Shani Shadashtak:ಎಚ್ಚರ! ಶನಿ ಹಾಗೂ ಮಂಗಳರಿಂದ ಅಪಾಯಕಾರಿ ಷಡಾಷ್ಟಕ ಯೋಗ ನಿರ್ಮಾಣ, ಈ ರಾಶಿಯವರಿಗೆ ಧನಹಾನಿ ಸಾಧ್ಯತೆ!
ಮಿಥುನ ರಾಶಿ: ಶನಿಯ ಈ ಷಡಾಷ್ಟಕ ಯೋಗ ಮಿಥುನ ರಾಶಿಯ ಜನರ ಪಾಲಿಗೆ ಅತ್ಯಂತ ಪ್ರತಿಕೂಲ ಸಾಬೀತಾಗಲಿದೆ. ಏಕೆಂದರೆ ನಿಮ್ಮ ಗೋಚರ ಜಾತಕದ ದ್ವಿತೀಯ ಭಾವದಲ್ಲಿ ಮಂಗಳನ ಗೋಚರ ನೆರವೇರುತ್ತಿದ್ದು, ಇದರಿಂದ ನಿಮಗೆ ಧನಹಾನಿ ಉಂಟಾಗುವ ಸಾಧ್ಯತೆ ಇದೆ. ಈ ಅವಧಿಯಲ್ಲಿ ಜಗಳ ಅಥವಾ ವ್ಯಾಜ್ಯಗಳು ಸಂಭವಿಸುವ ಸಾಧ್ಯತೆ ಇದೆ. ಹೀಗಾಗಿ ಮಾತಿನ ಮೇಲೆ ನಿಯಂತ್ರಣವಿರಲಿ. ಇದಲ್ಲದೆ ಹಣಕಾಸಿನ ಹೂಡಿಕೆಗೂ ಸಂಬಂಧಿಸಿದಂತೆ ಎಚ್ಚರಿಕೆವಹಿಸುವ ಅವಶ್ಯಕತೆ ಇದೆ. ಕುಟುಂಬದಲ್ಲಿ ಕಲಹ ಉಂಟಾಗುವ ಸಾಧ್ಯತೆ ಇದೆ. ಆಸ್ತಿ-ಪಾಸ್ತಿಗೆ ಸಂಬಂಧಿಸಿಯಂತೆ ವಿವಾದ ಹುಟ್ಟಿಕೊಳ್ಳುವ ಸಾಧ್ಯತೆ ಇದೆ. ಕಾರ್ಯಸ್ಥಳದಲ್ಲಿ ನಿಮಗೆ ಸಂಕಷ್ಟಗಳು ಎದುರಾಗುವ ಸಾಧ್ಯತೆ ಇದೆ.
ಸಿಂಹ ರಾಶಿ: ಶನಿಯ ಈ ಷಡಾಷ್ಟಕ ಯೋಗ ನಿಮ್ಮ ಪಾಲಿಗೆ ಹಾನಿಕಾರಕ ಸಾಬೀಟಾಗುವ ಸಾಧ್ಯತೆ ಇದೆ. ಏಕೆಂದರೆ ಮಂಗಳ ನಿಮ್ಮ ಗೋಚರ ಜಾತಕದ ದ್ವಾದಶ ಭಾವದಲ್ಲಿ ಸಂಚರಿಸಲಿದ್ದಾನೆ. ಹೀಗಾಗಿ ಈ ಅವಧಿಯಲ್ಲಿ ನಿಮ್ಮ ಖರ್ಚು ಹೆಚ್ಚಾಗುವ ಸಾಧ್ಯತೆ ಇದೆ. ಕೋರ್ಟ್-ಕಚೇರಿ ಕೆಲಸಗಳಲ್ಲಿ ನಿಮಗೆ ಅಡೆತಡೆಗಳು ಎದುರಾಗುವ ಸಾಧ್ಯತೆ ಇದೆ. ಕಾರಣವಿಲ್ಲದೆ ಅಪಕೀರ್ತಿ ಎದುರಾಗುವ ಸಾಧ್ಯತೆ ಇದೆ. ಅನಾವಶ್ಯಕ ಯಾತ್ರೆಗಳ ಸಾಧ್ಯತೆ ಇದ್ದು, ಆದಷ್ಟು ತಪ್ಪಿಸಲು ಯತ್ನಿಸಿ. ಈ ಅವಧಿಯಲ್ಲಿ ನಿಮ್ಮ ಮಾನಸಿಕ ಒತ್ತಡ ಹೆಚ್ಚಾಗುವ ಸಾಧ್ಯತೆ ಇದ್ದು, ತಾಯಿಯ ಆರೋಗ್ಯದ ಬಗ್ಗೆ ವಿಶೇಷ ಕಾಳಜಿವಹಿಸಿ. ಇದಲ್ಲದೆ ನೀವು ನಿಮ್ಮ ಆರೋಗ್ಯದ ಬಗ್ಗೆಯೂ ಕೂಡ ಕಾಳಜಿವಹಿಸಿ.
ಧನು ರಾಶಿ: ಷಡಾಷ್ಟಕ ಯೋಗ ನಿಮ್ಮ ಪಾಲಿಗೂ ಕೂಡ ಅನಾನುಕೂಲಕ ಸಾಬೀತಾಗುವ ಸಾಧ್ಯತೆ ಇದೆ. ಮಂಗಳ ನಿಮ್ಮ ಗೋಚರ ಜಾತಕದ ಅಷ್ಟಮ ಭಾವದಲ್ಲಿ ಸಂಚರಿಸಲಿದ್ದಾನೆ. ಹೀಗಾಗಿ ಈ ಅವಧಿಯಲ್ಲಿ ಗುಪ್ತ ಶತ್ರುಗಳಿಂದ ಸಾಕಷ್ಟು ಎಚ್ಚರಿಕೆವಹಿಸಿ. ಆರೋಗ್ಯಕ್ಕೆ ಸಂಬಂಧಿಸಿದ ಸಮಸ್ಯೆಗಳು ತಲೆದೂರುವ ಸಾಧ್ಯತೆ ಇದೆ. ರಕ್ತಕ್ಕೆ ಸಂಬಂಧಿಸಿದ ಕಾಯಿಲೆಗಳು ಇದ್ದರೆ ವೈದ್ಯರ ಸಂಪರ್ಕದಲ್ಲಿರಿ. ವಾಹನ ನಡೆಸುವಾಗ ಎಚ್ಚರಿಕೆವಹಿಸಿ, ಅಪಘಾತ ಸಂಭವಿಸುವ ಸಾಧ್ಯತೆ ಇದೆ. ಇನ್ನೊಂದೆಡೆ ಬಾಳಸಂಗಾತಿಯ ಜೊತೆಗೆ ವಿರಸ ಉಂಟಾಗುವ ಸಾಧ್ಯತೆ ಇದೆ. (ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಖಚಿತಪಡಿಸುವುದಿಲ್ಲ. ಅನುಸರಿಸುವ ಮುನ್ನ ವಿಷಯ ತಜ್ಞರ ಸಲಹೆ ಪಡೆದುಕೊಳ್ಳಲು ಮರೆಯಬೇಡಿ)