Powerful Shani In Aquarius: ಶೀಘ್ರದಲ್ಲೇ ಸ್ವರಾಶಿಯಲ್ಲಿ ಶನಿಯ ಉಚ್ಛ ಭಾವ ಸಂಚಾರ ಆರಂಭ, 4 ರಾಶಿಗಳ ಜನರಿಗೆ ಅದೃಷ್ಟವೋ ಅದೃಷ್ಟ!
ವೃಷಭ ರಾಶಿ-ಶನಿದೇವನ ಈ ಪವರ್ಫುಲ್ ಭ್ರಮಣೆ ವೃಷಭ ರಾಶಿಯವರಿಗೆ ಆರ್ಥಿಕವಾಗಿ ಮಂಗಳಕರ ಸಾಬೀತಾಗಲಿದೆ. ಏಕೆಂದರೆ ಶನಿದೇವನು ನಿಮ್ಮ ಸಂಕ್ರಮಣ ಜಾತಕದಲ್ಲಿ ಶಶ ಮತ್ತು ಕೇಂದ್ರ ತ್ರಿಕೋನ ರಾಜಯೋಗವನ್ನು ಸೃಷ್ಟಿಸಿದ್ದಾನೆ. ಅದಕ್ಕಾಗಿಯೇ ಈ ಅವಧಿಯಲ್ಲಿ ನಿಮಗೆ ತಂದೆಯ ಸಾನಿಧ್ಯ ಪ್ರಾಪ್ತಿಯಾಗಲಿದೆ. ನಿಮ್ಮ ಜೀವನೋಪಾಯದ ಸಂಪನ್ಮೂಲಗಳು ಹೆಚ್ಚಾಗಳಿವೆ. ಈ ಅವಧಿಯಲ್ಲಿ ನೀವು ಗೌರವ ಮತ್ತು ಪ್ರತಿಷ್ಠೆಯನ್ನು ಪಡೆಯಬಹುದು. ಅಲ್ಲದೆ, ಉದ್ಯೋಗಿಗಳಿಗೆ ಬಡ್ತಿ ಸಿಗುವ ಸಾಧ್ಯತೆ ಇದೆ. ಮತ್ತೊಂದೆಡೆ, ನೀವು ವ್ಯಾಪಾರ ಮಾಡುತ್ತಿದ್ದರೆ, ನಿಮಗೆ ಭಾರಿ ಲಾಭದ ಸಾಧ್ಯತೆಗಳು ಗೋಚರಿಸುತ್ತಿವೆ. ವಿದೇಶಕ್ಕೆ ಪ್ರಯಾಣದ ಸಾಧ್ಯತೆಯೂ ಇದೆ. ಈ ಅವಧಿಯಲ್ಲಿ ನೀವು ಸರ್ಕಾರದಿಂದ ಪ್ರಯೋಜನ ಪಡೆಯಬಹುದು.
ತುಲಾ ರಾಶಿ-ನಿಮಗೆ, ಶನಿದೇವನ ಈ ಉಚ್ಛ ಭಾವದ ಈ ಭ್ರಮಣ ಸಾಕಷ್ಟು ಪ್ರಯೋಜನಗಳನ್ನು ದಯಪಾಲಿಸಲಿದೆ. ಏಕೆಂದರೆ ಶನಿದೇವನು ನಿಮ್ಮ ಸಂಕ್ರಮಣ ಜಾತಕದಲ್ಲಿ ಕೇಂದ್ರ ತ್ರಿಕೋಣ ರಾಜಯೋಗವನ್ನು ಸೃಷ್ಟಿಸಿದ್ದಾನೆ. ಹೀಗಾಗಿ ಈ ಸಮಯವು ನಿಮ್ಮ ಪಾಲಿಗೆ ಅತ್ಯುತ್ತಮವಾಗಿರಲಿದೆ. ಈ ಸಮಯವು ವಿಶೇಷವಾಗಿ ವೃತ್ತಿಪರರಿಗೆ, ಆಧ್ಯಾತ್ಮಿಕ ಜೀವಿಗಳಿಗೆ, ಚಿಂತಕರಿಗೆ, ಸಂಶೋಚಕರಿಗೆ, ವೈದ್ಯರು ಮತ್ತು ವಿಜ್ಞಾನಿಗಳಿಗೆ ಸಾಕಷ್ಟು ಅನುಕೂಲಕರವಾಗಿದೆ. ಷೇರು ಮಾರುಕಟ್ಟೆ, ಬೆಟ್ಟಿಂಗ್ ಮತ್ತು ಲಾಟರಿಯಲ್ಲಿ ಹಣವನ್ನು ಹೂಡಿಕೆ ಮಾಡಲು ಬಯಸುವವರಿಗೆ, ಸಮಯ ಅತ್ಯುತ್ತಮವಾಗಿದೆ. ಅಲ್ಲದೆ, ಈ ಸಮಯದಲ್ಲಿ ನೀವು ಪ್ರೇಮ ವ್ಯವಹಾರಗಳಲ್ಲಿ ನೀವು ಯಶಸ್ಸನ್ನು ಪಡೆಯಬಹುದು. ಇದಲ್ಲದೆ ಸಂತಾನ ಪ್ರಾಪ್ತಿಗಾಗಿ ಹಂಬಲಿಸುತ್ತಿರುವವರಿಗೆ ಈ ಸಮಯದಲ್ಲಿ ಸಂತಾನ ಭಾಗ್ಯ ಪ್ರಾಪ್ತಿಯಾಗುವ ಸಾಧ್ಯತೆ ಇದೆ..
ಮಕರ ರಾಶಿ-ಶನಿದೇವನ ಪವರ್ಫುಲ್ ಸಂಚಾರ ಮಕರ ರಾಶಿಯವರಿಗೆ ಮಂಗಳಕರವೆಂದು ಸಾಬೀತಾಗಲಿದೆ. ಏಕೆಂದರೆ ನಿಮ್ಮ ಹಣಕಾಸಿನ ಭಾವದಲ್ಲಿ ಶನಿದೇವನ ಬಲವು ಉತ್ತಮವಾಗಿರುತ್ತದೆ. ಹೀಗಾಗಿ ಇದು ನಿಮ್ಮನ್ನು ಆರ್ಥಿಕವಾಗಿ ಬೆಂಬಲಿಸುತ್ತದೆ. ಇದರೊಂದಿಗೆ, ನೀವು ಎಲ್ಲಾ ರೀತಿಯ ಮಾನಸಿಕ ಒತ್ತಡದಿಂದ ಮುಕ್ತರಾಗುವಿರಿ. ಆತ್ಮವಿಶ್ವಾಸ ಹೆಚ್ಚಾಗಲಿದೆ. ಈ ಸಮಯದಲ್ಲಿ ನೀವು ನಿಮ್ಮ ಶ್ರಮದ ಫಲವನ್ನು ಪಡೆಯುತ್ತೀರಿ. ಇದರೊಂದಿಗೆ ಹೂಡಿಕೆಯಿಂದ ಲಾಭವೂ ಇರುತ್ತದೆ. ಕಬ್ಬಿಣ, ತೈಲ, ಪೆಟ್ರೋಲಿಯಂ ಉತ್ಪನ್ನಗಳಿಗೆ ಸಂಬಂಧಿಸಿದ ವ್ಯವಹಾರವನ್ನು ಹೊಂದಿರುವ ಜನರು, ಉತ್ತಮ ಲಾಭವನ್ನು ಪಡೆಯಬಹುದು. ಅಲ್ಲದೆ, ಮುಂದಿನ 3 ತಿಂಗಳುಗಳು ನಿಮಗೆ ಅದ್ಭುತವಾಗಿರುತ್ತವೆ. ನೌಕರರಿಗೆ ಬಡ್ತಿ ಮತ್ತು ಇನ್ಕ್ರಿಮೆಂಟ್ ಭಾಗ್ಯ ಕೂಡ ಇರಲಿದೆ.
ಕುಂಭ ರಾಶಿ-ಶನಿದೇವನ ಈ ಪ್ರಬಲ ಸಂಚಾರ ನಿಮ್ಮ ಪಾಲಿಗೆ ಅತ್ಯಂತ ಶುಭ ಫಲಪ್ರದ ಸಾಬೀತಾಗಲಿದೆ. ಏಕೆಂದರೆ ಶನಿದೇವನು ನಿಮ್ಮ ಸಂಕ್ರಮಣ ಜಾತಕದಲ್ಲಿ ಶಶ ಮಹಾಪುರುಷ ರಾಜಯೋಗವನ್ನು ಸೃಷ್ಟಿಸಿದ್ದಾನೆ. ಹೀಗಾಗಿ ನೀವು ಈ ಸಮಯದಲ್ಲಿ ಸಾಕಷ್ಟು ಘನತೆ ಗೌರವವನ್ನು ಪಡೆಯಬಹುದು. ಆದರೆ ವೈವಾಹಿಕ ಜೀವನದಲ್ಲಿ ಕೆಲವು ಸಮಸ್ಯೆಗಳಿರಬಹುದು. ಮತ್ತೊಂದೆಡೆ, ನೀವು ಕಮಿಷನ್ ಏಜೆಂಟ್, ಕನ್ಸಲ್ಟೆನ್ಸಿ ಆಗಿದ್ದರೆ ನೀವು ಉತ್ತಮ ಲಾಭವನ್ನು ನಿರೀಕ್ಸಿಸಬಹುದು. ಅಲ್ಲದೆ, ನಿಮ್ಮ ವ್ಯವಹಾರವು ಶನಿ ಗ್ರಹಕ್ಕೆ ಸಂಬಂಧಿಸಿದ್ದರೆ. ಆದ್ದರಿಂದ ನೀವು ಪ್ರಯೋಜನ ಪಡೆಯಬಹುದು. ಮತ್ತೊಂದೆಡೆ, ಅವಿವಾಹಿತರು ಮದುವೆಯ ಪ್ರಸ್ತಾಪವನ್ನು ಪಡೆಯಬಹುದು. (ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಠಿಕರಿಸುವುದಿಲ್ಲ)