್ಯದ ಪ್ರಕಾರ, ಸುಮಾರು ಎರಡೂವರೆ ವರ್ಷಗಳ ಕಾಲ ಕುಂಭ ರಾಶಿಯಲ್ಲಿದ್ದ ಶನಿಗ್ರಹ ಇದೀಗ ಮೀನ ರಾಶಿಯನ್ನು ಪ್ರವೇಶಿಸುತ್ತಾನೆ. ಈ ರೀತಿ ತನ್ನ ನಡೆ ಬದಲಿಸುವ ಮೂಲಕವೇ ಈ ರಾಶಿಯವರ ಜೀವನ ಬೆಳಗಲಿದಾನೆ ಕರ್ಮ ಫಲದಾತ.
ಮೇಷ ರಾಶಿ : ಸಮಾಜದಲ್ಲಿ ನಿಮ್ಮ ಗೌರವ ಹೆಚ್ಚಾಗುತ್ತದೆ. ಮನೆ ಖರೀದಿಸುವ ಯೋಜನೆ ಇದ್ದರೆ ಮುಂದುವರೆಯಿರಿ. ಸಂಪತ್ತು ವೃದ್ಧಿಯಾಗಲಿದೆ.ಮಾನಸಿಕ ಒತ್ತಡ ಕಡಿಮೆಯಾಗುವುದು. ವ್ಯಾಪಾರಿಗಳು ವ್ಯಾಪಾರದಲ್ಲಿ ಲಾಭ ಗಳಿಸಬಹುದು. ಉದ್ಯೋಗಸ್ಥರಿಗೆ ಬಡ್ತಿ ದೊರೆಯಬಹುದು.
ಮಿಥುನ ರಾಶಿ : ನಿಮಗೆ 2025 ರ ವರ್ಷವು ವಿಶೇಷವಾಗಿರುತ್ತದೆ. ವೇತನ ಹೆಚ್ಚಾಗಬಹುದು.ಕೆಲಸ ನ್ಬದಲಾಯಿಸುವ ಯೋಚನೆ ಇದ್ದರೆ ಇದು ಸಕಾಲ. ಪತಿ-ಪತ್ನಿಯರ ನಡುವಿನ ಸಂಬಂಧ ಸುಧಾರಿಸುತ್ತದೆ.ಧನ ಲಾಭದ ಯೋಗವಿದೆ. ಯಶಸ್ಸಿಗೆ ಹೊಸ ಅವಕಾಶಗಳು ದೊರೆಯಲಿವೆ
ಕುಂಭ ರಾಶಿ : ವಾಹನ, ಆಸ್ತಿ ಅಥವಾ ಹೀಗೆ ಯಾವುದೇ ವಸ್ತುವನ್ನು ಖರೀದಿಸಲು ಯೋಜಿಸಬಹುದು. ಉದ್ಯೋಗ ಬದಲಾಯಿಸಿದರೆ ಒಳ್ಳೆಯದೇ ಆಗುವುದು. ಆದಾಯವು ಬಡ್ತಿಯೊಂದಿಗೆ ಹೆಚ್ಚಾಗುತ್ತದೆ.ಕುಟುಂಬದಲ್ಲಿ ಸಂತಸದ ವಾತಾವರಣ ಇರುತ್ತದೆ.
ಸೂಚನೆ : ಇಲ್ಲಿ ನೀಡಿರುವ ಮಾಹಿತಿಯು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ZEE KANNADA NEWS ಅದನ್ನು ಖಚಿತಪಡಿಸುವುದಿಲ್ಲ.