Shani Margi: ದೀಪಾವಳಿಗೂ ಮುನ್ನ ಶನಿ ನೇರ ಸಂಚಾರ, ಈ 6 ರಾಶಿಯವರಿಗೆ ತಾಯಿ ಲಕ್ಷ್ಮಿ ಕೃಪೆ

Wed, 06 Sep 2023-8:16 am,

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಈ ವರ್ಷ ದೀಪಾವಳಿಗೂ ಮೊದಲೇ ಕೆಲವು ರಾಶಿಯವರ ಜೀವನದಲ್ಲಿ ಲಕ್ಷ್ಮಿ ಆಗಮನವಾಗಲಿದೆ. ವಾಸ್ತವವಾಗಿ, ದೀಪಾವಳಿಯೂ ಮುನ್ನ ಕುಂಭ ರಾಶಿಯಲ್ಲಿ ಶನಿ ದೇವನ ನೇರ ಸಂಚಾರ ಆಗಮನವಾಗಲಿದ್ದು ಈ ಸಮಯದಲ್ಲಿ ಕೆಲವು ರಾಶಿಯವರು ಅದೃಷ್ಟದ ಸಂಪೂರ್ಣ ಬೆಂಬಲವನ್ನು ಪಡೆಯಲಿದ್ದಾರೆ. ಮಾತ್ರವಲ್ಲ, ಆ ರಾಶಿಯವರಿಗೆ ಸಂಪತ್ತಿನ ದೇವತೆಯಾದ ಲಕ್ಷ್ಮಿಯ ಆಶೀರ್ವಾದವೂ ದೊರೆಯಲಿದೆ ಎಂದು ಹೇಳಲಾಗುತ್ತಿದೆ. ಆ ಅದೃಷ್ಟದ ರಾಶಿಗಳು ಯಾವುವು ಎಂದು ನೋಡೋಣ... 

ನವೆಂಬರ್ 04, 2023ರಂದು ಶನಿ ನೇರ ಸಂಚಾರದಿಂದ ಮೇಷ ರಾಶಿಯವರ ಜೀವನದಲ್ಲಿ ಮಂಗಳಕರ ಸಮಯ ಎಂದು ಹೇಳಬಹುದು. ಈ ಸಮಯದಲ್ಲಿ ತಾಯಿ ಲಕ್ಷ್ಮಿಯ ಆಶೀರ್ವಾದವೂ ಇವರೊಂದಿಗಿದ್ದು ವ್ಯಾಪಾರ-ವ್ಯವಹಾರದಲ್ಲಿ ಶುಭ ಫಲಗಳನ್ನು ಪಡೆಯಬಹುದು. ಆರೋಗ್ಯದ ದೃಷ್ಟಿಯಿಂದಲೂ ಸಮಯ ಉತ್ತಮವಾಗಿದೆ. 

ಮಾರ್ಗಿ ಶನಿಯು ವೃಷಭ ರಾಶಿಯವರ ಜೀವನದಲ್ಲಿಯೂ ತುಂಬಾ ಒಳ್ಳೆಯ ಸಮಯವನ್ನು ತರಲಿದ್ದಾನೆ. ಈ ಸಮಯದಲ್ಲಿ ಲಕ್ಷ್ಮಿ ಕೃಪೆಯಿಂದಾಗಿ ಈ ರಾಶಿಯವರು ಇಷ್ಟು ದಿನಗಳಿಂದ ಎದುರಿಸುತ್ತಿದ್ದ ಆರ್ಥಿಕ ಬಿಕ್ಕಟ್ಟಿನಿಂದ ಸುಧಾರಣೆ ಕಾಣಲಿದ್ದಾರೆ. 

ಮಾರ್ಗಿ ಶನಿಯು ಮಿಥುನ ರಾಶಿಯವರ ಜೀವನದಲ್ಲಿ ಹಣದ ಮಳೆಯನ್ನೇ ಸುರಿಸಲಿದ್ದಾನೆ. ಇದರಿಂದಾಗಿ ಹಣಕಾಸಿನ ಸ್ಥಿತಿ ಸುಧಾರಿಸಲಿದ್ದು ವ್ಯಾಪಾರ ಉದ್ಯೋಗದಲ್ಲಿಯೂ ಯಶಸ್ಸನ್ನು ಗಳಿಸುವಿರಿ. 

ಶನಿಯ ನೇರ ಸಂಚಾರದಿಂದಾಗಿ ಕರ್ಕಾಟಕ ರಾಶಿಯವರು ಉದ್ಯೋಗ ಸ್ಥಳದಲ್ಲಿ ಹೊಸ ಹೊಸ ಅವಕಾಶಗಳನ್ನು ಪಡೆಯುವರು. ಜೊತೆಗೆ ಹಣಕಾಸಿನ ಹೊಸ ಮೂಲಗಳು ಸೃಷ್ಟಿಯಾಗಲಿದ್ದು  ಆರ್ಥಿಕ ಸ್ಥಿತಿಯು ಸುಧಾರಿಸಲಿದೆ. 

ಶನಿ ನೇರ ನಡೆಯ ಪ್ರಭಾವದಿಂದಾಗಿ ಕನ್ಯಾ ರಾಶಿಯ ಜನರು ಅಧ್ಯಯನ ಕ್ಷೇತ್ರದಲ್ಲಿ ಪ್ರಗತಿಯನ್ನು ಕಾಣಲಿದ್ದಾರೆ. ನೀವು ಹೊಸ ಉದ್ಯೋಗಕ್ಕಾಗಿ ಪ್ರಯತ್ನಿಸುತ್ತಿದ್ದರೆ ಈ ಸಮಯದಲ್ಲಿ ಉತ್ತಮ ಅವಕಾಶಗಳು ಲಭ್ಯವಾಗಲಿವೆ. 

ಶನಿ ದೇವನ ಸಂಚಾರದಲ್ಲಿನ ಬದಲಾವಣೆಯು ಧನು ರಾಶಿಯವರಿಗೆ ಅತ್ಯಂತ ಧನಾತ್ಮಕವಾಗಿರುತ್ತದೆ. ಈ ಸಮಯದಲ್ಲಿ ನಿಮ್ಮ ಅದೃಷ್ಟವೇ ಬದಲಾಗಲಿದ್ದು ಹಣಕಾಸಿನ ಲಾಭಗಳನ್ನು ಪಡೆಯಲಿದ್ದೀರಿ. 

ಸೂಚನೆ: ಇಲ್ಲಿ ನೀಡಲಾದ ಎಲ್ಲಾ ಮಾಹಿತಿಯು ಸಾಮಾಜಿಕ ಮತ್ತು ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ. 

ZEENEWS TRENDING STORIES

By continuing to use the site, you agree to the use of cookies. You can find out more by Tapping this link