ಕುಂಭದಲ್ಲಿ ಶನಿ ಮಾರ್ಗಿ... ಈ ರಾಶಿಗಳಿಗೆ ಭಾಗ್ಯೋದಯ, ಚಿನ್ನದಂತೆ ಹೊಳೆಯುವುದು ಅದೃಷ್ಟ.. ಉಕ್ಕಿ ಬರುವುದು ಧನ ಸಂಪತ್ತು!
Shani Margi : ನವೆಂಬರ್ 15 ರಂದು ಕುಂಭ ರಾಶಿಯಲ್ಲಿ ಶನಿ ಮಾರ್ಗಿ ನಡೆಯಲಿದೆ. ಇದು 7 ರಾಶಿಗಳ ಜನರ ಬದುಕಿನ ದಿಕ್ಕನ್ನೇ ಬದಲಿಸಲಿದೆ. ಈ ರಾಶಿಯ ಜನರು ಸಿರಿ ಸಂಪತ್ತನ್ನು ಪಡೆದು ಸುಖ ನೆಮ್ಮದಿ ಕಾಣುವರು.
ವೃಶ್ಚಿಕ ರಾಶಿ - ಆದಾಯದ ಮೂಲಗಳು ಹೆಚ್ಚಾಗಲಿವೆ. ಭೌತಿಕ ಸೌಕರ್ಯಗಳಲ್ಲಿ ಹೆಚ್ಚಳವನ್ನು ಕಾಣುವಿರಿ. ಹೂಡಿಕೆ ಮಾಡುವವರು ಉತ್ತಮ ಲಾಭವನ್ನು ಪಡೆಯುತ್ತಾರೆ.
ಕನ್ಯಾ ರಾಶಿ - ಶನಿ ಮಾರ್ಗಿ ಇವರಿಗೆ ಲಾಭದಾಯಕವಾಗಿದೆ. ಕುಟುಂಬ ಕಲಹಗಳು ದೂರವಾಗಲಿವೆ. ಕೆಲಸದ ಸ್ಥಳದಲ್ಲಿ ಗೌರವ ಹೆಚ್ಚಾಗಲಿದೆ. ಕುಟುಂಬದ ಆರ್ಥಿಕ ಸ್ಥಿತಿ ಸುಧಾರಿಸಲಿದೆ.
ವೃಷಭ ರಾಶಿ - ಮಾಡುವ ಪ್ರತಿ ಕೆಲಸದಲ್ಲಿಯೂ ಶನಿ ದೇವನ ಕೃಪೆಯಿಂದ ಯಶಸ್ಸು ಸಿಗಲಿದೆ. ವ್ಯಾಪಾರದಲ್ಲಿ ಅಧಿಕ ಲಾಭ ಗಳಿಸುವಿರಿ. ಉದ್ಯೋಗದಲ್ಲಿ ಅನೇಕ ಹೊಸ ಅವಕಾಶಗಳು ನಿಮ್ಮನ್ನು ಹುಡುಕಿ ಬರಲಿವೆ.
ಕುಂಭ ರಾಶಿ - ಎಲ್ಲಾ ಕೆಲಸದಲ್ಲಿಯೂ ಯಶಸ್ಸನ್ನು ಪಡೆಯುತ್ತಾರೆ. ಆರ್ಥಿಕ ಲಾಭಗಳನ್ನು ಪಡೆಯುವ ಸಾಧ್ಯತೆಗಳಿವೆ. ಮಾತಿನ ಮೂಲಕ ಎಲ್ಲರನ್ನೂ ಮೆಚ್ಚಿಸುವಿರಿ.
ಮಕರ ರಾಶಿ - ಆದಾಯದಲ್ಲಿ ಭಾರಿ ಹೆಚ್ಚಳವನ್ನು ಕಾಣುತ್ತಾರೆ. ಕುಟುಂಬದ ಎಲ್ಲಾ ಅಗತ್ಯಗಳನ್ನು ಪೂರೈಸುತ್ತೀರಿ. ಕುಟುಂಬ ಸದಸ್ಯರಲ್ಲಿ ಪರಸ್ಪರ ಪ್ರೀತಿ ಇರುತ್ತದೆ.
ಕರ್ಕಾಟಕ ರಾಶಿ - ಅದೃಷ್ಟದ ಬಲದಿಂದ ಸಿರಿವಂತರಾಗುವಿರಿ. ವೃತ್ತಿಯಲ್ಲಿ ಯಶಸ್ವಿಯಾಗುವಿರಿ. ವಿದ್ಯಾರ್ಥಿಗಳಿಗೆ ಶುಭ ಕಾಲ. ಕಷ್ಟದ ದಿನಗಳು ಕಳೆದು ಬದುಕಿನಲ್ಲಿ ನೆಮ್ಮದಿ ಕಾಣುವಿರಿ.
ಮೇಷ ರಾಶಿ - ಆತ್ಮವಿಶ್ವಾಸ ದುಪ್ಪಟ್ಟಾಗುವುದು. ವೃತ್ತಿ ಜೀವನದಲ್ಲಿ ಸಾಕಷ್ಟು ಅಭಿವೃದ್ಧಿ ಕಾಣುವಿರಿ. ಆದಾಯದಲ್ಲಿ ಹೆಚ್ಚಳವಾಗುವುದು. ಉದ್ಯೋಗದಲ್ಲಿ ಬಡ್ತಿ ಸಿಗುವುದು. ಕೌಟುಂಬಿಕ ಸಮಸ್ಯೆಗೆ ಪರಿಹಾರ ಪಡೆಯುವಿರಿ.
ಸೂಚನೆ: ಈ ಲೇಖನವು ಧಾರ್ಮಿಕ ಮಾಹಿತಿಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಇದನ್ನು ಖಚಿತಪಡಿಸುವುದಿಲ್ಲ.