2025 ರವರೆಗೆ ಈ ರಾಶಿಗಳ ಮೇಲೆ ಶನಿಯ ಕೃಪೆ.. ಝಣಝಣಿಸಲಿದೆ ಕಾಂಚಾಣ, ಕೀರ್ತಿ-ಸಂಪತ್ತು ಪ್ರಾಪ್ತಿ!
Saturn Transit 2023-2025: ನಾವು ಒಳ್ಳೆಯ ಕೆಲಸಗಳನ್ನು ಮಾಡಿದರೆ ಶನಿಯು ರಾಜನಂತಹ ಜೀವನವನ್ನು ನೀಡುತ್ತಾನೆ. ನಾವು ತಪ್ಪು ಮಾಡಿದರೆ ಆತನು ನಮ್ಮನ್ನು ಶಿಕ್ಷಿಸುತ್ತಾನೆ. ಸಾಮಾನ್ಯವಾಗಿ ಶನಿಯು ಎರಡೂವರೆ ವರ್ಷಗಳಿಗೊಮ್ಮೆ ತನ್ನ ರಾಶಿಯನ್ನು ಬದಲಾಯಿಸುತ್ತಾನೆ.
Shani Gohar : ಈ ವರ್ಷದ ಜನವರಿಯಲ್ಲಿ ನ್ಯಾಯದ ದೇವರು ಶನಿಯು ತನ್ನದೇ ಆದ ಕುಂಭ ರಾಶಿಯನ್ನು ಪ್ರವೇಶಿಸಿದನು. ಶನಿಯು 2025 ರವರೆಗೆ ಈ ರಾಶಿಯಲ್ಲಿ ಇರುತ್ತಾನೆ. ಈ ಶನಿಯ ಸಂಕ್ರಮಣದಲ್ಲಿ ಯಾವ ರಾಶಿಯವರಿಗೆ ಲಾಭವಾಗಲಿದೆ ಎಂದು ತಿಳಿದುಕೊಳ್ಳೋಣ.
ವೃಷಭ ರಾಶಿ: ಶನಿಯ ಸಂಚಾರ ವೃಷಭ ರಾಶಿಯವರಿಗೆ ಉತ್ತಮ ಫಲಿತಾಂಶ ನೀಡುತ್ತದೆ. ನಿಮ್ಮ ಕೆಲಸವನ್ನು ಪ್ರಶಂಸಿಸಲಾಗುತ್ತದೆ. ಉದ್ಯೋಗಿಗಳಿಗೆ ಬಡ್ತಿ ದೊರೆಯುತ್ತದೆ. ನೀವು ವಿಹಾರಕ್ಕೆ ಹೋಗುವ ಸಾಧ್ಯತೆಯಿದೆ. ನೀವು ಆಧ್ಯಾತ್ಮಿಕತೆಯಲ್ಲಿ ಆಸಕ್ತಿ ಹೊಂದಿರುತ್ತೀರಿ. ನಿಮ್ಮ ಆದಾಯ ಹೆಚ್ಚಾಗುತ್ತದೆ. ನಿಮ್ಮ ಆರ್ಥಿಕ ಪರಿಸ್ಥಿತಿ ಬಲಗೊಳ್ಳುತ್ತದೆ.
ತುಲಾ ರಾಶಿ : ಶನಿ ದೇವ ಬಹಳಷ್ಟು ಸಂಪತ್ತನ್ನು ನೀಡುತ್ತಾನೆ. ನಿಮ್ಮ ವೃತ್ತಿ ಜೀವನದಲ್ಲಿ ಉತ್ತಮ ಬೆಳವಣಿಗೆ ಇರುತ್ತದೆ. ನಿಮ್ಮ ಮದುವೆ ನಿಶ್ಚಯವಾಗುವ ಸಂಭವವಿದೆ. ನಿಮ್ಮ ಪ್ರೀತಿ ಯಶಸ್ವಿಯಾಗುತ್ತದೆ. ನೀವು ಹಠಾತ್ ಆರ್ಥಿಕ ಲಾಭವನ್ನು ಪಡೆಯುವಿರಿ. ನಿಮ್ಮ ವೈವಾಹಿಕ ಜೀವನ ಉತ್ತಮವಾಗಿರುತ್ತದೆ.
ಕುಂಭ ರಾಶಿ : ಪ್ರಸ್ತುತ ಶನಿಯು ಈ ರಾಶಿಯಲ್ಲಿ ಸಂಚರಿಸುತ್ತಿದ್ದಾನೆ. ಕುಂಭ ರಾಶಿಯವರು 2025 ರವರೆಗೆ ಅದೃಷ್ಟದ ಲಾಭ ಪಡೆಯುತ್ತಾರೆ. ನಿಮ್ಮ ಖ್ಯಾತಿಯನ್ನು ಹೆಚ್ಚುತ್ತದೆ. ನ್ಯಾಯಾಲಯದ ಪ್ರಕರಣಗಳಲ್ಲಿ ನೀವು ಯಶಸ್ವಿಯಾಗುತ್ತೀರಿ. ನಿಮ್ಮ ಜೀವನ ಸಂಗಾತಿಯ ಬೆಂಬಲವನ್ನು ನೀವು ಪಡೆಯುತ್ತೀರಿ.